ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ 9 ದಿನಗಳ ವಿಶೇಷ ಕಾಶಿ ಟೂರ್ ಪ್ಯಾಕೇಜ್ ಪ್ರಕಟಿಸಲಾಗಿದೆ. ಭಾರತೀಯ ರೈಲ್ವೇ, ಟ್ರಾವೆಲ್ಸ್ ಟೈಮ್ಸ್ ಇಂಡಿಯಾ ಟೂರಿಸಂ ಸಂಸ್ಥೆ ಸಹಯೋಗದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ 16,500 ರೂ.ಗೆ 9 ದಿನಗಳ ವಿಶೇಷ ಪ್ಯಾಕೇಜ್ ಟೂರ್ ಪ್ರಕಟಿಸಲಾಗಿದೆ.
ಪ್ರಸಿದ್ಧ ತೀರ್ಥಕ್ಷೇತ್ರಗಳಾದ ವಾರಣಾಸಿ, ಗಯಾ, ಪ್ರಯಾಗ್ ರಾಜ್, ಅಯೋಧ್ಯೆಗೆ ಭೇಟಿ ನೀಡಿ ದೇವರ ದರ್ಶನ ಮಾಡಿಸಲಾಗುವುದು. ಊಟ, ತಂಗುವ ಸ್ಥಳದ ಅನುಕೂಲ, ವೈದ್ಯಕೀಯ ವ್ಯವಸ್ಥೆ ಇರಲಿದೆ ಎಂದು ಟ್ರಾವೆಲ್ ಟೈಮ್ಸ್ ಇಂಡಿಯಾ ವ್ಯವಸ್ಥಾಪಕ ವಿಘ್ನೇಶ್ ತಿಳಿಸಿದ್ದಾರೆ.
16,500 ರೂ. ಮತ್ತು 18,750 ರೂ.ಗಳಿಂದ ಈ ವಿಶೇಷ ಪ್ಯಾಕೇಜ್ ಟೂರ್ ಪ್ರಾರಂಭವಾಗಲಿದ್ದು, ಒಟ್ಟು 600 ಜನ ಪ್ರಯಾಣಿಸುವ ರೈಲು ಇದಾಗಿದೆ. ಫೆಬ್ರವರಿ 12ರಂದು ಬೆಂಗಳೂರಿನಿಂದ ಪ್ರವಾಸಿಗರನ್ನು ಕರೆದುಕೊಂಡು ಹೋಗಲಾಗುವುದು.
ಆನ್ಲೈನ್ ಬುಕಿಂಗ್ ಗಾಗಿ www.ularail.com, ಮೊಬೈಲ್ ಸಂಖ್ಯೆ 90436 85850, 96203 93938 ಗೆ ಕರೆ ಮಾಡಿ ಆಸನ ಕಾಯ್ದಿರಿಸಬಹುದಾಗಿದೆ ಎಂದು ಹೇಳಲಾಗಿದೆ.
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…
ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ರೈತರು ತಮ್ಮ ಬೆಳೆಗಳಲ್ಲಿ ಹೆಚ್ಚಿನ ರಾಸಾಯನಿಕಗಳು…
ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಏಪ್ರಿಲ್ 18…
ಕೋಲಾರ ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಕೆರೆಗಳನ್ನು ಆದ್ಯತೆ ಮೇರೆಗೆ ತೆರವುಗಳಿಸಲು ಕ್ರಮ ಕೈಗೊಳ್ಳಬೇಕು ಎಂದು…