ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ ಜ. 4 ಮತ್ತು 5 ರಂದು ಮಂಗಳೂರಿನ ಸಂಘ ನಿಕೇತನದಲ್ಲಿ ಗಡ್ಡೆ ಗೆಣಸು ಮತ್ತು ಸೊಪ್ಪಿನ ಮೇಳ ಆಯೋಜಿಸಲಾಗಿದೆ.
ಜ. 4 ರಂದು ಬೆಳಗ್ಗೆ 9.30ಕ್ಕೆ ಕೊಂಡೆವೂರು ಶ್ರೀ ಯೊಗಾನಂದ ಸರಸ್ವತಿ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಸಂಸದ ಕ್ಯಾ. ಬ್ರಿಜೇಶ್ ಚೌಟ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್, ಮೇಯರ್ ಮನೋಜ್ ಕುಮಾರ್, ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಾವಯವ ಕೃಷಿಕ ಗ್ರಾಹಕ ಬಳಗದ ಕಾರ್ಯಾಧ್ಯಕ್ಷ ಜಿ.ಆರ್. ಪ್ರಸಾದ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇಳದಲ್ಲಿ 350 ಕ್ಕೂ ಅಧಿಕ ವಿಧದ ಗಡ್ಡೆ ಗೆಣಸು ಹಾಗೂ 150 ವಿಧದ ಸೊಪ್ಪುಗಳು ಪ್ರದರ್ಶನಗೊಳ್ಳಲಿವೆ. ಬೆಳಗ್ಗೆ 9 ರಿಂದ ಸಂಜೆ 7 ರವೆಗೆ ನಡೆಯುವ ಮೇಳದಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲದೆ, ಮಹಾರಾಷ್ಟ್ರ, ಒರಿಸ್ಸಾ, ಆಂಧ್ರ ಪ್ರದೇಶ, ಕೇರಳ ರಾಜ್ಯಗಳ ರೈತರು ಭಾಗವಹಿಸಲಿದ್ದಾರೆ ಎಂದರು.
ಗಡ್ಡೆ ಗೆಣಸಿನ ಅರಿವು ಮೂಡಿಸುವ ದೃಷ್ಟಿಯಿಂದ ನಡೆಸಲಾಗಿರುವ ಪ್ರಬಂಧ ಸ್ಪರ್ಧೆ ಹಾಗೂ ಪೋಸ್ಟ್ ಕಾರ್ಡ್‌ನಲ್ಲಿ ಚಿತ್ರ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಗಡ್ಡೆ ಗೆಣಸು ಹಾಗೂ ಸೊಪ್ಪು ಕೃಷಿಯ ಬಗ್ಗೆ ಮಾಹಿತಿ ಕೈಪಿಡಿಯೂ ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳಲಿದೆ. ಸೊಪ್ಪು ಹಾಗೂ ಗಡ್ಡೆ ಗೆಣಸುಗಳ ತಾಜಾ ತಿಂಡಿ ತಿನಿಸುಗಳ ಮಾರಾಟ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ : ಜ. 4 ರಂದು ಸಂಜೆ 6..30 ರಿಂದ ರಾಜ್ಯ ಪ್ರಶಸ್ತಿ ವಿಜೇತ ಕಲಾಕುಂಭ ಕಲಾವಿದರಿಂದ ತುಳುನಾಡ ವೈಭವ ನೃತ್ಯರೂಪಕ, ಜ.5 ರಂದು ಮಧ್ಯಾಹ್ನ 2.30 ರಿಂದ ಪಿರಿಯಾಪಟ್ಟಣ ಜೇನುಕುರುಬ ಜನಾಂಗದ ಮಕ್ಕಳಿಂದ ಬುಡಕಟ್ಟು ನೃತ್ಯ, ಸರಯೂ ಬಾಲ ಯಕ್ಷವೃಂದದಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.
ಎರಡು ದಿನ ರೈತರಿಗಾಗಿ ತರಬೇತಿ ಆಯೋಜಿಸಲಾಗಿದೆ. ಗೆಡ್ಡೆ ಗೆಣಸು ಮತ್ತು ಸೊಪ್ಪು ಕೃಷಿ ತರಬೇತಿ ನೀಡಲಾಗುವುದು. ಗೆಡ್ಡೆ ಗೆಣಸು ಹಾಗೂ ಸೊಪ್ಪಿನ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗೋಷ್ಟಿ ಆಯೋಜಿಸಲಾಗಿದೆ. ಗಡ್ಡೆ ಗೆಣಸು, ಸೊಪ್ಪಿನ ವಿವಿಧ ಆಹಾರ ಖಾದ್ಯಗಳ ಮಾರಾಟ ಮಳಿಗೆಗಳು ಇರಲಿವೆ ಎಂದರು.
ಪ್ರಮುಖರಾದ ಎಸ್.ಎ. ಪ್ರಭಾಕರ ಶರ್ಮಾ, ಕಾರ್ಯದರ್ಶಿ ಕೆ. ರತ್ನಾಕರ ಕುಳಾಯಿ, ಸಮಿತಿ ಸಂಚಾಲಕ ಎ. ಸೋಮಪ್ಪ ನಾಯ್ಕ, ರಾಮಚಂದ್ರ ಉಪಸ್ಥಿತರಿದ್ದರು.
ಮಳೆ ಕಡಿಮೆ ಬೀಳುವ ಪ್ರದೇಶವಾದ ಹೊಸದುರ್ಗ ತಾಲ್ಲೂಕಿನ ಸಿರಿಧಾನ್ಯ ಬೆಳೆಯಲಾಗುತ್ತಿದೆ. ಹವಾಮಾನವೂ ಇದಕ್ಕೆ…
ಹಾವೇರಿ ಜಿಲ್ಲೆಯಲ್ಲಿ ಕಳೆದ ವರ್ಷಾರಂಭದಿಂದ ನವೆಂಬರ್‌ವರೆಗೆ 1585 ಕ್ಷಯರೋಗಿಗಳನ್ನು ಪತ್ತೆ ಮಾಡಲಾಗಿದ್ದು, ಅಗತ್ಯ…
ಮಂಗಳೂರಿನಲ್ಲಿ ರಾಜ್ಯಮಟ್ಟದ ಗೆಡ್ಡೆಗೆಣಸು ಮೇಳ ನಡೆಯುತ್ತಿದೆ. ರೈತರು ಹಾಗೂ ಗ್ರಾಹಕರ ನಡುವೆ ಸಂಪರ್ಕ…
ಡಿಜಿಟಲ್ ಗೀಳು ಮಕ್ಕಳ ಬುದ್ಧಿಯನ್ನು ಹಾಳು ಮಾಡುವ ಒಂದು ಕಾಯಿಲೆ. ಮನೆಯಲ್ಲಿ ಕಲಿತು…
ಕೃಷಿ ಸಂಕಷ್ಟದಲ್ಲಿದೆ. ಬೆಳೆ ನಷ್ಟ ಹೆಚ್ಚಾಗುತ್ತಿದೆ. ಒಂದೋ ವಿಪರೀತ ಮಳೆ ಅಥವಾ ಬರಗಾಲ.…
ಭಾರತದ ರಫ್ತು ಪದಾರ್ಥಗಳಲ್ಲಿ ಕಾಫಿ ಮುಖ್ಯ ಬೆಳೆಗಳಲ್ಲಿ ಒಂದಾಗಿದ್ದು, 2021-22ನೇ ಸಾಲಿನಲ್ಲಿ ಒಂದು…