ಕರವ ಮುಗಿದು ಶಿರವ ಬಾಗಿ
ಬೇಡುವೆನು ಅಮ್ಮ ತಾಯೆ
ವರವ ಕೊಡು ಹರಿಯ ಸಖಿ
ನಮಿಸುವೆನು ಎನ್ನ ಕಾಯೆ ||
ಉದಯಕಾಲ ಮಡಿಯನುಟ್ಟು
ಸುಮಗಳಿಂದ ಪೂಜೆಗೈವೆ
ಭಕ್ತಿಯಲಿ ಬೇಡುವೆನು
ಹರಿಯ ಸ್ಮರಣೆ ಮಾಡುವೆನು ||
ದಯೆಯ ತೋರು ಶ್ರೀ ತುಳಸಿ
ಅರಸಿನ ಕುಂಕುಮದ ಒಡತಿ
ಸಂತಾನಭಾಗ್ಯ ನೀಡಿ ಬೆಳಗು
ವರಿಸಿದ ಮನೆಯ ಪ್ರಣತಿ ||
ಧೂಪದೀಪವನ್ನು ಬೆಳಗಿ
ನಿತ್ಯ ನಿನ್ನ ಪೂಜೆಗೈವೆ
ತಾಪವನ್ನು ದೂರಮಾಡು
ಸತ್ಯ ನಿನ್ನ ಜಪವಗೈವೆ ||
ಕ್ಲೇಶವನ್ನು ದೂರಮಾಡು
ತೋಷವನ್ನು ಎನಗೆ ನೀಡು
ದಾತೆ ವೃಂದೆ ನಮಿಪೆ ನಿನಗೆ
ಮಾತೆ ನಿಂದೆ ಚರಣಕೆರಗಿ ||
# ರೂಪಾಪ್ರಸಾದ ಕೋಡಿಂಬಳ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement