ಈಗ ಚಾಲಿ ಅಡಿಕೆ ಧಾರಣೆ ಅಧಿಕೃತವಾಗಿ 500 ರೂಪಾಯಿಗೆ ತಲುಪಿದೆ. ಕ್ವಿಂಟಾಲ್‌ಗೆ 50,000 ರೂಪಾಯಿ. ಡಬಲ್ ಚೋಲ್ ಅಡಿಕೆಗೆ ಕೆಜಿಗೆ 530 ರೂಪಾಯಿಗೆ ಖರೀದಿ ಆರಂಭವಾಗಿದೆ. ಕ್ಯಾಂಪ್ಕೊ ಹಾಗೂ ಇತರ ಸಹಕಾರಿ ಸಂಸ್ಥೆಗಳು ಅಡಿಕೆ ಧಾರಣೆಯನ್ನು ಏರಿಕೆ ಮಾಡಿವೆ. ಇದೇ ವೇಳೆ ಹೊಸ ಚಾಲಿ ಅಡಿಕೆ ಅಂದರೆ ಈ ವರ್ಷದ ಅಡಿಕೆಗೆ ಕೂಡಾ 10 ರೂಪಾಯಿ ಏರಿಕೆ ಕಂಡಿದ್ದು 360 ರೂಪಾಯಿಗೆ ಖರೀದಿ ಆರಂಭವಾಗಿದೆ. ಇದರ ಬೆನ್ನಲ್ಲೇ ಕರಿಗೋಟು, ಸಿಪ್ಪೆಗೋಟು ಧಾರಣೆ ಕೂಡಾ ಏರಿಕೆಯಾಗಿದೆ.
ಕಳೆದ ಕೆಲವು ದಿನಗಳಿಂದ 490-495 ರೂಪಾಯಿಯಲ್ಲಿ ಇದ್ದ ಅಡಿಕೆ ಧಾರಣೆ ಈಗ ಅಧಿಕೃತವಾಗಿ 500 ರೂಪಾಯಿಗೆ ತಲುಪಿದೆ.ಕ್ಯಾಂಪ್ಕೊ ಹಾಗೂ ಮಾಸ್ ಮತ್ತು ಇತರ ಸಹಕಾರಿ ಸಂಸ್ಥೆಗಳು 500 ರೂಪಾಯಿಗೆ ಖರೀದಿ ಆರಂಭ ಮಾಡಿದೆ. ಇದೇ ವೇಳೆ ಖಾಸಗಿ ಮಾರುಕಟ್ಟೆ 508-510 ರೂಪಾಯಿವರೆಗೆ ಖರೀದಿ ಮಾಡುತ್ತಿವೆ. ಡಬಲ್ ಚೋಲ್ ಅಡಿಕೆ 530 ರೂಪಾಯಿಗೆ ಖರೀದಿ ಮಾಡುತ್ತಿವೆ. ಹೀಗಾಗಿ ಹಳೆ ಅಡಿಕೆ ಮತ್ತು ಡಬಲ್ ಚೋಲ್ ಅಡಿಕೆಯ ನಡುವಿನ ವ್ಯತ್ಯಾಸ 20 ರೂಪಾಯಿಗೆ ಬಂದಿದೆ. ಈಗ ಹೊಸ ಅಡಿಕೆ ಕೂಡಾ ಏರಿಕೆ ಕಾಣಲು ಆರಂಭವಾಗಿದೆ. ಈ ವರ್ಷ ಕೊಳೆರೋಗದಿಂದ ಅಡಿಕೆ ಕೊರತೆಯಾಗಿದೆ. ಈಗಾಗಲೇ ಗ್ರಾಮೀಣ ಭಾಗದ ಅಡಿಕೆ ವರ್ತಕರು ಕೆಲವರು ದಿನಕ್ಕೆ ಕ್ವಿಂಟಾಲ್ 3-4 ಕ್ವಿಂಟಾಲ್ ಕರಿಗೋಟು ಅಂದರೆ ರೋಗದಿಂದ ಬಾಧಿತವಾಗಿ ಬಿದ್ದ ಅಡಿಕೆಯನ್ನು ಖರೀದಿ ಮಾಡುತ್ತಿದ್ದಾರೆ. ಒಂದೆರಡು ವಾರದ ಬಳಿಕ ಅಡಿಕೆಯು ಮಾರುಕಟ್ಟೆಗೆ ಬರುವ ವೇಳೆ ಹೊಸ ಅಡಿಕೆ ಧಾರಣೆಯೂ 375 ರೂಪಾಯಿವರೆಗೆ ಏರಿಕೆಯ ನಿರೀಕ್ಷೆ ಇದೆ. ಈ ವರ್ಷ ಅಡಿಕೆಯ ಕೊರತೆ ಇರುವುದು ಖಚಿತ. ಈ ಕಾರಣದಿಂದ ಅಡಿಕೆ ಮಾರುಕಟ್ಟೆ ಏರಿಕೆಯಾಗುವ ಸಾಧ್ಯತೆಯೇ ಹೆಚ್ಚಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ಮತ್ತು ಹೊನ್ನಾಳಿ ಪ್ರದೇಶದಲ್ಲಿ ಅಡಿಕೆ ಧಾರಣೆ 66,000 ರೂಪಾಯಿ ಸಮೀಪಕ್ಕೆ ತಲುಪಿದೆ. ಇದೇ ವರ್ಷದ ಆರಂಭದಲ್ಲಿ ಅಂದರೆ ಜನವರಿ ಕೊನೆಯಲ್ಲಿ 52,000 ರೂಪಾಯಿ ಒಳಗಡೆ ಇದ್ದ ಕ್ವಿಂಟಾಲ್ ಅಡಿಕೆ ಧಾರಣೆ, ಫೆಬ್ರವರಿಯಲ್ಲಿ ಮತ್ತೆ 53,000 ರೂಪಾಯಿ ಗಡಿ ದಾಟಿತ್ತು. ಆಗಿನಿಂದಲೂ ಸತತ ಏರಿಕೆ ಆಗುತ್ತಲಿತ್ತು. ತೀರ್ಥಹಳ್ಳಿ, ಸೋರಬ ಮತ್ತು ಕೊಪ್ಪ ಅಡಿಕೆ ಮಾರುಕಟ್ಟೆಗಳಲ್ಲಿ ಹೊಸ ರಾಶಿ ಮತ್ತು ಹಳೆ ರಾಶಿ ಎರಡರ ದರಗಳಲ್ಲಿ ಸ್ಥಿರತೆ ಮತ್ತು ಸ್ವಲ್ಪ ಏರಿಕೆ ಕಂಡುಬಂದಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.

