ರೈತರ ಸೋಗಿನಲ್ಲಿ ವ್ಯಾಪಾರಿಗಳಿಂದ ಕ್ಯಾಂಪ್ಕೊಗೆ ಬರ್ಮಾ ಅಡಿಕೆ ಮಾರಾಟ | ಪತ್ತೆ ಮಾಡಿದ ಸಿಬಂದಿಗಳು | ಸದಸ್ಯತ್ವ ದುರುಪಯೋಗಕ್ಕೆ ಅವಕಾಶ ನೀಡಬೇಡಿ – ಕ್ಯಾಂಪ್ಕೊದಿಂದ ರೈತರಿಗೆ ಮನವಿ |

September 6, 2024
7:35 PM

ಕೆಲ ವ್ಯಾಪಾರಿಗಳು ರೈತರೊಂದಿಗೆ ಸಂಬಂಧ ಇರಿಸಿಕೊಂಡು ಅವರ ಕ್ಯಾಂಪ್ಕೊ ಸದಸ್ಯತ್ವ ಚೀಟಿಯನ್ನು ಉಪಯೋಗಿಸಿ ಬರ್ಮಾ ಅಡಿಕೆಯನ್ನು ಕ್ಯಾಂಪ್ಕೊಗೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಪುತ್ತೂರಿನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಕ್ಯಾಂಪ್ಕೊ ಸಿಬಂದಿಗಳ ದಕ್ಷತೆ ಹಾಗೂ ಚಾಕಚಕ್ಯತೆಯಿಂದ ಇದು ಬೆಳಕಿಗೆ ಬಂದಿದೆ. …..ಮುಂದೆ ಓದಿ….

Advertisement
Advertisement
Advertisement
ಕಿಶೋರ್‌ ಕುಮಾರ್‌ ಕೊಡ್ಗಿ

ಪುತ್ತೂರಿನ ಕ್ಯಾಂಪ್ಕೊ ಶಾಖೆ ಹಾಗೂ ಇತರ ಶಾಖೆಗಳಲ್ಲಿ  ಕೆಲ ವ್ಯಾಪಾರಿಗಳು ರೈತರ ಹೆಸರಿನಲ್ಲಿ ಬಂದು ಅಡಿಕೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಇತ್ತೀಚೆಗೆ ವ್ಯಾಪಾರಿಯೊಬ್ಬ ರೈತರ ಕಾರ್ಡನ್ನು ದುರುಪಯೋಗಪಡಿಸಿಕೊಂಡು ಬರ್ಮಾ(ಮ್ಯಾನ್ಮಾರ್) ಮೂಲದ ಕಳಪೆಗುಣಮಟ್ಟದ ಅಡಿಕೆಯನ್ನು ಇಲ್ಲಿನ ಸ್ಥಳೀಯ ಅಡಿಕೆಯೊಂದಿಗೆ ಬೆರೆಸಿ ಕ್ಯಾಂಪ್ಕೊ ಪುತ್ತೂರು ಶಾಖೆಯಲ್ಲಿ ಮಾರಾಟ ಮಾಡಲು ಪ್ರಯತ್ನ ಪಟ್ಟಿರುತ್ತಾರೆ. ಆದರೆ ಶಾಖೆಯ ಅಧಿಕಾರಿಗಳ ಆತನ ಕಪಟತನ ಬಯಲಾಯಿತು.

Advertisement

ಹೀಗಾಗಿ, ಇಂತಹ ಮೋಸದ ವ್ಯಾಪಾರದಲ್ಲಿ  ಅಡಿಕೆ ಬೆಳೆಗಾರರು ಯಾರೂ ಕೂಡ ಭಾಗಿಯಾಗಬಾರದು. ಅದಕ್ಕಾಗಿ ತಮ್ಮ ಕಾರ್ಡನ್ನು ಯಾರೂ ಕೂಡ ದುರುಪಯೋಗಪಡಿಸಲು ಅನುವು ಮಾಡಿಕೊಡಬಾರದು. ತಾವು ಜಾಗರೂಕರಾಗದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಸ್ಥಳೀಯ ಅಡಿಕೆಯ ದರ ಸ್ಥಿರತೆಯ ಮೇಲೆ ಮಾರಣಾಂತಿಕ ಹೊಡೆತ ನೀಡುವುದರಲ್ಲಿ ಸಂಶಯವಿಲ್ಲ ಎಂದು ಕ್ಯಾಂಪ್ಕೊ ಎಚ್ಚರಿಸಿದೆ.

ಒಮ್ಮೆಇಲ್ಲಿನ ಸ್ಥಳೀಯ ಅಡಿಕೆಯಲ್ಲಿಈ ತರಹದ ಅಡಿಕೆ ಬೆರಕೆಗೊಂಡಿರುವುದು ಉತ್ತರ ಭಾರತದ ಗ್ರಾಹಕರ ಗಮನಕ್ಕೆ ಬಂದಲ್ಲಿ, ಅವರು ಇಲ್ಲಿನ ಅಡಿಕೆಯ ಖರೀದಿಯನ್ನೇ ನಿಲ್ಲಿಸುವ ಸಂಭವವಿದೆ. ಹಾಗಾಗಿ ತಾವೆಲ್ಲರೂ ತುಂಬಾ ಎಚ್ಚರಿಕೆಯಿಂದ ಇದ್ದು ಈ ರೀತಿಯ ಮೋಸದ ಜಾಲಕ್ಕೆ ಬಲಿಯಾಗಬಾರದಾಗಿ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಮನವಿ ಮಾಡಿದ್ದಾರೆ.

Advertisement

It has come to our attention that some Traders, who have established good relationships with Farmers, are misusing CAMPCO Membership cards to pose as Farmers and sell Arecanut at CAMPCO Branches.  Recently, a Trader, taking advantage of a Farmer’s card, attempted to sell low-quality Arecanut of  Burma (Myanmar) by mixing it with local Arecanut at CAMPCO Puttur branch. Fortunately, due to the alertness and diligence of our Officials this deceit was uncovered.

In light of this incident, we earnestly request all our Farmer Members not to encourage  any such fraudulent activities. Please ensure that your Membership cards are not misused by anyone. Failing to be vigilant in this matter could lead to serious consequences for the stability of local Arecanut  prices. If Buyers from North India become aware of this type of Arecanut being mixed with the local product, they may stop purchasing from this region altogether.

Advertisement

Therefore, we kindly urge all Members to be extremely cautious and avoid falling into such fraudulent schemes.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಬೆಳೆಗಾರರು ಏಕೆ ಜಾಗ್ರತರಾಗಬೇಕಿದೆ..?
January 22, 2025
6:48 AM
by: ದ ರೂರಲ್ ಮಿರರ್.ಕಾಂ
ಮೊಗ್ರದಲ್ಲಿ ಕಾಲಾವಧಿ ನೇಮ
January 21, 2025
3:55 PM
by: ದ ರೂರಲ್ ಮಿರರ್.ಕಾಂ
ಮೊಗ್ರದಲ್ಲಿ ಕನ್ನಡ ದೇವತೆ ನೇಮ | ತುಳುನಾಡಿನಲ್ಲಿ ಈಗ ನೇಮ-ನಡಾವಳಿ ದಿನಗಳು |
January 21, 2025
3:50 PM
by: ದ ರೂರಲ್ ಮಿರರ್.ಕಾಂ
ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror