#TomatoPrice | ದಿಢೀರ್ ಕುಸಿದ ಟೊಮೆಟೋ ರೇಟ್ : ಕೆ.ಜಿಗೆ 40 ರೂಪಾಯಿಗೆ ಕುಸಿತ : ರೈತರಿಗೆ ಬೇಸರ-ಗ್ರಾಹಕನಿಗೆ ಖುಷಿ

August 11, 2023
1:04 PM
200 ರೂ. ಗಡಿ ದಾಟಿ ಗ್ರಾಹಕರ ಆತಂಕಕ್ಕೆ ಕಾರಣವಾಗಿದ್ದ ಟೊಮೆಟೋ ಬೆಲೆ ಈಗ ಏಕಾಏಕಿ ಕುಸಿದಿದೆ. ಸದ್ಯ ಕೆ.ಜಿ ಟೊಮೆಟೋ ಬೆಲೆ 30-40ರೂ.ಗೆ ಕುಸಿತ ಕಂಡಿದೆ.

ನಾವು ದಿನನಿತ್ಯ ಕೊಂಡುಕೊಳ್ಳುವ ವಸ್ತುಗಳ ಬೆಲೆ ಹಾಗೇನೆ. ಒಂದಿನ ಜಾಸ್ತಿಯಾದ್ರೆ, ಇನ್ನೊಂದು ದಿನ ಇಳಿಕೆಯಾಗುತ್ತದೆ. ಅದರಲ್ಲೂ ತರಕಾರಿ ಬೆಲೆ ಅಂತೂ ಇವತ್ತಿದ್ದ ಬೆಲೆ ನಾಳೆ ಇರೋದಿಲ್ಲ. ಬೆಲೆ ಜಾಸ್ತಿಯಾದ್ರೆ ರೈತನಿಗೆ ಖಷಿ. ಅದೇ ಬೆಲೆ ಕಮ್ಮಿಯಾದ್ರೆ ಗ್ರಾಹಕನಿಗೆ ಲಾಭ. ಈಗ ಟೊಮೆಟೋ ಕಥೆನೂ ಅದೇ.  ಕೆಲವು ದಿನಗಳಿಂದ ಚಿನ್ನದಂತಾಗಿದ್ದ ಟೊಮೆಟೋ ಬೆಲೆ ಇದೀಗ ದಿಢೀರ್ ಇಳಿಕೆ ಕಂಡಿದೆ.

Advertisement

200 ರೂ. ಗಡಿ ದಾಟಿ ಗ್ರಾಹಕರ ಆತಂಕಕ್ಕೆ ಕಾರಣವಾಗಿದ್ದ ಟೊಮೆಟೋ ಬೆಲೆ ಈಗ ಏಕಾಏಕಿ ಕುಸಿದಿದೆ. ಸದ್ಯ ಕೆ.ಜಿ ಟೊಮೆಟೋ ಬೆಲೆ 30-40ರೂ.ಗೆ ಕುಸಿತ ಕಂಡಿದೆ. ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ಟೊಮೆಟೋ ದರ ಭಾರೀ ಇಳಿಕೆಯಾಗಿದೆ. 15 ಕೆಜಿ ಬಾಕ್ಸ್ 2,000-2,500 ರೂಪಾಯಿ ಕಂಡಿದ್ದ ಟೊಮೆಟೋ ಬೆಲೆ ಈಗ 450 ರೂಪಾಯಿಗೆ ಇಳಿದಿದೆ. ಕಳೆದ ನಾಲ್ಕೈದು ದಿನದ ಹಿಂದೆ ಟೊಮ್ಯಾಟೊ ದರ 150 ರಿಂದ 169 ರೂಪಾಯಿ ಇತ್ತು. ಒಂದು ಕ್ರೇಟ್ ಗೆ 2,000 ಇತ್ತು. ಇಂದು ಒಂದು ಕ್ರೇಟ್ ಗೆ 1,500 ರೂಪಾಯಿ ಆಗಿದೆ.

ಮಳೆ ಇದ್ದ ಕಾರಣದಿಂದ ರೈತರಿಂದ ಮಾರುಕಟ್ಟೆಗೆ ಟೊಮೆಟೋ ಸರಬರಾಜು ಆಗದ ಕಾರಣ ದರ ಜಾಸ್ತಿ ಆಗಿತ್ತು. ಮಳೆ ನಿಂತ ಕಾರಣ ಇದೀಗ ಟೊಮೆಟೋ ಸರಬರಾಜು ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೆಂಪು ಸುಂದರಿಯ ಬೆಲೆ ಕಡಿಮೆ ಆಗಿದೆ. ಬೆಲೆ ಕಡಿಮೆ ಆದ ಮೇಲೆ ಗ್ರಾಹಕರು ಬರುತ್ತಿಲ್ಲ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರಾಜ್ಯದಲ್ಲಿ ಕುಡಿಯುವ ನೀರಿನ  ಅಭಾವ ನೀಗಿಸಲು ಸರ್ಕಾರದಿಂದ ಸಮಿತಿ ರಚನೆ
March 28, 2025
6:30 AM
by: The Rural Mirror ಸುದ್ದಿಜಾಲ
ಒಂದು ವರ್ಷದ ನಂತರ 8 ರಾಶಿಗಳಿಗೆ ಆರ್ಥಿಕ ಬಲ
March 28, 2025
6:23 AM
by: ದ ರೂರಲ್ ಮಿರರ್.ಕಾಂ
ಹಾಸನ | ಕಾಡಾನೆ ಪತ್ತೆಗೆ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ಯಶಸ್ವಿ
March 28, 2025
5:53 AM
by: The Rural Mirror ಸುದ್ದಿಜಾಲ
ನಂದಿನಿ ಹಾಲು, ಮೊಸರು ದರ ಪ್ರತಿ ಲೀಟರ್‌ಗೆ 4 ರೂಪಾಯಿ ಏರಿಕೆ | ಏಪ್ರಿಲ್ 1 ರಿಂದ ಹೊಸ ದರ ಅನ್ವಯ
March 27, 2025
10:58 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group