ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದ ಸಕಲೇಶಪುರ- ಸುಬ್ರಹ್ಮಣ್ಯ ರೈಲ್ವೆ ರೋಡ್ ಘಾಟ್ ವಿಭಾಗದಲ್ಲಿ ಎಡಕುಮೇರಿ ಮತ್ತು ಕಡಗರವಳ್ಳಿ ನಿಲ್ದಾಣಗಳ ನಡುವೆ ಗುರುವಾರ ಬಂಡೆಯೊಂದು ಉರುಳಿ ಹಳಿ ಮೇಲೆ ಬಿದ್ದ ಘಟನೆ ಸಂಭವಿಸಿದೆ.
Advertisement
ಘಟನೆಯಿಂದ ಬೆಂಗಳೂರು, ಹಾಸನ ಮತ್ತು ಮಂಗಳೂರು ನಡುವಿನ ರೈಲು ಸಂಚಾರಕ್ಕೆ ಕೆಲಕಾಲ ಅಡ್ಡಿಯಾಯಿತು. ಕೂಡಲೇ ಸ್ಥಳಕ್ಕೆ ಧಾವಿಸಿದ ಇಲಾಖೆಯ ತುರ್ತು ಕಾಮಗಾರಿ ನಿರ್ವಹಣಾ ವಿಭಾಗ ಹಳಿಯ ಮೇಲಿದ್ದ ಬಂಡೆಯನ್ನು ತೆರವುಗೊಳಿಸಿದರು.
ಬಂಡೆ ತೆರವುಗೊಳಿಸಿದ ಬಳಿಕ ಮಧ್ಯಾಹ್ನ 12.40ಕ್ಕೆ ರೈಲುಗಳ ಸಂಚಾರ ಪುನರಾರಂಭವಾಗಿದೆ. ಎಡಕುಮೇರಿ ಮತ್ತು ಕಡಗರವಳ್ಳಿ ನಿಲ್ದಾಣಗಳ ನಡುವೆ ಬಂಡೆ ಬಿದ್ದಿದ್ದ ಪ್ರದೇಶದ ಘಾಟ್ ಸ್ಟ್ರೆಚ್‌ನಲ್ಲಿರುವ ಟ್ರ್ಯಾಕ್‌ಗೆ ಯಾವುದೇ ಹಾನಿಯಾಗಿಲ್ಲ ಎಂದು ತುರ್ತು ನಿರ್ವಹಣೆ ವಿಭಾಗದ ತಂಡ ಖಚಿತಪಡಿಸಿದೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement