ಚಾರಣ ಎಂಬ ಒಂದು ಚಟ, “ಹಾಗೆ ಒಂದು ವಿಚಾರ” | ಚಾರಣ ಮಾಡಲು ಪ್ಲಾನ್‌ ಹೇಗಿರಬೇಕು..?

June 11, 2024
11:57 AM
ಚಾರಣ ಎಂದರೆ ಪರಿಸರದ ನಡುವೆ ಪಯಣ, ಪರಿಸರ ಸೌಂದರ್ಯ ಆಸ್ವಾದನೆ. ಹೇಗೆ ತಯಾರಿ ನಡೆಸಬೇಕು..? ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಬರೆದಿದ್ದಾರೆ ವಿಜಯ್‌ ಅವರು...

ಚಟ(Habit).. ಚಾರಣ(Trucking) ಒಂದು ರೀತಿಯ ಚಟ, ಹಾಗೆ ಮದ್ಯಪಾನ(Drinking) ಮಾಡುವುದು ಒಂದು ಚಟ…!! ಇವು ಎರಡು ಟೈಮ್ ಪಾಸ್(Time pass) ಗೆ ಶುರು ಆಗುವಂತಾ ಚಟಗಳು. ಒಂದು ಗುಂಪಿನ ಸ್ನೇಹಿತರು(Friends) “ಬಾರಮ್ಮ ಇವತ್ತು ವೀಕೆಂಡ್ ಒಂದು ಪೆಗ್ ಹಾಕೋಣ ಅಂತಾರೆ”, ಅದೇ ಇನ್ನೊಂದು ಗುಂಪಿನ ಸ್ನೇಹಿತರು “ಬಾರಮ್ಮ ಪ್ರಕೃತಿಯ(Nature) ಕಡೆ ಒಂದು ರೌಂಡ್ ಹಾಕೋಣ ಅಂತಾರೆ” ಮೊದಲ ಬಾರಿ ಚಟದ ರುಚಿಯನ್ನು ಕಂಡ ಸ್ನೇಹಿತ “ಒಳ್ಳೆ ಮಜಾ ಇತ್ತು ಗುರು, ನನಗೆ ಏನು ಆಗಲಿಲ್ಲ. ಒಳ್ಳೆ ನಿದ್ದೆ ಕೂಡ ಬಂದು ಮತ್ತೊಮ್ಮೆ ಹೋಗೋಣ” ಅಂತಾನೆ! ಚಾರಣ ಇರಲಿ ಮದ್ಯಪಾನ ಮಾಡುವುದರಲ್ಲಿ ಇರಲಿ…!! ಹಾಗೆ ಒಂದು ದಿನದ ಚಾರಣದಿಂದ ಎರಡು ದಿನದ ಚಾರಣ ಶುರು ಆಗತ್ತೆ. ಅದೇ ರೀತಿ, ಒಂದು ಪೆಗ್ ಇಂದ ಎರಡು ಮೂರು ಪೆಗ್ ಗೆ ತಿರುಗುತ್ತದೆ. ಚಟ…!!

Advertisement
Advertisement

ಚಾರಣ ಮಾಡುವವರು, ಎರಡು ದಿನದ ಚಾರಣದಿಂದ ಮೂರು ನಾಲ್ಕು ದಿನದ ಚಾರಣಕ್ಕೆ ಪ್ಲಾನ್ ಮಾಡುತ್ತಾರೆ. ಒಮ್ಮೆ ಕರ್ನಾಟಕ ಸಹ್ಯಾದ್ರಿ ಗುಡ್ಡಗಾಡು ಗಳ ಚಾರಣ ಮುಗಿದ ನಂತರ ದಕ್ಷಿಣ ಭಾರತದ ಸಹ್ಯಾದ್ರಿ ವಲಯ ತಮಿಳ್ನಾಡು ಮತ್ತು ಕೇರಳ ಕಡೆಯ ಚಾರಣ ಶುರು ಮಾಡಿಕೊಳ್ಳುತ್ತಾರೆ. ಹಾಗೆ ಒಂದು ವಾರದ ಚಾರಣ ಪ್ಲಾನ್ ಆಗತ್ತೆ (ಎರಡು ಮೂರು ಚರಣಗಳನ್ನು ಒಟ್ಟಿಗೆ ಮಾಡುವುದು). ಅದರ ಮುಂದೆ ಉಳಿದಿದ್ದು ಹಿಮಾಲಯ..!! ಹಿಮಾಲಯದ ಚಾರಣ ಮೊದಮೊದಲಿಗೆ ವೆಲ್ ಆರ್ಗನೈಜ್ಡ್ ಕಂಪನಿ ಇಂದ ಶುರು ಆಗುತ್ತದೆ. ಅಂದರೆ ಯೂತ್ ಹಾಸ್ಟೆಲ್ ಅಸೋಸಿಯೇಷನ್, ಇಂಡಿಯಾ ಹೈಕ್ಸ್, ಟ್ರೆಕ್ ದ ಹಿಮಾಲಯ, ಮುಂತಾದ ಕಂಪನಿಗಳಿಂದ. ಹಿಮಾಲಯದ ಚಾರಣಕ್ಕೆ ಬೇಕಾಗುವಂತ ಸಾಮಗ್ರಿಗಳ ಸಂಗ್ರಹ ಶುರು ಆಗುತ್ತದೆ.

ಮೊದಮೊದಲಿಗೆ ವೆಲ್ ಆರ್ಗನೈಜ್ಡ್ ಕಂಪನಿ ಇಂದ ನಡೆಯುವ ಚಾರಣಗಳು ಇಷ್ಟ ಆಗುತ್ತದೆ, ನಂತರ ಹಿಮಾಲಯದ ಯಾತ್ರೆಗಳು ಶುರು ಮಾಡಿಕೊಳ್ಳುತ್ತಾರೆ ಈ ಚಾರಣಿಗರು. ಅಂದರೆ ಕೇದಾರನಾಥ, ಅಮರನಾಥ್ ಯಾತ್ರಾ, ಪಂಚ ಕೇದಾರ ನಲ್ಲಿ ತುಂಗನಾತ್, ರುದ್ರನಾತ್, ಮಧ್ಯ ಮಹೇಶ್ವರ ಮುಂತಾದವುಗಳನ್ನು. ಇಷ್ಟರಲ್ಲಿ ಹಿಮಾಲಯ ಪಾಸ್ ಗಳ ಮಾಹಿತಿ ಬಹಳಷ್ಟು ಸಂಗ್ರಹವಾಗಿರುತ್ತದೆ. ಇದರ ಜೊತೆಗೆ ಒಂದು ವಿಚಿತ್ರ ಚಟ ಹುಟ್ಟಿಕೊಳ್ಳುತ್ತದೆ, ಜನ ಕಡಿಮೆ ಇರುವ ಚಾರಣವನ್ನು ಮಾಡಬೇಕು ಅಥವಾ ಯಾರು ಜಾಸ್ತಿ ಮಾಡಿರದ ಚಾರಣ ಮಾಡಬೇಕೆಂದು. ಕೆಲವು ಸ್ಥಳೀಯ ಕಂಪನಿಗಳು ಇವನ್ನು ಮಾಡಿಸಲಿಕ್ಕೆ ತಯಾರ್ ಕೂಡ ಇರುತ್ತದೆ. ಇಂತವರ ಕಾಂಟ್ಯಾಕ್ಟ್ ಪಡೆದು ಕಷ್ಟಕರವಾದ ಚಾರಣಗಳನ್ನು ಮಾಡುವ ಚಟ ಶುರು ಆಗಿಬಿಡುತ್ತದೆ…!!

ಇಷ್ಟರಲ್ಲೇ ಸಮುದ್ರ ಮಟ್ಟದಿಂದ 14 ಸಾವಿರ ಅಡಿ ಎತ್ತರದ ಚಾರಣ ಮಾಡಿದೆ, 15 ಸಾವಿರ, 16 ಸಾವಿರ, 18 ಸಾವಿರಕ್ಕೆ ಏರುತ್ತಾ ಹೋಗಿ ಹೆಮ್ಮೆಯ ವಿಚಾರಕ್ಕೆ ಒಳಪಡುತ್ತಾರೆ. ಇನ್ನಷ್ಟು ಚಾರಣಿಗರು ಎವರೆಸ್ಟ್ ಬೇಸ್ ಕ್ಯಾಂಪ್, ಅನ್ನಪೂರ್ಣ ಬೇಸ್ ಕ್ಯಾಂಪ್, ಕಾಂಚನಜುಂಗಾ ಬೇಸ್ ಕ್ಯಾಂಪ್ ಮುಂತಾದ ಕಷ್ಟಕರವಾದ ಚಾರಣಗಳನ್ನು ಕೈಗೊಳ್ಳುತ್ತಾರೆ. ಇಂತಹ ಚಾರಣಗಳಲ್ಲಿ ಬಹು ಮುಖ್ಯವಾದ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು, ಅವು 1. ದೇಹದ ಆರೋಗ್ಯ 2. ಮಾನಸಿಕ ಆರೋಗ್ಯ 3. ಪ್ರಕೃತಿಯ ಹವಾಮಾನ ಬದಲಾವಣೆ. ಇವು ಮೂರರಲ್ಲಿ ಯಾವುದಾದರೂ ಒಂದು ಸರಿ ಇಲ್ಲವೆಂದಲ್ಲಿ ಚಾರಣವನ್ನು ನಿಲ್ಲಿಸಿ ಹಿಂತಿರುಗಿ ಬರುವುದು ಬಹಳ ಒಳ್ಳೆಯದು. ಇಲ್ಲವಾದಲ್ಲಿ ಜೀವ ಕಳೆದು ಕೊಳ್ಳಬೇಕಾಗುತ್ತದೆ.

ಇವಷ್ಟೇ ಅಲ್ಲ, ಇನ್ನ ಒಂದು ಅತೀ ಮುಖ್ಯವಾದ ವಿಷಯ ಎಂದರೆ, ಚಾರಣವನ್ನು ಆತುರ ಆತುರದಲ್ಲಿ ಮಾಡಬಾರದು. ಪಶ್ಚಿಮ ಘಟ್ಟಗಳಿಗೂ ಹಿಮಾಲಯ ಪರ್ವತಶ್ರೇಣಿಗಳಿಗೂ ಬಹಳಷ್ಟು ವ್ಯತ್ಯಾಸ ಇದೆ. ಪಶ್ಚಿಮ ಘಟ್ಟಗಳಲ್ಲಿ ಒಂದು ದಿನಕ್ಕೆ ಹೆಚ್ಚು ಅಂದರೆ 20 ರಿಂದ 22 ~ 25 ಕಿಲೋಮೀಟರ್ ಚಾರಣ ಮಾಡಬಹುದು. ಆದರೆ ಹಿಮಾಲಯದಲ್ಲಿ ಬೆಟ್ಟ ಏರುವಾಗ ಅತೀ ನಿದಾನ, ಅಂದರೆ ದಿನಕ್ಕೆ 8 ರಿಂದ 10 ~ 12 ಕಿಲೋಮೀಟರ್ ಚಾರಣ ಮಾಡುವುದು ಒಳ್ಳೆಯದು. ಗಮನ ಇಡಬೇಕಾದ ವಿಷಯ ಅಂದರೆ ಅಡಿಗಳ ಎತ್ತರ…!! ದಿನಕ್ಕೆ ಒಂದು ಸಾವಿರ ಅಡಿಗಳಷ್ಟು ಎತ್ತರ ಏರುವುದು ಉತ್ತಮ. ಯಾಕೆಂದರೆ ಎತ್ತರ ಏರಿದಷ್ಟು ಆಮ್ಲಜನಕ (ಆಕ್ಸಿಜನ್) ಕಡಿಮೆ ಆಗುವುದು, ಇದರಿಂದ ಸುಸ್ತು, ತಲೆ ತಿರುಗುವುದು, ವಾಂತಿ ಆಗುವುದು, ಹೊಟ್ಟೆ ಹಸಿವು ಇಲ್ಲದಂತೆ ಆಗುವುದು ಎಲ್ಲಾ ಆಗುತ್ತದೆ. ಹೀಗೆಲ್ಲಾ ಆದಲ್ಲಿ ತಕ್ಷಣ ಕೆಳಗೆ ಬರುವುದು ಬಹಳ ಒಳ್ಳೆಯದು.

Advertisement

ಹಿಮಾಲಯದಲ್ಲಿ ಚಾರಣ ಕೈಗೊಳ್ಳುವ ಮುನ್ನ ಒಮ್ಮೆ ಯೋಚಿಸಿ, ವೆಲ್ ಆರ್ಗನೈಜ್ಡ್ ವೆಲ್ ಡಿಸೈನ್ಡ್ ಚಾರಣವೋ ಅಥವಾ ಸ್ವಂತ ಪ್ಲಾನ್ ಮಾಡಿದ ಚಾರಣವೋ ಎಂದು. ಆದರೂ… ಚಾರಣ ಒಂದು ಚಟ, ಹೌದೋ ಇಲ್ಲವೋ??? ಇನ್ನ ಮದ್ಯಪಾನ ಎಂಬ ಚಟವನ್ನು ವಿವರಿಸುವ ಅಗತ್ಯ ಇಲ್ಲ ಅನ್ನಿಸುತ್ತದೆ

ಬರಹ :
ವಿಜಯ್ ಎಸ್ ಬಿ

 

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರೈತರಿಗೆ ಆಶಾದಾಯಕ ಕೃಷಿಭಾಗ್ಯ ಯೋಜನೆ
May 23, 2025
10:32 PM
by: ದ ರೂರಲ್ ಮಿರರ್.ಕಾಂ
ಬೆಳೆ ವಿಮೆ | ದತ್ತಾಂಶ ತಾಳೆ ಹೊಂದಿಸಲು  ಮೇ 31 ಕೊನೆಯ ದಿನ
May 23, 2025
10:27 PM
by: The Rural Mirror ಸುದ್ದಿಜಾಲ
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ | ಕೊಡಗು ಜಿಲ್ಲೆಯ ಬಹುತೇಕ ಕಡೆ ಮಳೆ |
May 23, 2025
10:22 PM
by: The Rural Mirror ಸುದ್ದಿಜಾಲ
ಬೆಂಗಳೂರು-ಮೈಸೂರಿನಲ್ಲಿ ವಿವಿಧ  ತಳಿಗಳ ಮಾವು, ಹಲಸು ಪ್ರದರ್ಶನ ಮತ್ತು ಮಾರಾಟ
May 23, 2025
10:04 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group