ಸಾವಯವ ಕೃಷಿ ಉತ್ತೇಜನಕ್ಕೆ ಆದ್ಯತೆ | 256 ಒಂಗೋಲ್ ಜಾನುವಾರುಗಳನ್ನು ನೀಡಲಿರುವ ತಿರುಪತಿ ದೇವಸ್ಥಾನ |

January 17, 2022
7:00 AM

ಸಾವಯವ ಕೃಷಿಯನ್ನು ಉತ್ತೇಜಿಸುವ  ಭಾಗವಾಗಿ ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಪ್ರಕಾಶಂ ಜಿಲ್ಲೆಯ ರೈತರಿಗೆ ಓಂಗೋಲ್ ತಳಿಯ 256 ಜಾನುವಾರುಗಳನ್ನು ನೀಡಲಿದೆ.

ಆಂದ್ರಪ್ರದೇಶದ  ಚಿರಾಳ, ಕೂರಿಸಪದವು, ಅರ್ಧವೀಡು, ಮುರ್ತೂರು ಮಂಡಲಗಳಿಗೆ  40 ಹಸುಗಳು ಹಾಗೂ ಹೋರಿಗಳನ್ನು ನೀಡಲಾಗಿದೆ. ಉಳಿದ ಜಾನುವಾರುಗಳನ್ನು ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ನೀಡಲಾಗುವುದು. ಜಿಲ್ಲೆಯ 56 ಮಂಡಲಗಳ ಪೈಕಿ 45 ಮಂಡಲಗಳ ಸಾವಯವ ಕೃಷಿಕರು  ಅರ್ಜಿ ಸಲ್ಲಿಸಿದ್ದಾರೆ.

ಸಾವಯವ ಕೃಷಿ ಕಾರ್ಯಕ್ರಮದಡಿ ಪ್ರತಿ ರೈತರಿಗೆ ಒಂದು ಹಸು ಅಥವಾ ಜೋಡಿ ಎತ್ತುಗಳ ನ್ನು ಟಿಟಿಡಿ ಮಂಜೂರು ಮಾಡಿದೆ. ಮೊದಲ ಬ್ಯಾಚ್‌ನ ಓಂಗೋಲ್ ತಳಿಯ ಜಾನುವಾರು ಮಂಗಳವಾರ  ಆಗಮಿಸಿದ್ದು ಅದೇ ದಿನ ರೈತರಿಗೆ ವಿತರಿಸಲಾಗಿದೆ. ಉಳಿದ ಗೋವುಗಳನ್ನು ಸದ್ಯವೇ ನೀಡಲಾಗುವುದು ಎಂದು ಝಡ್‌ವಿಎನ್‌ಎಫ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ಸುಭಾಷಿಣಿ ಹೇಳಿದರು.

ಪ್ರಸಾದ ತಯಾರಿಕೆಗಾಗಿ, ಟಿಟಿಡಿ ಮಂಡಳಿಯು ಸಾವಯವವಾಗಿ ಬೆಳೆದ 6,000 ಕ್ವಿಂಟಲ್ ಭತ್ತವನ್ನು ಸೂಕ್ತ ಬೆಂಬಲ ಬೆಲೆಯಲ್ಲಿ ಜಿಲ್ಲಾ ಅಧಿಕಾರಿಗಳಿಂದ ಖರೀದಿಸಲು ಒಪ್ಪಿಗೆಯನ್ನು ನೀಡಿದೆ. ಆದುದರಿಂದ 625 ರೈತರು ಝಡ್‌ಬಿಎನ್‌ಎಫ್ ಅಥವಾ ಸಾವಯವ ಕೃಷಿ ಮೂಲಕ ಜಿಲ್ಲೆಯ ಕೃಷಿ ಅಧಿಕಾರಿಗಳ ಬೆಂಬಲದೊಂದಿಗೆ ಬೆಳೆ ಬೆಳೆಯಲು ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

‘ರೋಸ್ಟೆಡ್ ಅಡಿಕೆ’ ಆಮದು ವರ್ಗೀಕರಣಕ್ಕೆ ಮತ್ತೊಂದು ತಿರುವು – ಹೈಕೋರ್ಟ್ ತೀರ್ಪು ಉಲ್ಲೇಖಿಸಿ ಅರ್ಜಿ ತಿರಸ್ಕರಿಸಿದ ಮುಂಬೈ ಪ್ರಾಧಿಕಾರ
September 28, 2026
10:20 PM
by: ದ ರೂರಲ್ ಮಿರರ್.ಕಾಂ
ಬರಕ್ಕೆ ರಾಗಿ ಕೂಡ ಸೋಲುತ್ತಿದೆ – ‘ಬರ ನಿರೋಧಕ’ ಎಂದರೆ ಮಳೆ ಇಲ್ಲದಿದ್ದರೂ ಬೆಳೆಯುತ್ತದೆ ಎಂದಲ್ಲ!
September 28, 2026
9:05 PM
by: ದ ರೂರಲ್ ಮಿರರ್.ಕಾಂ
₹2,000ಕ್ಕಿಂತ ಹೆಚ್ಚಿನ UPI ವಹಿವಾಟಿನ MDRಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ
September 28, 2026
2:31 PM
by: ದ ರೂರಲ್ ಮಿರರ್.ಕಾಂ
ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತಕ್ಕೆ ಎರಡು ಪದಕ: ಪುರುಷರಿಗೆ ಬೆಳ್ಳಿ, ಮಹಿಳೆಯರಿಗೆ ಕಂಚು – ಪ್ರಧಾನಿ ಮೋದಿ ಅಭಿನಂದನೆ
September 28, 2026
1:43 PM
by: ಮಿರರ್‌ ಡೆಸ್ಕ್‌

You cannot copy content of this page - Copyright -The Rural Mirror