ನಾವು ದಿನನಿತ್ಯ ಕೊಂಡುಕೊಳ್ಳುವ ವಸ್ತುಗಳ ಬೆಲೆ ಹಾಗೇನೆ. ಒಂದಿನ ಜಾಸ್ತಿಯಾದ್ರೆ, ಇನ್ನೊಂದು ದಿನ ಇಳಿಕೆಯಾಗುತ್ತದೆ. ಅದರಲ್ಲೂ ತರಕಾರಿ ಬೆಲೆ ಅಂತೂ ಇವತ್ತಿದ್ದ ಬೆಲೆ ನಾಳೆ ಇರೋದಿಲ್ಲ. ಬೆಲೆ ಜಾಸ್ತಿಯಾದ್ರೆ ರೈತನಿಗೆ ಖಷಿ. ಅದೇ ಬೆಲೆ ಕಮ್ಮಿಯಾದ್ರೆ ಗ್ರಾಹಕನಿಗೆ ಲಾಭ. ಈಗ ಟೊಮೆಟೋ ಕಥೆನೂ ಅದೇ. ಕೆಲವು ದಿನಗಳಿಂದ ಚಿನ್ನದಂತಾಗಿದ್ದ ಟೊಮೆಟೋ ಬೆಲೆ ಇದೀಗ ದಿಢೀರ್ ಇಳಿಕೆ ಕಂಡಿದೆ.
200 ರೂ. ಗಡಿ ದಾಟಿ ಗ್ರಾಹಕರ ಆತಂಕಕ್ಕೆ ಕಾರಣವಾಗಿದ್ದ ಟೊಮೆಟೋ ಬೆಲೆ ಈಗ ಏಕಾಏಕಿ ಕುಸಿದಿದೆ. ಸದ್ಯ ಕೆ.ಜಿ ಟೊಮೆಟೋ ಬೆಲೆ 30-40ರೂ.ಗೆ ಕುಸಿತ ಕಂಡಿದೆ. ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ಟೊಮೆಟೋ ದರ ಭಾರೀ ಇಳಿಕೆಯಾಗಿದೆ. 15 ಕೆಜಿ ಬಾಕ್ಸ್ 2,000-2,500 ರೂಪಾಯಿ ಕಂಡಿದ್ದ ಟೊಮೆಟೋ ಬೆಲೆ ಈಗ 450 ರೂಪಾಯಿಗೆ ಇಳಿದಿದೆ. ಕಳೆದ ನಾಲ್ಕೈದು ದಿನದ ಹಿಂದೆ ಟೊಮ್ಯಾಟೊ ದರ 150 ರಿಂದ 169 ರೂಪಾಯಿ ಇತ್ತು. ಒಂದು ಕ್ರೇಟ್ ಗೆ 2,000 ಇತ್ತು. ಇಂದು ಒಂದು ಕ್ರೇಟ್ ಗೆ 1,500 ರೂಪಾಯಿ ಆಗಿದೆ.
ಮಳೆ ಇದ್ದ ಕಾರಣದಿಂದ ರೈತರಿಂದ ಮಾರುಕಟ್ಟೆಗೆ ಟೊಮೆಟೋ ಸರಬರಾಜು ಆಗದ ಕಾರಣ ದರ ಜಾಸ್ತಿ ಆಗಿತ್ತು. ಮಳೆ ನಿಂತ ಕಾರಣ ಇದೀಗ ಟೊಮೆಟೋ ಸರಬರಾಜು ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೆಂಪು ಸುಂದರಿಯ ಬೆಲೆ ಕಡಿಮೆ ಆಗಿದೆ. ಬೆಲೆ ಕಡಿಮೆ ಆದ ಮೇಲೆ ಗ್ರಾಹಕರು ಬರುತ್ತಿಲ್ಲ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.