ಮೀನುಗಾರರ ಬಲೆಗೆ ಬೃಹದಾಕಾರದ ನೂರಾರು ತೊರಕೆ ಮೀನುಗಳು ಬಿದ್ದಿವೆ. ಕಾಪು ಮೂಳೂರು ಕಡಲ ತೀರದಲ್ಲಿ ಬಲೆಗೆ ಬಿದ್ದ ದೊಡ್ಡ ದೊಡ್ಡ ತೊರಕೆ ಮೀನುಗಳು 50 ಕೆಜಿಯಷ್ಟು ತೂಕ ಹೊಂದಿದ್ದು, ತೊರಕೆ ಮೀನುಗಳನ್ನು ನೋಡಲು ನೂರಾರು ಮಂದಿ ನೆರೆದಿದ್ದರು. ಒಟ್ಟು 11 ತೊರಕೆ ಮೀನುಗಳು ಲಭ್ಯವಾಗಿದ್ದು ಸುಮಾರು 1600 ಕೆಜಿ ಯಷ್ಟು ತೂಕವನ್ನು ಅಂದಾಜಿಸಲಾಗಿದೆ.
ಮೀನುಗಾರರು ತೊರಕೆ ಮೀನುಗಳನ್ನು ದೊಡ್ಡ ದೊಡ್ಡ ಬಡಿಗೆಯಲ್ಲಿ ಕಟ್ಟಿ ಸಾಗಿಸಿದರು. ಕೆಜಿಗೆ 250ರಿಂದ 300 ರೂಪಾಯಿಗಳಷ್ಟು ಬೇಡಿಕೆ ಇರುವ ತೊರಕೆ ಮೀನುಗಳನ್ನು ಹುಲಿ ತೊರಕೆ ಎಂದೂ ಕರೆಯಲಾಗುತ್ತದೆ. ಮೈ ಮೇಲೆ ಹುಲಿ ಚರ್ಮದ ಆಕಾರ ಹೊಂದಿರುವುದು.ನೂರಾರು ತೊರಕೆ ಮೀನುಗಳು ಬಲೆಗೆ ಬಿದ್ದಿರುವ ವಿಷಯ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಸ್ಥಳೀಯರು ವಿಡಿಯೋ ಮಾಡಿಕೊಂಡು ಸಂಭ್ರಮಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel