ಇಂದಿನ ಕರುವೇ ನಾಳಿನ ಹಸು | ಕರುಗೆ ತಾಯಿ ಹಾಲು ಕೊಟ್ಟು ಪೋಷಿಸಿ ಉತ್ತಮ ಹಸು ಪಡೆಯಿರಿ |

March 21, 2024
7:39 AM
ಉತ್ತಮವಾದ ಕರುವನ್ನು ಬೆಳೆಸುವುದರ ಬಗ್ಗೆ ಡಾ.ಶ್ರೀಧರ ಬಿ ಎನ್‌ ಅವರು ಬರೆದಿದ್ದಾರೆ.

ಇಂದಿನ ಮಗುವೇ(Child) ನಾಳಿನ ಪ್ರಜೆ(Citizen), ಹಾಗೆಯೇ ಇಂದಿನ ಕರುವೇ(Calf) ನಾಳಿನ ಹಸು(Cow). ಹಾಗಿದ್ದರೆ ಉತ್ತಮ ಹಾಲು(Milk) ಹಿಂಡುವ ಹಸು ಪಡೆಯಬೇಕಿದ್ದರೆ ಕರುವನ್ನು ವೈಜ್ಞಾನಿಕವಾಗಿ ಸಾಕಣೆ ಮಾಡಬೇಕು. ಒಂದಿಷ್ಟು ಮೂಲ ಅಂಶಗಳತ್ತ ಗಮನಿಸೋಣ. ಪ್ರತಿಯೊಂದು ನವಜಾತ ಜೀವಕ್ಕೂ ತಾಯಿಯಿಂದ ಪೋಷಣೆ(Mother care) ಬೇಕೇ ಬೇಕು. ಸಸ್ತನಿ(Mammal) ಪ್ರಾಣಿಗಳಲ್ಲಿ ತಾಯಿಯ ಹಾಲೇ ನವಜಾತ ಪ್ರಾಣಿಗೆ ಸರ್ವಶ್ರೇಷ್ಟ ಆಹಾರ(Food). ಹಾಗಿದ್ದರೆ ತಾಯಿಯ ಹಾಲಿನ ಮೇಲೆ ನವಜಾತ ಪ್ರಾಣಿಗೆ ಮೊದಲ ಹಕ್ಕು.

Advertisement
Advertisement
Advertisement
Advertisement

ಆಕಳ ಹಾಲಿನ ಮೇಲೆಯೂ ಸಹ ಮೊದಲ ಹಕ್ಕು. ಋಷಿಮುನಿಗಳ ಕಾಲದಲ್ಲಿ ಆಕಳುಗಳ ಕರುಗಳು ಸಂತೃಪ್ತಿಯಾಗಿ ಹೊಟ್ಟೆ ತುಂಬಾ ಹಾಲು ಕುಡಿದು ಅವುಗಳ ಕಟವಾಯಿಯಲ್ಲಿ ಹಾಲು ಸುರಿದರೆ ನಂತರ ಉಳಿದ ಹಾಲನ್ನು ಮನುಷ್ಯರ ಉಪಯೋಗಕ್ಕೆ ಬಳಸಿಕೊಳ್ಳುತ್ತಿದ್ದರಂತೆ. ಆದರೆ ಈ ಕಾಲದಲ್ಲಿ ಕರುವಿನ ಪೋಷಣೆಗೆಂದೇ ಇರುವ ಹಾಲನ್ನು ಹಿಂಡಿಕೊಳ್ಳುವಾಗ ಕರುವಿಗೆ ಅವಶ್ಯವಿರುವ ಹಾಲನ್ನಾದರೂ ಅದಕ್ಕೆ ಕೊಡುವುದು ಅತ್ಯಂತ ಅವಶ್ಯ. ಇದು ವೈಜ್ಞಾನಿಕವಾಗಿಯೂ ಸಹ ಅತ್ಯಂತ ಅವಶ್ಯ.

Advertisement

ಒಂದು ಮಿಶ್ರ ತಳಿಯ ಕರು ಹುಟ್ಟುವಾಗ ಸುಮಾರು 35-40 ಕೆಜಿ ತೂಕವನ್ನು ಹೊಂದಿದ್ದು ಪ್ರತಿ ದಿನ ಕರು ಸುಮಾರು 100-500 ಗ್ರಾಂನಷ್ಟು ತೂಕದಲ್ಲಿ ವರ್ಧನೆಯನ್ನು ಹೊಂದುತ್ತದೆ. ಇದಕ್ಕೆ ತಕ್ಕಂತೆ ಹಾಲಿನ ಪ್ರಮಾಣವನ್ನು ಸಹ ಹೆಚ್ಚಿಸುವುದು ಸಹ ಬಹಳ ಮುಖ್ಯ. ಕರು ಹುಟ್ಟಿದ ಕೂಡಲೇ ಅಷ್ಟೂ ಗಿಣ್ಣದ ಹಾಲನ್ನು ಕರುವಿಗೆ ಕುಡಿಸಬೇಕು. ಹಾಲಿನಲ್ಲಿರುವ ರೋಗನಿರೋಧಕ ಕಣಗಳು ಕರುವಿನ ಕರುಳನ್ನು ಸೇರಿ ಅಲ್ಲಿಂದ ಹೀರಿಕೊಳ್ಳಲ್ಪಟ್ಟು ಅದರ ಶರೀರವನ್ನು ಸೇರಿ ರೋಗತಡೆದುಕೊಳ್ಳುವ ಸಾಮರ್ಥ್ಯ ನೀಡುತ್ತವೆ. ಇದು ಕರು ಹಾಕಿದ ಒಂದು ಗಂಟೆಯ ಒಳಗೇ ಆಗಬೇಕು. ತದನಂತರವಾದರೆ ಕರುವಿನ ಕರುಳಿನಲ್ಲಿರುವ ರಂದ್ರಗಳು ಮುಚ್ಚಲ್ಪಟ್ಟು ರೋಗನಿರೋಧಕ ಕಣಗಳು ಹೀರಲ್ಪಡುವುದಿಲ್ಲ.

ಇದಾದ ಮೇಲೆ ನಂತರದ ಮೂರು ತಿಂಗಳವರೆಗೂ ಸಹ ಕರುವಿನ ಬೆಳವಣಿಗೆ ಹಾಲಿನ ಮೇಲೆಯೇ ಅವಲಂಭಿತವಾಗಿರುತ್ತದೆ. ಪ್ರತಿ ದಿನ ಕರುವಿನ ತೂಕದ ಶೇ 10ರಷ್ಟು ಹಾಲು ಮೂರು ತಿಂಗಳವರೆಗೂ ನೀಡಿದಲ್ಲಿ ನಳನಳಿಸುವ ಗುಂಡಗೆ ದುಂಡಗೇ ಇರುವ ಕರುವನ್ನು ಪಡೆಯಬಹುದು.

Advertisement

ಈ ಸಮಯದಲ್ಲಿ ಹಾಲು ಕರುವಿನದ್ದೇ ಮೊದಲ ಹಕ್ಕು ಎಂದು ತಿಳಿದು ಅದಕ್ಕೆ ನೀಡಿದರೆ ಉತ್ತಮ ಬೆಳವಣಿಗೆ ಕಾಣುತ್ತದೆ. ಮಿಶ್ರತಳಿಯ ರಾಸುಗಳು 10-15 ಲೀಟರ್ ಹಾಲು ನೀಡಿದಾಗ ಇದರಲ್ಲಿ 3.5-4 ಲೀಟರಿನಷ್ಟು ಹಾಲನ್ನು ಪ್ರತಿ ದಿನ ಕರುವಿಗೆ ನೀಡಲೇಬೇಕು. ಈ ಅವಧಿಯಲ್ಲಿ ಕರುವಿನ ಬೆಳವಣಿಗೆ ಬಹಳ ವೇಗವಾಗಿ ನಡೆಯುವುದರಿಂದ ಎಲ್ಲ ರೂಪದಲ್ಲಿಯೂ ಪರಿಪೂರ್ಣವಾದ ಹಾಲಿಗೆ ಯಾವುದೇ ಸರಿ ಸಾಠಿಯಿಲ್ಲ.ಕರುವಿಗೆ ಎರಡು ವಾರದ ವಯಸ್ಸಿನಲ್ಲಿ ಅದಕ್ಕೆ ಉತ್ತಮ ಗುಣ ಮಟ್ಟದ ಒಣ ಮತ್ತು ಹಸಿ ಹುಲ್ಲನ್ನು ನೀಡುತ್ತಾ ಕ್ರಮೇಣ ಜಾಸ್ತಿ ಮಾಡಬೇಕು. ಅಗಾಗ್ಗ ಜಂತುನಾಶಕ ಮತ್ತು ಉಣ್ಣೆನಾಶಕ ಔಷಧಿಯನ್ನು ಸಹ ಬಳಸಬೇಕು.

ಈ ಅವಧಿಯಲ್ಲಿ ಹಾಲಿನ ಬದಲಾಗಿ ಅದರ ತಾಯಿಗೆ ನೀಡುವ ಹಿಂಡಿಯನ್ನು ನೀಡಿದರೆ ಅದರಲ್ಲಿರುವ ಪೌಷ್ಟಿಕಾಂಶಗಳು ಬೆಳೆಯುವ ಕರುವಿನ ಅವಶ್ಯಕತೆಯನ್ನು ಪೂರೈಸಲು ವಿಫಲವಾಗಿ ಕರು ಬಡಕಲಾಗಿ ಅದರ ಹೊಟ್ಟೆ ಮಾತ್ರ ಬೆಳೆದು ಕೂದಲು ಉದ್ದವಾಗಿ ಬೆಳೆದು ಕರು ನಿಸ್ತೇಜವಾಗುತ್ತದೆ. ಒಮ್ಮೆ ಬೆಳವಣಿಗೆ ಕುಂಠಿತವಾದರೆ ಅದನ್ನು ಸರಿಪಡಿಸಲು ವರುಷಗಳೇ ಬೇಕು. ತೆಂಗಿನ ಗಿಡವನ್ನು ನೆಟ್ಟ ನಂತರ ಅದಕ್ಕೆ ಮಣ್ಣು, ಗೊಬ್ಬರ, ನೀರು ನೀಡಿ ಸದಾ ಪೋಷಿಸಿದರೆ ಅದು ಬಹುಬೇಗ ಸಿಹಿಯಾದ ಎಳೆನೀರನ್ನು ಕೊಡುವುದೋ ಹಾಗೆಯೇ ಕರುವಿಗೆ ಸರಿಯಾದ ಪೋಷಣೆ ಪಾಲನೆ ಮಾಡಿದರೆ ಅದು 14 ತಿಂಗಳಲ್ಲಿಯೇ ಬೆದೆಗೆ ಬಂದು ಅದಕ್ಕೆ 2 ವರ್ಷ ತುಂಬುವುದರ ಒಳಗೆ ಸುಂದರ ಕರುವಿಗೆ ಜನ್ಮಕೊಟ್ಟು ಹಸುವಾಗಿ ಪರಿವರ್ತನೆಗೊಳ್ಳುತ್ತದೆ.

Advertisement

3 ತಿಂಗಳ ನಂತರ ಹಾಲನ್ನು ಕ್ರಮೇಣ ಕಡಿಮೆ ಮಾಡುತ್ತಾ ಕರುವಿಗೆಂದೇ ಇರುವ ಹಿಂಡಿ ನೀಡಲು ಪ್ರಾರಂಭಿಸಬೇಕು. ಹೊಟ್ಟೆ ತುಂಬಾ ಒಣ ಹುಲ್ಲು ಮತ್ತು ಹಸಿಹುಲ್ಲನ್ನು ನೀಡಬೇಕು. ಇದರ ಜೊತೆಗೆ ಉತ್ತಮ ಖನಿಜ ಮಿಶ್ರಣ ಸಹ ಅವಶ್ಯ. ಹೀಗಿದ್ದಾಗ ಮಾತ್ರ 14 ತಿಂಗಳುಗಳಲ್ಲಿಯೇ ಸುಮಾರು 250 ಕಿಲೋ ತೂಕಕ್ಕೆ ಬರುವ ಮಣಕ ಗರ್ಭಧರಿಸಲು ಸಿದ್ಧವಾಗುವುದು. ಈ ರೀತಿ ಕರುವನ್ನು ಪೋಷಿಸಿ ಉತ್ತಮ ಹಸುವನ್ನು ಪಡೆದರೆ ಬಾಳು ಹಸನು.

ಬರಹ :
ಡಾ: ಎನ್.ಬಿ.ಶ್ರೀಧರ
Today's child is tomorrow's citizen, and today's calf is tomorrow's cow. If you want to get a cow that can squeeze good milk, then the calf should be reared scientifically. Let's look at some basic points. Every newborn needs mother care. Among mammals, the mother is the best food for the newborn animal. So the newborn animal has the first right on the mother's milk.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ
ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |
February 20, 2025
6:58 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror