ಪಶ್ಚಿಮ ಘಟ್ಟಗಳ(western Ghats) ಸುಂದರ ತಾಣಗಳಿಗೆ ಪ್ರವಾಸಿಗರು ಚಾರಣಕ್ಕೆ(Trucking) ತೆರಳುವುದು ಮಾಮೂಲು. ಆದರೆ ಅವರು ಅಲ್ಲಿ ಹೋಗಿ ಪರಿಸರಕ್ಕೆ(Nature) ಹಾನಿಯಾಗುವಂತ ಪ್ಲಾಸ್ಟಿಕ್(Plastic)ವಸ್ತುಗಳನ್ನು ಅಲ್ಲೆ ಎಸೆದು ಬರುತ್ತಿರುವುದು ದುರದೃಷ್ಟಕರ ಸಂಗತಿ. ಅದೂ ವಿದ್ಯಾವಂತರಾಗಿದ್ದುಕೊಂಡು(Educates) ಈ ರೀತಿ ಪರಿಸರವನ್ನು ಹಾಳುಗೆಡವುದು ಎಷ್ಟು ಸರಿ..?. ಚಾರಣಕ್ಕೆಂದು ತೆರಳುವ ಪ್ರವಾಸಿಗರು(Tourist) ಅಲ್ಲಿಗೆ ಕೊಂಡೊಯ್ಯುವ ಪ್ಲಾಸ್ಟಿಕ್ ಬಾಟಲಿ(Plastic Bottle), ಆಹಾರ ಪೊಟ್ಟಣವನ್ನು(Food package) ಅಲ್ಲಿಯೇ ಬಿಟ್ಟು ಬರುತ್ತಾರೆ. ಇದರಿಂದ ಪರಿಸರದ ಮೇಲೂ ಅಪಾರ ಪ್ರಮಾಣದ ಹಾನಿಯಾಗುತ್ತದೆ. ಆದರೆ, ಚಿಕ್ಕಮಗಳೂರಿನ (Chikkamagaluru) ಮೂಡಿಗೆರೆಯ ದೇವರಮನೆ (Devaramane Peak) ಬೆಟ್ಟವನ್ನೇರಿದ ಪ್ರವಾಸಿಗರ ತಂಡವೊಂದು ಕಸ ಹೆಕ್ಕುತ್ತಾ ತನ್ನ ಚಾರಣವನ್ನು ಯಶಸ್ವಿಯಾಗಿ ಕೊನೆಗೊಳಿಸಿದೆ.
ಬೆಂಗಳೂರು ಮೂಲದ ‘ಬೇರು ಭೂಮಿ ಕನ್ನಡ ಮನಸ್ಸುಗಳ ಒಕ್ಕೂಟ’ ಈ ಸ್ವಯಂ ಸೇವಾ ಸಂಸ್ಥೆಯ ಹತ್ತಾರು ಸದಸ್ಯರು ಇಂತಹ ಅಭಿಯಾನ ಕೈಗೆತ್ತಿಕೊಂಡಿದ್ದಾರೆ. ಸ್ವಇಚ್ಛೆಯಿಂದ ಇದರ ಸದಸ್ಯರು ದೇವಿರಮನೆ ಬೆಟ್ಟವನ್ನು ಸ್ವಚ್ಛಗೊಳಿಸಿದ್ದಾರೆ.
ರಾಶಿ ಕಸ ಸಂಗ್ರಹ :ಬೆಂಗಳೂರಿನಿಂದ ಆಗಮಿಸಿದ್ದ ‘ಬೇರು ಭೂಮಿ ಕನ್ನಡ ಮನಸ್ಸುಗಳ ಒಕ್ಕೂಟ’ ಸದಸ್ಯರು ಬೆಳಗ್ಗೆ ಬೇಗನೇ ಬೆಟ್ಟ ತಲುಪಿದ್ದರು. ಬಳಿಕ ಮಧ್ಯಾಹ್ನದವರೆಗೂ ಕಸ ಹೆಕ್ಕಿದ್ದಾರೆ. ಅದರಲ್ಲೂ ಪ್ಲಾಸ್ಟಿಕ್ ಬಾಟಲಿ, ಕವರ್‌ಗಳನ್ನು ಸಂಗ್ರಹಿಸಿದ್ದಾರೆ. ಚಾರಣಕ್ಕೆ ಹೋಗುವುದು ತಪ್ಪಲ್ಲ. ಆದರೆ, ಪರಿಸರಕ್ಕೆ ಹಾನಿ ಮಾಡುವುದು, ಸ್ವಚ್ಛತೆ ಕಾಪಾಡದಂತೆ ನೋಡಿಕೊಳ್ಳುವುದು ಪ್ರವಾಸಿಗರ ಜವಾಬ್ದಾರಿ. ಆದ್ದರಿಂದ ಪರಿಸರವನ್ನು ಸ್ವಚ್ಛವಾಗಿಡಿ ಎಂದು ಸಂಸ್ಥೆಯ ಸ್ವಯಂ ಸೇವಕರು ಮನವಿ ಮಾಡಿದ್ದಾರೆ.ಬಗ್ಗೆ ಹಲವು ಬಾರಿ, ಹಲವು ರೀತಿಯಲ್ಲಿ ಅರಿವು ಮೂಡಿಸಿದರೂ ನಮ್ಮ ವಿದ್ಯಾಂತ ನಾಗರೀಕರು ಈ ವಿಷಯದಲ್ಲಿ ಕಾಡು ಪ್ರಾಣಿಗಳಿಗಿಂತಲೂ ಕಡೆಯಾಗಿ ವರ್ತಿಸುತ್ತಿದ್ದಾರೆ.
- ಅಂತರ್ಜಾಲ ಮಾಹಿತಿ
Tourists who go on a trek leave the plastic bottle and food package there. This causes a lot of damage to the environment. However, a group of tourists who climbed the hill of Devaramane Peak in Mudigere, Chikkamagaluru, successfully ended their trek by collecting garbage.