#KumaraParvathaTrek | ಕಳೆದ 3-4 ದಿನಗಳಿಂದ ವ್ಯಾಪಕ ಮಳೆ ಹಿನ್ನೆಲೆ | ಪ್ರವಾಸಿಗರ ನೆಚ್ಚಿನ ಚಾರಣ ಸ್ಥಳ ಕುಮಾರ ಪರ್ವತಕ್ಕೆ ಮತ್ತೆ ಪ್ರವೇಶ ನಿಷೇಧ |

October 3, 2023
10:10 PM
ಚಾರಣಕ್ಕೆ ಭಾರೀ ಪ್ರಸಿದ್ಧಿ ಪಡೆದಿರುವ ದಕ್ಷಿಣ ಕನ್ನಡ ಹಾಗೂ ಹಾಸನ ಗಡಿ ಭಾಗದಲ್ಲಿರುವ ಕುಮಾರ ಪರ್ವತ ಚಾರಣ ತೆರಳುವುದಕ್ಕೆ ಇಂದಿನಿಂದ (ಅಕ್ಟೋಬರ್‌ 3) ಮತ್ತೆ ನಿರ್ಬಂಧ ವಿಧಿಸಲಾಗಿದೆ.

ಭಾರತದ ಸುಂದರ ರಾಜ್ಯವಾದ ಕರ್ನಾಟಕದಲ್ಲಿರುವ ಕುಮಾರ ಪರ್ವತವು ಚಾರಣಿಗರ ಸ್ವರ್ಗವಾಗಿದೆ ಮತ್ತು ಪ್ರಕೃತಿ ಆಸಕ್ತರಿಗೆ ಸ್ವರ್ಗವಾಗಿದೆ. ಪುಷ್ಪಗಿರಿ #Pushpagiri ಎಂದೂ ಕರೆಯಲ್ಪಡುವ ಈ ಭವ್ಯವಾದ ಶಿಖರವು 1,712 ಮೀಟರ್ (5,617 ಅಡಿ) ಎತ್ತರದಲ್ಲಿ ಎತ್ತರದಲ್ಲಿದೆ. ಇದು ಪಶ್ಚಿಮ ಘಟ್ಟಗಳಲ್ಲಿನ #WesternGhats ಎರಡನೇ ಅತಿ ಎತ್ತರದ ಪರ್ವತವಾಗಿದೆ. ಸುಂದರ ಭೂದೃಶ್ಯಗಳು, ಹಚ್ಚ ಹಸಿರಿನ ಮತ್ತು ರೋಮಾಂಚಕ ಹಾದಿಗಳಿಗೆ ಹೆಸರುವಾಸಿಯಾದ ಕುಮಾರ ಪರ್ವತ ಟ್ರೆಕ್, ಪ್ರಕೃತಿಯ ಮಡಿಲಲ್ಲಿ ಮುಳುಗಲು ಬಯಸುವವರಿಗೆ ಮರೆಯಲಾಗದ ಸಾಹಸವನ್ನು ನೀಡುತ್ತದೆ. ಆದರೆ ಪ್ರವಾಸಿಗರ ನೆಚ್ಚಿನ ಚಾರಣ ಸ್ಥಳವಾದ ಕುಮಾರ ಪರ್ವತಕ್ಕೆ ಮತ್ತೆ ಪ್ರವೇಶ ನಿಷೇಧಿಸಲಾಗಿದೆ.

Advertisement
Advertisement
Advertisement

ಚಾರಣಕ್ಕೆ ಭಾರೀ ಪ್ರಸಿದ್ಧಿ ಪಡೆದಿರುವ ದಕ್ಷಿಣ ಕನ್ನಡ ಹಾಗೂ ಹಾಸನ ಗಡಿ ಭಾಗದಲ್ಲಿರುವ ಕುಮಾರ ಪರ್ವತ ಚಾರಣ ತೆರಳುವುದಕ್ಕೆ ಅಕ್ಟೋಬರ್‌ 3 ರಿಂದ ಮತ್ತೆ ನಿರ್ಬಂಧ ವಿಧಿಸಲಾಗಿದೆ. ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ #KukkeSubrahmanya ಹಿಂಭಾಗದಲ್ಲಿರುವ ಕುಮಾರ ಪರ್ವತ ಚಾರಣಿಗರ ಫೇವರಿಟ್‌ ತಾಣವೂ ಆಗಿದೆ. ಮಳೆಗಾಲದಲ್ಲಿ ಇಲ್ಲಿಗೆ ಬಹುತೇಕ ನಿರ್ಬಂಧ ವಿಧಿಸಲಾಗಿರುತ್ತದೆ.

Advertisement

ಮತ್ತೆ ನಿರ್ಬಂಧ : ಮೇ ತಿಂಗಳಿನಿಂದ ಸೆಪ್ಟಂಬರ್‌ 29 ರ ತನಕ ಬಿರು ಬೇಸಿಗೆ ಹಾಗೂ ಮಳೆಗಾಲದ ಕಾರಣಕ್ಕಾಗಿ ನಿರ್ಬಂಧ ವಿಧಿಸಲಾಗಿತ್ತು. ಸೆಪ್ಟಂಬರ್‌ 30 ರಂದು ಪ್ರವಾಸಿಗರ ಚಾರಣಕ್ಕೆ ಕುಮಾರ ಪರ್ವ ತೆರೆದುಕೊಂಡಿತ್ತು. ಆದರೆ, ಇದೇ ಬೆನ್ನಿಗೆ ಮತ್ತೆ ನಿರ್ಬಂಧ ವಿಧಿಸಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ಆದ್ದರಿಂದ ಅರಣ್ಯ ಇಲಾಖೆ ಚಾರಣಿಗರ ಹಿತದೃಷ್ಟಿಯಿಂದ ಕುಮಾರ ಪರ್ವತ ಚಾರಣಕ್ಕೆ ನಿರ್ಬಂಧ ವಿಧಿಸಿದೆ. ಅಕ್ಟೋಬರ್‌ 3 ರಿಂದ ಮುಂದಿನ ಆದೇಶದವರೆಗೂ ಚಾರಣಕ್ಕೆ ನಿಷೇಧ ವಿಧಿಸಲಾಗಿದೆ. ಸೆಪ್ಟಂಬರ್‌ 30 ರಂದು ಕುಮಾರ ಪರ್ವತ ಚಾರಣಕ್ಕೆ ಮುಕ್ತವಾಗುತ್ತಲೇ ಮೊದಲ ದಿನವೇ 750 ಮಂದಿ ಪ್ರವಾಸಿಗರು ಆಗಮಿಸಿದ್ದರು. ಅಷ್ಟೇ ಅಲ್ಲ ಮರುದಿನ ಭಾನುವಾರವೂ ಭಾರೀ ಸಂಖ್ಯೆಯ ಪ್ರವಾಸಿಗರು ಚಾರಣಕ್ಕೆ ಆಗಮಿಸಿದ್ದರು ಎಂದು  ಪತ್ರಿಕೆಯೊಂದು ವರದಿ ಮಾಡಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ನ.23 | ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವ | ಕೃಷಿ ವಿಚಾರಗೋಷ್ಠಿ | ಅಡಿಕೆ ರೋಗಗಳ ಬಗ್ಗೆ ಮಾಹಿತಿ ವಿನಿಮಯ |
November 22, 2024
2:32 PM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror