ಸುಳ್ಯದ ಕೃಷಿ ಸಖಿಯರಿಗೆ ಗೇರು ಸಂಶೋಧನಾ ನಿರ್ದೇಶನಾಲಯ ಮತ್ತು ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯಿಂದ ಗೇರು ಬೆಳೆ ಉತ್ಪಾದನೆ ಮತ್ತು ವೈಜ್ಞಾನಿಕ ಕೊಯ್ಲು ತಂತ್ರಜ್ಞಾನ ಕುರಿತಾದ 3 ದಿನಗಳ ವಿಶೇಷ ತರಬೇತಿ ಕಾರ್ಯಾಗಾರ ನಡೆಯಿತು.
ತಾಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ಕೇಂದ್ರೀಯ ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ಕೇಂದ್ರ ಕಚೇರಿ ವಿಟ್ಲ, ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಸುಳ್ಯ ಇವರ ಜಂಟಿ ಸಹಯೋಗದಲ್ಲಿ ಗೇರು ಬೆಳೆ ಉತ್ಪಾದನೆ ಮತ್ತು ವೈಜ್ಞಾನಿಕ ಕೊಯ್ಲು ತಂತ್ರಜ್ಞಾನಗಳ ಬಗ್ಗೆ ಕೃಷಿ ಸಖಿಯರಿಗೆ ಸಾಮರ್ಥ್ಯಾಭಿವೃದ್ಧಿ ಕುರಿತಾದ 3 ದಿನದ ತರಬೇತಿ ಕಾರ್ಯಗಾರವು ಉದ್ಘಾಟನೆಗೊಂಡಿತು.
ದಿನಕರ ಅಡಿಗ ನಿರ್ದೇಶಕರು ಕೇಂದ್ರೀಯ ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು, ಇವರು ದೀಪ ಪ್ರಜ್ವಲಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು. ಜಯರಾಮ್ ಕೆ. ಇ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ್ ಮಂಗಳೂರು, ಟಿ . ಎನ್ ರವಿಪ್ರಸಾದ್ ಪ್ರಧಾನ ವಿಜ್ಞಾನಿಗಳು ಕೀಟಶಾಸ್ತ್ರ ,ಅಶ್ವತಿ ಚಂದ್ರಕುಮಾರ್ ,ವಿಜ್ಞಾನಿಗಳು ಕೃಷಿ ವಿಸ್ತರಣಾ ವಿಭಾಗ, ಪ್ರಮೋದ್, ಹಿರಿಯ ಸಹಾಯಕ ನಿರ್ದೇಶಕರು ತೋಟಗಾರಿಕಾ ಇಲಾಖೆ ಸುಳ್ಯ, ವಿನೀತ್ ಜಿಲ್ಲಾ ವ್ಯವಸ್ಥಾಪಕರು ಕೃಷಿ ಜೀವನೋಪಾಯ ಜಿಲ್ಲಾ ಪಂಚಾಯತ್ ಮಂಗಳೂರು, ಶ್ವೇತಾ ಟಿ. ಪಿ. ಎಂ ಎನ್.ಆರ್.ಎಲ್.ಎಂ
ತಾಲ್ಲೂಕು ಪಂಚಾಯತ್ ಸುಳ್ಯ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾದ ಭಾಗ್ಯ ವಿಜ್ಞಾನಿಗಳು ತೋಟಗಾರಿಕಾ ವಿಭಾಗ, ಈರದಾಸಪ್ಪ ವಿಜ್ಞಾನಿಗಳು ತಳಿ ಶಾಸ್ತ್ರ ಮತ್ತು ಸಂತಾನೋತ್ಪತ್ತಿ,ಮಂಜುನಾಥ್ ವಿಜ್ಞಾನಿಗಳು ಕೃಷಿ ಯಂತ್ರೋಪಕರಣ ವಿಭಾಗ,ಅರಬಣ್ಣ ಪೂಜಾರಿ ಕಿರಿಯ ತೋಟಗಾರಿಕಾ ನಿರ್ದೇಶಕರು ತೋಟಗಾರಿಕಾ ಇಲಾಖೆ ಸುಳ್ಯ , ತಾಲೂಕಿನ 22 ಕೃಷಿಸಖಿಗಳು ಹಾಜರಿದ್ದರು. ತಾಲೂಕು ಅಭಿಯಾನ ನಿರ್ವಹಣಾ ಘಟಕದ ಎಲ್ಲಾ ಸಿಬ್ಬಂದಿ ಗಳು ಹಾಜರಿದ್ದರು.
ಮೋಹಿನಿ (ನಿಶಾ) ಸಂಪಾಜೆ ಕೃಷಿ ಸಖಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಶ್ವೇತ ಟಿ. ಪಿ. ಎಂ ಸ್ವಾಗತಿಸಿದರು.
ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…
ಕಚ್ಚಾ ಗೋಡಂಬಿಯ ದೊಡ್ಡ ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಂಡರೂ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ…
ಪಡಿತರ ಚೀಟಿಗೆ ಆಧಾರ್ ಆಧಾರಿತ ಇ-ಕೆವೈಸಿ ಮಾಡಲು ಇನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ…
ಅಕ್ರಮ ಅಡಿಕೆ ವ್ಯಾಪಾರ, ಕಳ್ಳಸಾಗಣೆ ಹಾಗೂ ಜಿಎಸ್‌ಟಿ ವಂಚನೆ ಆರೋಪದ ತನಿಖೆಯಲ್ಲಿ ಪಶ್ಚಿಮ…
ಎಥೆನಾಲ್ ಮಿಶ್ರಣವು ಕೇವಲ ಇಂಧನ ನೀತಿಯಲ್ಲ, ಕೃಷಿ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸುವ…
ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…