ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಅನ್ನೊ ಮಾತಿದೆ. ಆದ್ರೆ ಈಗ ಮಾತ್ರ ಟೊಮೆಟೋ ಬೆಳೆಗಾರರ ಕಾಲ. ಯಾರಿಗೂ ಬೇಡದೆ ರಸ್ತೆಯಲ್ಲಿ ಚೆಲ್ಲುತ್ತಿದ್ದ ಟೋಮೇಟೋಗೆ ಬಂಗಾರದ ಬೆಲೆ ಬಂದಿದೆ. ಟೊಮೆಟೋ ಬೆಳೆದ ರೈತರ ಅದೃಷ್ಟ ಕುಲಾಯಿಸಿದೆ. ಇಲ್ಲೊಬ್ಬ ರೈತ ಕೇವಲ 45 ದಿನಗಳಲ್ಲಿ 4 ಕೋಟಿ ಲಾಭ ಮಾಡಿಕೊಂಡಿದ್ದಾರೆ. ಟೊಮೆಟೊ ಬೆಲೆ ಗಗನಕ್ಕೇರಿರುವುದರಿಂದ ಟೊಮೆಟೊ ರೈತ ಮುರಳಿ ಹಣೆಬರಹವೇ ಬದಲಾಗಿದೆ. ಇವರು ಹಾಕಿದ ಟೊಮೆಟೊ ಬೆಳೆ ಸಿರಿ-ಸಂಪತ್ತು ತಂದು ಕೊಟ್ಟಿದೆ.
ಕಳೆದೆರಡು ತಿಂಗಳಿಂದ ದೇಶಾದ್ಯಂತ ಟೊಮೆಟೊ ಬೆಲೆ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಕೊಂಚ ಇಳಿಕೆ ಕಾಣುತ್ತಿದ್ದ ಟೊಮೆಟೊ ಬೆಲೆ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಮತ್ತೆ ಏರಿಕೆಯಾಗುತ್ತಿದೆ. ಇದೇ ವೇಳೆ ಟೊಮೆಟೊ ಕೆಲವು ರೈತರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಿದೆ. ಟೊಮೆಟೊ ಬೆಲೆ ಗಗನಕ್ಕೇರಿರುವುದರಿಂದ ಟೊಮೆಟೊ ರೈತ ಮುರಳಿ ಹಣೆಬರಹವೇ ಬದಲಾಗಿದೆ. ಇವರು ಹಾಕಿದ ಟೊಮೆಟೊ ಬೆಳೆ ಸಿರಿ-ಸಂಪತ್ತು ತಂದು ಕೊಟ್ಟಿದೆ. ಚಿತ್ತೂರಿನ ಮದನಪಲ್ಲಿ ಟೊಮೆಟೊ ಮಾರುಕಟ್ಟೆ ಮಾತ್ರವಲ್ಲದೆ, ಕರ್ನಾಟಕದ ಕೋಲಾರ ಟೊಮೆಟೋ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭಗಳಿಸಿದ್ದಾರೆ. ಮುರಳಿ ದಂಪತಿ ಏಪ್ರಿಲ್ನಲ್ಲಿ ಕರಕಮಂಡಲ ಗ್ರಾಮದಲ್ಲಿ ಬರೋಬ್ಬರಿ 22 ಎಕರೆ ಜಮೀನಿನಲ್ಲಿ ಟೊಮೆಟೊ ಕೃಷಿ ಮಾಡಿದ್ದರು. ಕಳೆದ 45 ದಿನಗಳಲ್ಲಿ ಅವರು 40,000 ಟೊಮೆಟೊ ಬಾಕ್ಸ್ಗಳನ್ನು ಮಾರಾಟ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೈತ ಮುರುಳಿ, ಈ ಬಾರಿ ಹೆಚ್ಚಿನ ಆದಾಯ ಬಂದಿದ್ದರಿಂದ ಈ ಹಿಂದೆ ಇದೇ ಟೊಮೆಟೊ ಬೆಳೆಯಲು ಮಾಡಿದ್ದ 1.5 ಕೋಟಿ ರೂಪಾಯಿ ಸಾಲ ತೀರಿಸಲು ಸಾಧ್ಯವಾಗಿದೆ ಎಂದಿದ್ದಾರೆ. ಅಲ್ಲದೇ, ಉತ್ತಮ ವಿದ್ಯುತ್ ಪೂರೈಕೆಯಿಂದ ಈ ಬಾರಿ ಉತ್ತಮ ಇಳುವರಿ ಬಂದಿದೆ ಎಂದು ತಿಳಿಸಿದ್ದಾರೆ.
ಟೊಮೆಟೊ ಬೆಲೆ ಹೆಚ್ಚಳ ಆಗಿದ್ದು ನಮ್ಮ ಜೀವನಕ್ಕೆ ಹೊಸ ತಿರುವು ಕೊಟ್ಟಿದೆ. ಅದೃಷ್ಟ ಕೈ ಹಿಡಿದು ಕೋಟ್ಯಂತರ ರೂಪಾಯಿ ಆದಾಯ ಬಂದಿದೆ. ಟೊಮೆಟೊ ಇಷ್ಟು ದೊಡ್ಡ ಆದಾಯವನ್ನು ತಂದು ಕೊಡುತ್ತದೆ ಎಂದು ನಾನು ಊಹೆ ಕೂಡ ಮಾಡಿರಲಿಲ್ಲ ಎಂದು ಟೊಮೆಟೊ ಕೃಷಿಕ ಮುರಳಿ ತಿಳಿಸಿದ್ದಾರೆ. ಅಲ್ಲದೇ, ಸದ್ಯ ಬಂದಿರುವ ಆದಾಯವನ್ನು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಬಳಕೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
– ಅಂತರ್ಜಾಲ ಮಾಹಿತಿ
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…