ಹಲವು ದಿನಗಳಿಂದ ಟೊಮೆಟೋ ಖರೀದಿಗೆ ಹಿಂದೇಟು ಹಾಕುತ್ತಿದ್ದ ಗ್ರಾಹಕರಿಗೆ ಇದೀಗ ಕೊಂಚ ನಿರಾಳವಾಗಿದೆ. ಗಗನಕ್ಕೇರಿದ್ದ ಟೊಮೆಟೊ ಬೆಲೆ ಈಗ ಕೊಂಚ ಕಡಿಮೆಯಾಗುತ್ತಿರುವುದು ಸಮಾಧಾನ ತಂದಿದೆ.ಜೂನ್ ಮತ್ತು ಜುಲೈ ತಿಂಗಳಲ್ಲಿ ಟೊಮೆಟೊ ಬೆಲೆ ಸಾಮಾನ್ಯ ಜನರನ್ನು ಬೆಚ್ಚಿ ಬೀಳಿಸಿತ್ತು. ಒಂದು ಹಂತದಲ್ಲಿ ಟೊಮೆಟೊ ಬೆಲೆ 250 ದಾಟಿತ್ತು. ಹಲವೆಡೆ ಟೊಮೆಟೊ 100 ರೂಪಾಯಿಗೆ ಹೆಚ್ಚು ಮಾರಾಟವಾಯಿತು. ಇದೀಗ ಹೈದರಾಬಾದ್ ಸೇರಿದಂತೆ ಕೆಲ ಮಾರುಕಟ್ಟೆಗಳಲ್ಲಿ 60 ರಿಂದ 70 ರೂ ಗೆ ಟೊಮೆಟೋ ಮಾರಾಟವಾಗುತ್ತಿದೆ.
ಆದರೆ ಟೊಮೆಟೊ ಬೆಲೆ ಅಸಾಧಾರಣವಾಗಿ ಕುಸಿಯುತ್ತಿದೆ. ಸದ್ಯ ಹೈದರಾಬಾದ್ನ ರೈತ ಬಜಾರ್ ಮಾರುಕಟ್ಟೆ ಪ್ರತಿ ಕಿಲೋ ಟೊಮೆಟೊಗೆ 63 ರೂಪಾಯಿಗೆ ನಿಗದಿ ಮಾಡಿದೆ. ಟೊಮೆಟೊ ಅಪಾರ ಪ್ರಮಾಣದಲ್ಲಿ ಬರುತ್ತಿರುವುದೇ ಇದಕ್ಕೆ ಕಾರಣ. ಟೊಮೆಟೊ ಪೂರೈಕೆ ಹೆಚ್ಚಳದಿಂದ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಟೊಮೆಟೊ ಬರುತ್ತಿದೆ. ಪೂರೈಕೆ ಹೆಚ್ಚಿರುವುದರಿಂದ ಬೆಲೆ ಕುಸಿಯುತ್ತಿದೆ ಎಂದು ತಿಳಿಸಲಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಈ ತಿಂಗಳಾಂತ್ಯಕ್ಕೆ ಒಂದು ಕಿಲೋ ಟೊಮೆಟೊ ಬೆಲೆ 50 ರೂ.ಗೆ ತಲುಪಲಿದೆ ಎಂದು ಮಾರುಕಟ್ಟೆ ಮೂಲಗಳು ಭವಿಷ್ಯ ನುಡಿದಿವೆ. ಹೀಗಾದರೆ ಜನ ಸಾಮಾನ್ಯರಿಗೆ ದೊಡ್ಡ ನೆಮ್ಮದಿ ಸಿಗಲಿದೆ.
ತಮಿಳುನಾಡಿನಲ್ಲೂ ಇದೇ ಪರಿಸ್ಥಿತಿ. ಕಳೆದ ಎರಡು ತಿಂಗಳಿಂದ ಗಗನಕ್ಕೇರಿದ್ದ ಟೊಮೆಟೊ ಬೆಲೆ ದಿಢೀರ್ ಇಳಿಕೆ ಕಂಡಿದೆ. ಒಂದು ಕಿಲೋ ಟೊಮೆಟೊ ಬೆಲೆ 100 ರೂಕ್ಕಿಂತ ಕೆಳಕ್ಕೆ ತಲುಪಿದೆ. ತಮಿಳುನಾಡಿನ ಕೆಲವೆಡೆ ಒಂದು ಕಿಲೋ ಟೊಮೆಟೊ ರೂ.40ರಿಂದ ರೂ.60ರವರೆಗೆ ಮಾರಾಟವಾಗುತ್ತಿದೆ ಎಂದು ತಿಳಿದುಬಂದಿದೆ. ಏಕಾಏಕಿ ಬೆಲೆ ಕುಸಿತ ಕಂಡಿದ್ದರಿಂದ ಜನ ಎರಡ್ಮೂರು ಕಿಲೋ ಖರೀದಿಸುತ್ತಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ಟೊಮೆಟೊ ಬೆಳೆ ಪಡೆಯಲು ಕನಿಷ್ಠ ಎರಡು ತಿಂಗಳು ಬೇಕು. ಆದರೆ, ಭಾರತದ ಹಲವೆಡೆ ಹವಾಮಾನ ವೈಪರೀತ್ಯದಿಂದಾಗಿ ಮೂರು ತಿಂಗಳ ಹಿಂದೆ ಟೊಮೆಟೊ ಬೆಳೆ ಹಾನಿಯಾಗಿದೆ. ಕೈಗೆ ಬಂದ ಟೊಮೆಟೊ ಕೂಡ ಪೂರೈಸಲು ಸಾಧ್ಯವಾಗಿಲ್ಲ. ಇದರಿಂದ ಟೊಮೆಟೊ ಕೊರತೆ ಉಂಟಾಗಿದ್ದು, ಬೆಲೆಯಲ್ಲಿ ಭಾರಿ ಏರಿಕೆಯಾಗಿತ್ತು. ಆದರೆ ಈಗ ಹೊಸ ಬೆಳೆ ಮಾರುಕಟ್ಟೆಗೆ ಬರುತ್ತಿದ್ದಂತೆ ಬೆಲೆಗಳು ಕಡಿಮೆಯಾಗುತ್ತಿವೆ.
ಹೊಸ ಬೆಳೆ ಪೂರ್ಣ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದರೆ ಟೊಮೆಟೊ ಬೆಲೆಯಲ್ಲಿ ಭಾರಿ ಇಳಿಕೆಯಾಗುವ ಸಾಧ್ಯತೆ ಇದೆ. ತೆಲಂಗಾಣ, ತಮಿಳುನಾಡು ಮಾತ್ರವಲ್ಲದೆ, ಕರ್ನಾಟಕ, ಆದ್ರಪ್ರದೇಶ ಸೇರಿದಂತೆ ಇತರೆ ರಾಜ್ಯಗಳಲ್ಲೂ ಟೊಮೆಟೊ ಬೆಲೆ ಭಾರೀ ಇಳಿಕೆಯಾಗಿದೆ. ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ಟೊಮೆಟೊ ಬೆಲೆ ರೂ.250ಕ್ಕೆ ತಲುಪಿದ್ದು ಗೊತ್ತೇ ಇದೆ. ಸದ್ಯ ಯುಪಿಯ ಹಲವು ಭಾಗಗಳಲ್ಲಿ ಒಂದು ಕಿಲೋ ಟೊಮೆಟೊ ರೂ.100ಕ್ಕೆ ತಲುಪಿದೆ.
Source : Digital Media