ಇತ್ತೀಚೆಗೆ ರಾಜ್ಯದಲ್ಲಿ ನಂದಿನಿ ಹಾಲಿನ(Nandini Milk) ಬೆಲೆ ಜಾಸ್ತಿಯಾಗಿದ್ದು(Price hike) ಗ್ರಾಹಕರನ್ನು(Customer) ಕಂಗೆಡಿಸಿದೆ. ಈ ಮಧ್ಯೆ ಈಗ ಹಾಲು ಮಾರಾಟ ಮಾಡುವವರು ಅವರ ಲಾಭಕ್ಕಾಗಿ 1-2 ರೂಪಾಯಿ ಜಾಸ್ತಿ ದುಡ್ಡು ತೆಗೆದುಕೊಳ್ಳುತ್ತಿರುವುದು ಬೇರೆ ಗ್ರಾಹಕರಿಗೆ ಹೊರೆಯಾಗಿದೆ. ನಂದಿನಿ ಉತ್ಪನ್ನ ಮಾರಾಟ ವರ್ತಕರು ಹಾಲಿನ ಎಂಆರ್‌ಪಿ(MRP) ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಈ ಬಗ್ಗೆ ನಂದಿನಿ ಮಾರಾಟ ವರ್ತಕರಿಗೆ ಕೆಎಂಎಫ್ (KMF) ಎಚ್ಚರಿಕೆ ನೀಡಿದೆ.
Advertisement
ಮೊನ್ನೆ ವರಿಗೆ 22 ರೂ. ಇದ್ದ 500 ಎಂಎಲ್ ನಂದಿನಿ ಈಗ 550 ಎಂಎಲ್ ಪ್ಯಾಕೇಟ್ ಆಗಿ 24 ರೂ. ಆಗಿದೆ. ಇದೇ ರೀತಿ ಪ್ರತಿ ಪ್ಯಾಕೇಟ್‌ಗೆ 50 ಎಂಎಲ್ ಅಧಿಕ ಹಾಲು ನೀಡಿ 2 ರೂ. ಹೆಚ್ಚು ಮಾಡಿದೆ. ಇದಕ್ಕೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ನಂದಿನಿ ಹಾಲನ್ನು ಅಧಿಕೃತ ಸ್ಟೋರ್‌ಗಳಲ್ಲಿ ಮಾತ್ರವಲ್ಲದೇ ಇತರ ಅಂಗಡಿಗಳಲ್ಲೂ ಮಾರಾಟ ಮಾಡಲಾಗುತ್ತದೆ. ಬೆಳಗಿನ ಸಮಯದಲ್ಲಿ ಬಿಟ್ಟು ಉಳಿದ ಸಮಯದಲ್ಲಿ ಕೆಲ ನಂದಿನಿ ಡೀಲರ್ಸ್ಗಳು ಮಾತ್ರವಲ್ಲದೇ ಉಳಿದ ಅನೇಕ ಕಡೆ ಎಂಆರ್‌ಪಿಗಿಂತ ಹೆಚ್ಚಿನ ಬೆಲೆ ಪಡೆಯುತ್ತಿದ್ದಾರೆ ಎನ್ನುವ ದೂರುಗಳು ಕೇಳಿಬರುತ್ತಿವೆ.
ಇದಕ್ಕೆ ಕಡಿವಾಣ ಹಾಕಿ ಗ್ರಾಹಕರಿಂದ ಹೆಚ್ಚಿನ ಹಣ ಪಡೆಯುವುದನ್ನು ನಿಲ್ಲಿಸಲು ಕೆಎಂಎಫ್ ಮುಂದಾಗಿದೆ. ಎಂಆರ್‌ಪಿಗಿಂತ ಹೆಚ್ಚಿನ ಹಣ ಪಡೆಯುವ ಬಗ್ಗೆ ಗ್ರಾಹಕರು ದೂರು ನೀಡಿದರೆ, ಅಂತಹವರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಲೈಸೆನ್ಸ್ ರದ್ದು ಮಾಡುವುದಾಗಿ ಕೆಎಂಎಫ್ ಎಚ್ಚರಿಸಿದೆ.
- ಅಂತರ್ಜಾಲ ಮಾಹಿತಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement