Advertisement
MIRROR FOCUS

ತ್ರಿಪುರಾದಲ್ಲಿ 7 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತಾಳೆ ಬೆಳೆಯುವ ಆಸಕ್ತಿ | ಏಕೆ ತಾಳೆಯತ್ತ ಆಸಕ್ತವಾಗಿವೆ ಈಶಾನ್ಯ ರಾಜ್ಯಗಳು ? |

Share

ತ್ರಿಪುರಾ ಸರ್ಕಾರವು 2026-27 ರ ಹೊತ್ತಿಗೆ ಸುಮಾರು 7 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತಾಳೆ ಕೃಷಿಯನ್ನು ಬೆಳೆಸುವ ಕಡೆಗೆ ಆಸಕ್ತವಾಗಿದೆ. ಇದಕ್ಕಾಗಿ ವಿವಿಧ ಕಂಪನಿಗಳ ಜೊತೆ ಒಪ್ಪಂದವನ್ನೂ ಮಾಡಿಕೊಂಡಿದೆ. ಇದೀಗ ಸರ್ಕಾರವೂ ತಾಳೆ ಕೃಷಿಯತ್ತ‌ ಆಸಕ್ತವಾಗಿದೆ.ಈಗಾಗಲೇ ಈಶಾನ್ಯ ರಾಜ್ಯದಲ್ಲಿ 56.35 ಹೆಕ್ಟೇರ್ ಭೂಮಿಯಲ್ಲಿ ತಾಳೆ ಎಣ್ಣೆ ಗಿಡಗಳನ್ನು ಬೆಳೆಸಲಾಗುತ್ತಿದೆ.

Advertisement
Advertisement

ತ್ರಿಪುರಾದಲ್ಲಿ ತಾಳೆ ಎಣ್ಣೆ ಕೃಷಿಯನ್ನು ವಿಸ್ತರಿಸಲು, ಭಾರತೀಯ ಕೃಷಿ ಸಂಶೋಧನಾ ಮಂಡಳಿ  ಮತ್ತು ಭಾರತೀಯ ತಾಳೆ ಸಂಶೋಧನಾ ಸಂಸ್ಥೆಯಿಂದ 2020 ರಲ್ಲಿ ಡಿಜಿಟಲ್ ಮ್ಯಾಪಿಂಗ್ ಮಾಡಲಾಗಿತ್ತು. ಈ ಪ್ರಕ್ರಿಯೆಯಲ್ಲಿ, ತ್ರಿಪುರಾ ರಾಜ್ಯದಲ್ಲಿ 1,46,364 ಹೆಕ್ಟೇರ್ ಭೂಮಿಯನ್ನು ಗುರುತಿಸಲಾಗಿದೆ. ಅದರಲ್ಲಿ 2026-27ರ ವೇಳೆಗೆ 7000 ಹೆಕ್ಟೇರ್ ಭೂಮಿಯನ್ನು ಪಾಮ್ ಆಯಿಲ್ ಕೃಷಿಗೆ ಒಳಪಡಿಸಲಾಗುವುದು ಎಂದು ಅಲ್ಲಿನ ಕೃಷಿ ಸಚಿವ ರತನ್ ಲಾಲ್ ನಾಥ್ ಹೇಳಿದ್ದಾರೆ. ಇದಕ್ಕಾಗಿ ಕೃಷಿ ಇಲಾಖೆಯು ಗೋದ್ರೇಜ್ ಅಗ್ರೋವೆಟ್ ಲಿಮಿಟೆಡ್ ಮತ್ತು ಪತಂಜಲಿ ಫುಡ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ರಾಷ್ಟ್ರೀಯ ಖಾದ್ಯ ತೈಲ ಮಿಷನ್ ಅಡಿಯಲ್ಲಿ ಒಪ್ಪಂದಗಳಿಗೆ ಸಹಿ ಕೂಡಾ ಹಾಕಿದೆ ಎಂದು ಅವರು ಹೇಳಿದರು.

ಆಂಧ್ರಪ್ರದೇಶದಿಂದ ಗೋದ್ರೇಜ್ ಅಗ್ರೋವೆಟ್ ಸಹ ತಾಳೆ ಗಿಡಗಳನ್ನು ತಂದು 52.01 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಿದೆ. ಪತಂಜಲಿ ಫುಡ್ ಪ್ರೈವೇಟ್ ಲಿಮಿಟೆಡ್ ಸಹ 56.35 ಹೆಕ್ಟೇರ್‌ನಲ್ಲಿ ತಾಳೆ ಗಿಡಗಳನ್ನು ನೆಟ್ಟಿದೆ. ತ್ರಿಪುರಾ ರಾಜ್ಯವು ತಾಳೆ  ಕೃಷಿಗೆ ಉತ್ತಮ ವಾತಾವರಣ ಹೊಂದಿದೆ ಎಂದು ಸಚಿವರು ಹೇಳಿದ್ದಾರೆ. ತಾಳೆ ಎಣ್ಣೆ ಕೃಷಿಯ ಬಗ್ಗೆ ತರಬೇತಿ ನೀಡಲು ರಾಜ್ಯವು ಈಗಾಗಲೇ 18 ಅಧಿಕಾರಿಗಳನ್ನು ಆಂಧ್ರಪ್ರದೇಶಕ್ಕೆ ಕಳುಹಿಸಿದೆ ಎಂದು ಸಚಿವರು ಹೇಳಿದರು. ಇಲಾಖೆಯು ಈಗಾಗಲೇ 2123 ರೈತರಿಗೆ ತರಬೇತಿ ನೀಡಿದ್ದು, ಅವರಲ್ಲಿ 1076 ರೈತರು ಉತ್ತಮ ಲಾಭಕ್ಕಾಗಿ ತಾಳೆ ಎಣ್ಣೆ ಗಿಡಗಳನ್ನು ಬೆಳೆಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.

ಗುಡ್ಡಗಾಡು ಪ್ರದೇಶದಲ್ಲಿ ತಾಳೆ ಎಣ್ಣೆ ಬೆಳೆಯುವ ಸಾಮರ್ಥ್ಯವಿರುವುದರಿಂದ ಕೃಷಿ ಇಲಾಖೆ ಈ ಸಾಧ್ಯತೆಯನ್ನು ಅನ್ವೇಷಿಸಿದೆ. ಸದ್ಯಕ್ಕೆ ಕೃಷಿ ಅಭಿವೃದ್ಧಿಗೆ ಹಾಗೂ ಭವಿಷ್ಯದ ದೃಷ್ಟಿಯಿಂದಲೂ ತಾಳೆ ಕೃಷಿಯ ಬಗ್ಗೆ ತ್ರಿಪುರಾ ಸಹಿತ ಈಶಾನ್ಯ ರಾಜ್ಯಗಳು ಆಸಕ್ತವಾಗಿದೆ. ಇದರ ಜೊತೆಗೆ ರಬ್ಬರ್‌ ಬೆಳೆಯತ್ತಲೂ ಮನಸ್ಸು ಮಾಡಿದ್ದವು. ಆದರೆ ತಾಳೆ ಆಹಾರ ಬೆಳೆಯಾಗಿಯೂ ಅಗತ್ಯ ಇರುವುದರಿಂದ ಮತ್ತು ನಾಟಿ ಮಾಡಿದ ನಾಲ್ಕು ವರ್ಷಗಳ ನಂತರ ತಾಳೆ ಮರದಿಂದ ಆದಾಯ ಲಭ್ಯವಾಗುತ್ತದೆ ಮತ್ತು ರೈತರು ಅದರಿಂದ 30 ವರ್ಷಗಳವರೆಗೆ ಆದಾಯ ಪಡೆಯಬಹುದು ಎಂಬುದು ಸರ್ಕಾರ ಯೋಚನೆ.

ಸದ್ಯ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಒಡಿಶಾ, ಕರ್ನಾಟಕ, ಗೋವಾ, ಅಸ್ಸಾಂ, ತ್ರಿಪುರಾ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಅರುಣಾಚಲ ಪ್ರದೇಶಗಳು ಪ್ರಮುಖ  ತಾಳೆ ಬೆಳೆಯುವ ರಾಜ್ಯಗಳಾಗಿವೆ. ಇಂಡೋನೇಷ್ಯಾ, ಮಲೇಷ್ಯಾ, ನೈಜೀರಿಯಾ, ಕಾಂಬೋಡಿಯಾ ಮತ್ತು ಥಾಯ್ಲೆಂಡ್‌ನಂತಹ ದೇಶಗಳು ವಿಶ್ವದ ಶೇಕಡಾ 90 ರಷ್ಟು ತಾಳೆ ಎಣ್ಣೆಯನ್ನು ಉತ್ಪಾದಿಸುತ್ತವೆ. ಈಗ ಖಾದ್ಯ ತೈಲಕ್ಕೆ ಪ್ರಪಂಚದಾದ್ಯಂತ ಬೇಡಿಕೆ ಇರುವುದರಿಂದ ಕೃಷಿಯಲ್ಲಿ ತಾಳೆ ಬೆಳೆಯ ಕಡೆಗೆ ತಾಳೆ ಬೆಳೆಗೆ ಸೂಕ್ತವಾದ ವಾತಾವರಣ ಹೊಂದಿರುವ ದೇಶಗಳು ಹೆಚ್ಚು ಆಸಕ್ತವಾಗಿದೆ.

The Tripura government has set a target of bringing 7000 hectares of land under palm oil cultivation by 2026-27 financial year, a senior minister has said. At present, palm oil plants are cultivated in 56.35 hectares of land in the northeastern state.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!

ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ,  ಅದು ಗಂಭೀರ ಆರೋಗ್ಯ ಅಪಾಯಗಳಿಗೆ…

2 hours ago

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ | ಶಾಶ್ವತ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದು ಕುಮಾರಸ್ವಾಮಿ ಮನವಿ

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…

3 hours ago

ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರಿಗೆ ಲಾಭ

ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…

3 hours ago

ಜಲಜೀವನ್ ಮಿಷನ್ ವೇಗಕ್ಕೆ ಕಟ್ಟುನಿಟ್ಟಿನ ಗಡಿ : ಉಳಿದ ಕಾಮಗಾರಿಗಳು ತ್ವರಿತ ಪೂರ್ಣಗೊಳಿಸಿ

ಜಲಜೀವನ್‌ ಮಿಷನ್ ಯೋಜನೆಯ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್…

3 hours ago

ಕೃಷಿಯ ಮೌನ ಆಕ್ರಂದನ | ಕಾಡಂಚಿನ ಅಡಿಕೆ ತೋಟಗಳ ಅಳಲು

ಕರಾವಳಿ ಕರ್ನಾಟಕದ ಅಡಿಕೆ ತೋಟಗಳು ಕಾಡುಪ್ರಾಣಿಗಳ ಹಾವಳಿಯಿಂದ ಭಾರೀ ನಷ್ಟ ಅನುಭವಿಸುತ್ತಿವೆ. ಮಾನವ–ವನ್ಯಜೀವಿ…

3 hours ago

ಜಾಗತಿಕ ಒತ್ತಡ – ಗ್ರಾಮೀಣ ಜೀವನೋಪಾಯ | ಅಡಿಕೆ ಕುರಿತ ನಿಜವಾದ ಚರ್ಚೆ ಈಗ ಆರಂಭವಾಗಬೇಕು

ಭಾರತವು ಜಗತ್ತಿನ ಅತಿದೊಡ್ಡ ಅಡಿಕೆ ಉತ್ಪಾದಕ ರಾಷ್ಟ್ರವಾಗಿದ್ದು, ಜಾಗತಿಕ ಉತ್ಪಾದನೆಯ ಸುಮಾರು 63…

3 hours ago