ಟೊಮೆಟೋ….! ಇದೊಂದು ಅತ್ತ ಹಣ್ಣು ಅಲ್ಲ.. ಇತ್ತ ತರಕಾರಿಯೂ ಅಲ್ಲ. ಕೇವಲ ಹುಣಸೇ ಹಣ್ಣಿಗೆ ಪರಿಯಾಯವಾಗಿ ಸೃಷ್ಟಿಸಲಾಗಿದೆ. ಅಡುಗೆಯಲ್ಲಿ ನೈಸರ್ಗಿಕವಾಗಿ ರುಚಿ ಬೇಕೆಂದರೆ ಹುಣಸೆ ಹಣ್ಣನ್ನು ಮಾತ್ರ ಬಳಸಿ, ಟೊಮೆಟೋ ಕೇವಲ ರುಚಿ ನೀಡಬಲ್ಲದೇ ಹೊರತು ಆರೋಗ್ಯವನ್ನಲ್ಲ.. ಹೀಗಂತ ಹೇಳಿದವರು ಆಹಾರ ತಜ್ಞರೊಬ್ಬರು. ಆದರೆ ಈ ಟೊಮೆಟೋಗಾಗಿ ಕೊಲೆಯೇ ನಡೆದು ಹೋಯ್ತು….!
ಈಗ ಮಾತ್ರ ಟೊಮೆಟೊಗೆ ಕಾಲ ಬಂದಿದೆ ಅಷ್ಟೆ…! ಬೆಲೆ ಏರಿಕೆಯಾಗಿ ಜನ ಕಂಗಾಲಾದ್ರೆ, ಟೊಮೆಟೋ ಕಾಪಾಡಿಕೊಳ್ಳಲು ವ್ಯಾಪಾರಸ್ಥರು, ರೈತರು ಪರದಾಡುತ್ತಿದ್ದಾರೆ. ಕೆಲವೆಡೆ ಟೊಮೆಟೋ ಕಳ್ಳತನ ತಡೆಯಲು ಅಂಗಡಿಗೆ ಸಿಸಿಟಿವಿ ಹಾಕಿಸಿದ್ದು, ಇನ್ನೊಂದು ಕಡೆ ಕಾವಲುಗಾರರನ್ನು ನೇಮಿಸಿದ್ದು ಸುದ್ದಿಯಾಗಿತ್ತು. ಈ ಮಧ್ಯೆ ಕೊಯ್ಲಿಗೆ ಬಂದಿದ್ದ ಟನ್‌ಗಟ್ಟಲೆ ಟೊಮೆಟೋವನ್ನು ಗದ್ದೆಗೆ ನುಗ್ಗಿ ಕಳ್ಳರು ರಾತ್ರೋ ರಾತ್ರಿ ಕದ್ದು ಬೆಳಗಾರರ ಕುಟುಂಬ ಕಣ್ಣೀರು ಹಾಕುವಂತೆ ಮಾಡಿದ್ದರು. ಇದೀಗ ಮತ್ತೊಂದು ಘಟನೆ ನಡೆದಿದ್ದು, ಟೊಮೆಟೋ ಮಾರಾಟ ಮಾಡಿ 30 ಲಕ್ಷ ರೂ. ಗಳಿಸಿದ್ದ ರೈತನನ್ನು ದರೋಡೆಕೋರರು ಕೊಲೆ ಮಾಡಿದ ಘಟನೆ ನಡೆದಿದೆ.
ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ರೈತನನ್ನು ಅಡ್ಡಗಟ್ಟಿದ ದರೋಡೆಕೋರರು ಕೃತ್ಯ ಎಸಗಿದ್ದಾರೆ. ಮೃತ ವ್ಯಕ್ತಿಯನ್ನು ಮದನಪಲ್ಲಿಯ ರಾಜಶೇಖರ್ ರೆಡ್ಡಿ (62) ಎಂದು ಗುರುತಿಸಲಾಗಿದ್ದು, ಇವರು ಟೊಮೆಟೋ ಬೆಳೆದು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ವಾಪಸ್ ಆಗುತ್ತಿದ್ದರು.
ಜುಲೈ ಮೊದಲ ವಾರದಲ್ಲಿ ಬೆಲೆ ಏರಿಕೆಯಾಗುತ್ತಿದ್ದಾಗ ಸುಮಾರು 70 ಬಾಕ್ಸ್ ಟೊಮೆಟೋ ಮಾರಾಟ ಮಾಡಿ 30 ಲಕ್ಷ ರೂ. ಗಳಿಸಿದ್ದರು ಎಂದು ತಿಳಿದು ಬಂದಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಕೊಲೆಯಲ್ಲಿ ದರೋಡೆಕೋರರ ಜೊತೆಗೆ ಕೆಲವು ಉದ್ಯಮಿಗಳು ಭಾಗಿಯಾಗಿದ್ದಾರೆ ಎಂದು ಕುಟುಂಬ ಸದಸ್ಯರು ಶಂಕಿಸಿದ್ದಾರೆ.
(Source : net)
2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…
ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು…
ಸುಳ್ಯ ತಾಲೂಕಿನ ಮಲೆನಾಡು ಭಾಗದಲ್ಲಿ ಎರಡು ದಿನಗಳ ವಿರಾಮದ ಬಳಿಕ ಮತ್ತೆ ಭಾರೀ…
ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…
ವಿದೇಶದಿಂದ ಕಳಪೆ ಅಡಿಕೆ ಆಮದು ನಿಯಂತ್ರಿಸಿ ದೇಶೀಯ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸಂಸದ…
ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…