ನೂರರ ಗಡಿ ದಾಟಿದ್ದ ಟೊಮ್ಯಾಟೋ ಹಣ್ಣಿನ ಬೆಲೆ#Tomato Price ಇಂದು ಶತಕಕ್ಕೆ ಬಂದು ನಿಂತಿದೆ. ಆದರೆ ಮತ್ತೆ ಏರಿಕೆ ಆಗದು ಎಂದು ಹೇಳುವುದು ಕಷ್ಟ. ಯಾಕೆಂದರೆ ಟೊಮ್ಯಾಟೋ ಹಣ್ಣಿನ ಇಳುವರಿ ಈ ಬಾರಿ ಕಡಿಮೆ ಇದ್ದು, ವಿದೇಶದಿಂದ ನಮ್ಮ ದೇಶದ ಟೊಮ್ಯಾಟೋ ಹಣ್ಣಿಗೆ ಭಾರಿ ಬೇಡಿಕೆ ಬಂದಿದೆ.
ಹೊರ ರಾಜ್ಯಗಳಲ್ಲಿ ಟೊಮೆಟೊಗೆ ಬೇಡಿಕೆ ಹೆಚ್ಚಿದ ಕಾರಣ ಭಾರೀ ಬೆಲೆ ಏರಿಕೆಯಾಗಿತ್ತು. ಕೋಲಾರದಲ್ಲೂ ಟೊಮೆಟೊ ಇಳುವರಿ ಕುಸಿತ ಕಂಡ ಹಿನ್ನೆಲೆಯಲ್ಲಿ ಟೊಮೆಟೊ ಅಭಾವ ಸೃಷ್ಟಿಯಾಗಿತ್ತು. ಕೋಲಾರದಲ್ಲಿ ಟೊಮೆಟೊ ಬೆಲೆ 100 ರೂಪಾಯಿ ಇಳಿಕೆಯಾಗಿದೆ! 15 ಕೆಜಿ ತೂಕದ ಒಂದು ಬಾಕ್ಸ್ ಟೊಮೆಟೊ ಬೆಲೆ 1500 ರೂಪಾಯಿಗೆ ಹರಾಜಾಗಿದೆ.
ಏಷ್ಯಾದಲ್ಲೆ 2 ನೇ ಅತಿದೊಡ್ಡ ಮಾರುಕಟ್ಟೆ ಹೊಂದಿರುವ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕನಿಷ್ಟ 500 ರೂಪಾಯಿ, ಗರಿಷ್ಟ 1500 ರೂಪಾಯಿಗೆ ಟೊಮೆಟೊ ಹರಾಜಾಗಿದೆ. ಜೂನ್ 29 ರಂದು 15 ಕೆಜಿಯ ಒಂದು ಬಾಕ್ಸ್ ಟೊಮೆಟೊ 1600 ರೂಪಾಯಿಗೆ ಹರಾಜಾಗಿತ್ತು. ಆದರೆ ಜೂನ್ 30ರಂದು 15 ಕೆಜಿಯ ಒಂದು ಟೊಮೆಟೊ ಬಾಕ್ಸ್ 1500 ರೂಪಾಯಿಗೆ ಹರಾಜಾಗಿದೆ. ಹೊರ ರಾಜ್ಯಗಳಲ್ಲಿ ಟೊಮೆಟೊಗೆ ಬೇಡಿಕೆ ಹೆಚ್ಚಿದ ಕಾರಣ ಭಾರೀ ಬೆಲೆ ಏರಿಕೆಯಾಗಿತ್ತು. ಕೋಲಾರದಲ್ಲೂ ಟೊಮೆಟೊ ಇಳುವರಿ ಕುಸಿತ ಕಂಡ ಹಿನ್ನೆಲೆಯಲ್ಲಿ ಟೊಮೆಟೊ ಅಭಾವ ಸೃಷ್ಟಿಯಾಗಿತ್ತು.
ರಿಟೇಲ್ ವ್ಯಾಪಾರದಲ್ಲಿ ಕೆಜಿ ಟೊಮೆಟೊಗೆ ಕನಿಷ್ಟ 35 ರೂಪಾಯಿಂದ ಗರಿಷ್ಟ 100 ರೂಪಾಯಿ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಟೊಮೆಟೊ ಒಂದೇ ಅಲ್ಲದೇ ಇತರ ತರಕಾರಿಗಳ ದರವೂ ಭಾರೀ ಏರಿಕೆಯಾಗಿತ್ತು. ಇನ್ನಾದರೂ ತರಕಾರಿ ಬೆಲೆಯಲ್ಲಿ ಇಳಿಕೆ ಆಗಲಿದೆಯೇ ಎಂದು ಗ್ರಾಹಕರು ಕಾಯುವಂತಾಗಿದೆ.