ಜ.4 ರಿಂದ ಮಂಗಳೂರಿನಲ್ಲಿ ಗೆಡ್ಡೆಗೆಣಸು-ಸೊಪ್ಪಿನ ಮೇಳ

January 3, 2025
9:57 PM

ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ ಜ. 4 ಮತ್ತು 5 ರಂದು ಮಂಗಳೂರಿನ ಸಂಘ ನಿಕೇತನದಲ್ಲಿ ಗಡ್ಡೆ ಗೆಣಸು ಮತ್ತು ಸೊಪ್ಪಿನ ಮೇಳ ಆಯೋಜಿಸಲಾಗಿದೆ.

Advertisement

ಜ. 4 ರಂದು ಬೆಳಗ್ಗೆ 9.30ಕ್ಕೆ ಕೊಂಡೆವೂರು ಶ್ರೀ ಯೊಗಾನಂದ ಸರಸ್ವತಿ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಸಂಸದ ಕ್ಯಾ. ಬ್ರಿಜೇಶ್ ಚೌಟ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್, ಮೇಯರ್ ಮನೋಜ್ ಕುಮಾರ್, ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಾವಯವ ಕೃಷಿಕ ಗ್ರಾಹಕ ಬಳಗದ ಕಾರ್ಯಾಧ್ಯಕ್ಷ ಜಿ.ಆರ್. ಪ್ರಸಾದ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೇಳದಲ್ಲಿ 350 ಕ್ಕೂ ಅಧಿಕ ವಿಧದ ಗಡ್ಡೆ ಗೆಣಸು ಹಾಗೂ 150 ವಿಧದ ಸೊಪ್ಪುಗಳು ಪ್ರದರ್ಶನಗೊಳ್ಳಲಿವೆ. ಬೆಳಗ್ಗೆ 9 ರಿಂದ ಸಂಜೆ 7 ರವೆಗೆ ನಡೆಯುವ ಮೇಳದಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲದೆ, ಮಹಾರಾಷ್ಟ್ರ, ಒರಿಸ್ಸಾ, ಆಂಧ್ರ ಪ್ರದೇಶ, ಕೇರಳ ರಾಜ್ಯಗಳ ರೈತರು ಭಾಗವಹಿಸಲಿದ್ದಾರೆ ಎಂದರು.

ಗಡ್ಡೆ ಗೆಣಸಿನ ಅರಿವು ಮೂಡಿಸುವ ದೃಷ್ಟಿಯಿಂದ ನಡೆಸಲಾಗಿರುವ ಪ್ರಬಂಧ ಸ್ಪರ್ಧೆ ಹಾಗೂ ಪೋಸ್ಟ್ ಕಾರ್ಡ್‌ನಲ್ಲಿ ಚಿತ್ರ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಗಡ್ಡೆ ಗೆಣಸು ಹಾಗೂ ಸೊಪ್ಪು ಕೃಷಿಯ ಬಗ್ಗೆ ಮಾಹಿತಿ ಕೈಪಿಡಿಯೂ ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳಲಿದೆ. ಸೊಪ್ಪು ಹಾಗೂ ಗಡ್ಡೆ ಗೆಣಸುಗಳ ತಾಜಾ ತಿಂಡಿ ತಿನಿಸುಗಳ ಮಾರಾಟ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ : ಜ. 4 ರಂದು ಸಂಜೆ 6..30 ರಿಂದ ರಾಜ್ಯ ಪ್ರಶಸ್ತಿ ವಿಜೇತ ಕಲಾಕುಂಭ ಕಲಾವಿದರಿಂದ ತುಳುನಾಡ ವೈಭವ ನೃತ್ಯರೂಪಕ, ಜ.5 ರಂದು ಮಧ್ಯಾಹ್ನ 2.30 ರಿಂದ ಪಿರಿಯಾಪಟ್ಟಣ ಜೇನುಕುರುಬ ಜನಾಂಗದ ಮಕ್ಕಳಿಂದ ಬುಡಕಟ್ಟು ನೃತ್ಯ, ಸರಯೂ ಬಾಲ ಯಕ್ಷವೃಂದದಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ಎರಡು ದಿನ ರೈತರಿಗಾಗಿ ತರಬೇತಿ ಆಯೋಜಿಸಲಾಗಿದೆ. ಗೆಡ್ಡೆ ಗೆಣಸು ಮತ್ತು ಸೊಪ್ಪು ಕೃಷಿ ತರಬೇತಿ ನೀಡಲಾಗುವುದು. ಗೆಡ್ಡೆ ಗೆಣಸು ಹಾಗೂ ಸೊಪ್ಪಿನ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗೋಷ್ಟಿ ಆಯೋಜಿಸಲಾಗಿದೆ. ಗಡ್ಡೆ ಗೆಣಸು, ಸೊಪ್ಪಿನ ವಿವಿಧ ಆಹಾರ ಖಾದ್ಯಗಳ ಮಾರಾಟ ಮಳಿಗೆಗಳು ಇರಲಿವೆ ಎಂದರು.

ಪ್ರಮುಖರಾದ ಎಸ್.ಎ. ಪ್ರಭಾಕರ ಶರ್ಮಾ, ಕಾರ್ಯದರ್ಶಿ ಕೆ. ರತ್ನಾಕರ ಕುಳಾಯಿ, ಸಮಿತಿ ಸಂಚಾಲಕ ಎ. ಸೋಮಪ್ಪ ನಾಯ್ಕ, ರಾಮಚಂದ್ರ ಉಪಸ್ಥಿತರಿದ್ದರು.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?
May 6, 2025
7:44 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಪ್ರೀತಿಯ ಹಂಬಲ ಇರುವ, ವಯಸ್ಸಾದ, ಅನುಭವ ಹೊಂದಿದ ವ್ಯಕ್ತಿಗಳನ್ನು ಗೌರವಿಸುವ 5 ರಾಶಿಯ ಹುಡುಗಿಯರು |
May 6, 2025
7:18 AM
by: ದ ರೂರಲ್ ಮಿರರ್.ಕಾಂ
ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ
May 6, 2025
7:02 AM
by: The Rural Mirror ಸುದ್ದಿಜಾಲ
ಸಹಜ ಸಾವನ್ನಪ್ಪುವ ಕಾಡುಪ್ರಾಣಿಗಳನ್ನು ಸುಡುವಂತಿಲ್ಲ | ಪ್ರಕೃತಿ ಚಕ್ರ ಕಾಪಾಡಲು ಸಹಕಾರಿ | ರಾಜ್ಯ ಸರ್ಕಾರದಿಂದ ಸುತ್ತೋಲೆ
May 5, 2025
10:56 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group