ಉತ್ತಮವಾಗಿ ಸುರಿದ ಮಳೆ | ಅನೇಕ ಕಡೆ ಕೃಷಿ ಭೂಮಿ ಜಲಾವೃತ | ಚಿಕ್ಕಮಗಳೂರು, ದಾವಣಗೆರೆ, ಕೊಪ್ಪಳ, ಬೆಳಗಾವಿಯಲ್ಲೂ ಪ್ರವಾಹ ಭೀತಿ

July 22, 2024
11:21 AM

ಕಳೆದ 10-15 ದಿನಗಳಿಂದ ವರುಣ(Rain) ಆರ್ಭಟಿಸುತ್ತಿದ್ದಾನೆ. ಈ ಬಾರಿ ವಾಡಿಕೆಗಿಂತ ಜಾಸ್ತಿಯೇ ಮುಂಗಾರು ಮಳೆ(Monsoon) ಕೃಪೆ ತೋರಿದೆ. ರೈತರಿಗೆ(Farmer) ಮಳೆ ಚೆನ್ನಾಗಿ ಆಗಿ ರಾಜ್ಯದ ಅಣೆಕಟ್ಟುಗಳು(Dam) ಭರ್ತಿಯಾಗಿದೆ ಅನ್ನೋ ಖುಷಿ ಒಂದೆಡೆಯಾದರೆ ತಾವು ಬೆಳೆದ ಬೆಳೆ(Crop)ನೀರು ಪಾಲಾಗಿದೆ ಅನ್ನೋದು ಬೇಸರದ ಸಂಗತಿ. ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ (Heavy Rain) ಮುಂದುವರಿದಿದೆ. 

Advertisement
Advertisement
ಹೆಬ್ಬಾಳೆ-ಹೊರನಾಡು ಸಂಪರ್ಕ ಸೇತುವೆ ಮುಳುಗಡೆ:  ಚಿಕ್ಕಮಗಳೂರಿನ (Chikkamagaluru) ಕಳಸ ಬಳಿ ಭದ್ರೆಯ ಅಬ್ಬರದಿಂದಾಗಿ ಹೆಬ್ಬಾಳೆ-ಹೊರನಾಡು ಸಂಪರ್ಕ ಸೇತುವೆ ಮುಳುಗಿದೆ. ಕೊಪ್ಪ ತಾಲೂಕಿನ ಬಸರೀಕಟ್ಟೆ ಸಮೀಪ ಅಬ್ಬಿಕಲ್ಲು ಜಲಪಾತ ಭೋರ್ಗರೆಯುತ್ತಿದೆ. ಮುಳ್ಳಯ್ಯನಗಿರಿಯಲ್ಲಿ ಭಾರೀ ಮಳೆ ಹಿನ್ನೆಲೆ ಚಿಕ್ಕಮಗಳೂರು ನಗರಕ್ಕೆ ನೀರುಣಿಸುವ ಹಿರೇಕೊಳಲೇ ಕೆರೆ ಕೋಡಿ ಬಿದ್ದಿದೆ. ಹೀಗಾಗಿ, ಕೆರೆಗೆ ಶಾಸಕ ಎಚ್‌.ಡಿ ತಮ್ಮಯ್ಯ, ಎಂಎಲ್‌ಸಿ ಸಿಟಿ ರವಿ, ಭೋಜೇಗೌಡ ಭಾಗಿನ ಅರ್ಪಿಸಿದ್ದಾರೆ.

ಬೆಳಗಾವಿಯಲ್ಲೂ ಪ್ರವಾಹ ಭೀತಿ: ಮಹಾರಾಷ್ಟ್ರದಲ್ಲಿ ಭಾರೀ ಮಳೆಗೆ ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಪ್ರವಾಹ ಭೀತಿ, ಅವಾಂತರಗಳು ಸಂಭವಿಸಿವೆ. ಕೃಷ್ಣೆಯ ಒಳ ಹರಿವು 1.50 ಲಕ್ಷ ಕ್ಯೂಸೆಕ್ ದಾಟಿದೆ. ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ದೂದ್‌ಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ. ರೈತರ ಜಮೀನುಗಳಿಗೆ ನದಿ ನೀರು ನುಗ್ಗಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ 4 ಸೇತುವೆಗಳು ಮುಳುಗಡೆಯಾಗಿವೆ. 4 ಸೇತುವೆಗಳ 2 ಬದಿಯಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರನ್ನು ನಿಯೋಜಿಸಲಾಗಿದೆ.

Advertisement

ಕೃಷ್ಣಾ ನದಿಗೆ 1.60 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ಪ್ರವಾಹ ಎದುರಾಗುವ ಭೀತಿಗೆ ನದಿ ದಡದಲ್ಲಿರುವ ಪಂಪ್‌ಸೆಟ್‌ಗಳನ್ನು ರೈತರು ತೆಗೆದಿಟ್ಟಿದ್ದಾರೆ. ಖಾನಾಪೂರ ತಾಲೂಕಿನ ಜಾಂಬೋಟಿ ಬಳಿ ಕಸಮಳಿ ಬ್ರಿಡ್ಜ್ ಮೇಲೆ ಭಾರೀ ವಾಹನ ಸಂಚಾರ ನಿಷೇಧಿಸಲಾಗಿದೆ. ಪರಿಣಾಮ ಬೆಳಗಾವಿ – ಗೋವಾ ಸರಕು ಸಾಗಣೆಯ ಮೇಲೆ ಭಾರೀ ಪರಿಣಾಮ ಬೀರಿದೆ. ಗೋವಾದಿಂದ ಬರುವ ಎಲ್ಲಾ ವಾಹನಗಳನ್ನು ತಡೆ ಹಿಡಿಯಲಾಗಿದೆ. ಕಿತ್ತೂರಿನ ಹುಣಶೀಕಟ್ಟಿಯ ಮಲಪ್ರಭಾ ನದಿಯಲ್ಲಿ ರೈತರ ಸಮಸ್ಯೆ ಹಿನ್ನೆಲೆಯಲ್ಲಿ ಡಿ.ಸಿ ಮೊಹಮ್ಮದ್ ರೋಷನ್ ಭೇಟಿ ನೀಡಿದರು. ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲು ಸರ್ಕಾರಕ್ಕೆ ಮನವಿ ಕಳುಹಿಸುವ ಭರವಸೆ ನೀಡಿದರು. ನಿಪ್ಪಾಣಿ ನಗರದ ಜತ್ರಾಟ್‌ವೇಸ್‌ನಲ್ಲಿ ಗೋಡೆ ಕುಸಿದು 45 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಯಾದಗಿರಿಯ ನಾರಾಯಣಪುರ ಜಲಾಶಯ 33 ಟಿಎಂಸಿ ಸಾಮರ್ಥ್ಯದ ಪೈಕಿ 28 ಟಿಎಂಸಿ ನೀರು ಸಂಗ್ರಹವಾಗಿದೆ. ಡ್ಯಾಮ್‌ನಿಂದ ಕೃಷ್ಣಾ ನದಿಗೆ 1.60 ಲಕ್ಷ ಕ್ಯೂಸೆಕ್ ನೀರು ರಿಲೀಸ್ ಮಾಡಲಾಗಿದೆ. ಸುರಪುರದ ನೀಲಕಂಠರಾಯನ ಗಡ್ಡಿ, ಮೇಲಿನ ಗಡ್ಡಿ, ಜಂಗಣ್ಣದೊಡ್ಡಿ ಮುಳುಗಡೆಯಾಗುವ ಸಾಧ್ಯತೆ ಇದ್ದು, ಹೈಅಲರ್ಟ್ ಘೋಷಿಸಲಾಗಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಶೀಲಹಳ್ಳಿ ಸೇತುವೆ, ಹೂವಿನಹೆಡಗಿ ಸೇತುವೆಗಳಿಗೆ ಮುಳುಗಡೆ ಭೀತಿ ಎದುರಾಗಿದೆ.

ನಂದಿಬೆಟ್ಟಕ್ಕೆ ಪ್ರವಾಸಿಗರ ದಂಡು: ಕರಾವಳಿ-ಮಲೆನಾಡು ಭಾಗದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ಪ್ರವಾಸಿಗರ ದಂಡು ಹೆಚ್ಚಾಗಿದೆ. ಬೆಳಗ್ಗೆ 5 ಗಂಟೆಯಿಂದಲೇ ಕಾರು, ಬೈಕ್‌ಗಳ ಮೂಲಕ ಸಾವಿರಾರು ಮಂದಿ ಪ್ರವಾಸಿಗರು ನಂದಿಬೆಟ್ಟಕ್ಕೆ ಲಗ್ಗೆಯಿಡುತ್ತಿದ್ದಾರೆ. ನಂದಿಬೆಟ್ಟದ ಪಾರ್ಕಿಂಗ್ ಫ್ಲಾಟ್ ವಾಹನಗಳಿಂದ ಹೌಸ್‌ಫುಲ್ ಆಗುತ್ತಿದೆ. ಭಾನುವಾರ ಸಹ ಇಡೀ ನಂದಿಬೆಟ್ಟವನ್ನು ದಟ್ಟಮಂಜು-ಚುಮುಚುಮು ಚಳಿ ಆವರಿಸಿತ್ತು.

Advertisement

ಕೆಆರ್‌ಎಸ್ ಬಹುತೇಕ ಭರ್ತಿ  : ರಾಜ್ಯದಲ್ಲಿ ವಾಡಿಕೆಗಿಂತಲೂ ಹೆಚ್ಚಿನ ಮಳೆಯಾಗಿರುವ ಹಿನ್ನೆಲೆಯಲ್ಲಿ ಜಲಾಶಯಗಳಿಗೆ ಜೀವಕಳೆ ಬಂದಿವೆ. ಮಂಡ್ಯದ ಕೆಆರ್‌ಎಸ್‌ ಡ್ಯಾಂ (KRS Dam) ಬಹುತೇಕ ಭರ್ತಿಯಾಗಿದೆ. 124 ಅಡಿ (49 TMC) ಪೈಕಿ 122.70 ಅಡಿ (46.567 ಟಿಎಂಸಿ) ನೀರು ಸಂಗ್ರಹವಾಗಿದೆ. ಇದರೊಂದಿಗೆ ರಾಜ್ಯದ ಪ್ರಮುಖ ಜಲಾಶಯಗಳೂ (Reservoirs) ಬಹುತೇಕ ಭರ್ತಿಯ ಹಂತ ತಲುಪಿವೆ.

  • ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಗೋವಿನ ಸಗಣಿಯಿಂದ ಗಣೇಶ ಮೂರ್ತಿ | ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆಗೆ ಆದ್ಯತೆ ನೀಡಿದ ರೈತ|
September 7, 2024
10:59 PM
by: ದ ರೂರಲ್ ಮಿರರ್.ಕಾಂ
ಗಣೇಶೋತ್ಸವ | ಮೈಸೂರಿನಲ್ಲಿ ಗಮನ ಸೆಳೆದ ವಿಶೇಷ ಗಣಪ | ವಿವಿಧ ಪ್ರತಿಮೆಗಳು |
September 7, 2024
10:38 PM
by: ದ ರೂರಲ್ ಮಿರರ್.ಕಾಂ
ಗಣೇಶೋತ್ಸವ | ದೇವರ ಪ್ರಸಾದಕ್ಕೆ FSSAI ಪರವಾನಗಿ ಕಡ್ಡಾಯ | ಖಂಡನೆ-ಸಾರ್ವಜನಿಕರಿಂದ ಅಸಮಾಧಾನ |
September 7, 2024
10:26 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 07-09-2024 | ರಾಜ್ಯದ ಅಲ್ಲಲ್ಲಿ ಸಾಮಾನ್ಯ ಮಳೆ | ಸೆ.13 ರಿಂದ ಕರಾವಳಿ ಜಿಲ್ಲೆಯಲ್ಲೂ ಮಳೆ ಕಡಿಮೆ ಸಾಧ್ಯತೆ |
September 7, 2024
2:22 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror