ತುಳು ಲಿಪಿ ಆನ್ಲೈನ್ ಪರೀಕ್ಷೆ | ವಿಶೇಷ ಸಾಧನೆ | ಪಂಚಮಿ ಬಿ.ಆರ್ ಶೇ.100 ಅಂಕ |

August 16, 2023
10:16 PM
ತುಳು ಲಿಪಿ ಪರೀಕ್ಷೆಯಲ್ಲಿ ಪಂಚಮಿ ಬಿ.ಆರ್. 100 ಕ್ಕೆ 100 ಅಂಕಗಳನ್ನು ಗಳಿಸುವ ಮೂಲಕ ವಿಶೇಷ ಸಾಧನೆಯನ್ನು ಮಾಡಿದ್ದಾರೆ.

ತುಳುನಾಡು ಸಹಿತ ವಿಶ್ವದ ನಾನಾ ಭಾಗಗಳಲ್ಲಿ ಇರುವ ತುಳು ಭಾಷಿಕರಲ್ಲಿ ತುಳು ಲಿಪಿಯ ಬಗ್ಗೆ ಅರಿವು ಮತ್ತು ಆಸಕ್ತಿ ಮೂಡಿಸುವ ಉದ್ದೇಶದಿಂದ ‘ಜೈ ತುಳುನಾಡು (ರಿ.) ಸಂಘಟನೆ ನಡೆಸುವ ತುಳು ಲಿಪಿ ಆನ್-ಲೈನ್ ತರಗತಿಯಲ್ಲಿ ಭಾಗವಹಿಸಿ ಬಳಿಕ ನಡೆದ ಆನ್-ಲೈನ್ ಪರೀಕ್ಷೆಯಲ್ಲಿ ಪಂಚಮಿ ಬಿ.ಆರ್. 100 ಕ್ಕೆ 100 ಅಂಕಗಳನ್ನು ಗಳಿಸುವ ಮೂಲಕ ವಿಶೇಷ ಸಾಧನೆಯನ್ನು ಮಾಡಿದ್ದಾರೆ.

Advertisement
Advertisement
Advertisement
Advertisement
Advertisement

ಧಾರವಾಡದಲ್ಲಿರುವ JJS ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ ನಲ್ಲಿ 8ನೇ ತರಗತಿ ವ್ಯಾಸಾಂಗ ಮಾಡುತ್ತಿರುವ ಇವರು ಕಾಸರಗೂಡಿನ ದೇಲಂಪಾಡಿ ಗ್ರಾಮದ ಬಂದ್ಯಡ್ಕ ರಾಜೇಶ್ ಹಾಗೂ ಚಿತ್ರಕಲಾ ದಂಪತಿಯ ಪುತ್ರಿ.

Advertisement

ಕಳೆದ ವರ್ಷ ನವಂಬರ್ 22ರಂದು ತುಳು ಲಿಪಿ ತರಗತಿಯನ್ನು ಆನ್ ಲೈನ್ ಮುಖಾಂತರ ಜೈ ತುಳುನಾಡು (ರಿ) ಸಂಘಟನೆ ಆಯೋಜಿಸಿತ್ತು. ಸುಮಾರು 3-4 ತಿಂಗಳುಗಳ ಕಾಲ ನಡೆದ ಈ ತರಗತಿಯಲ್ಲಿ ಮೂವರು ಶಿಕ್ಷಕರು ತುಳು ವರ್ಣಮಾಲೆ, ಕಾಗುಣಿತ ಮತ್ತು ಅಂಕೆಗಳ ಪಾಠವನ್ನು ಹೇಳಿಕೊಡುತ್ತಿದ್ದರು.

ಬಳಿಕ, ಶಬ್ದಗಳು, ವಾಕ್ಯ ರಚನೆ, ತುಳುವಿನಿಂದ ಕನ್ನಡಕ್ಕೆ ಬರೆಯುವುದು, ಕನ್ನಡದಿಂದ ತುಳು ಭಾಷೆಯ ಲಿಪಿಯಲ್ಲಿ ಬರೆಯುವುದನ್ನು ಶಿಕ್ಷಕರು  ಹೇಳಿಕೊಡುತ್ತಿದ್ದರು.

Advertisement

ಈ ಪಾಠವೆಲ್ಲಾ ಮುಗಿದ ಬಳಿಕ, ಜುಲೈ. 23ರಂದು ಜೈ ತುಳುನಾಡು ಸಂಘಟನೆ ಮುಖಾತರ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆಗಳ ಫಲಿತಾಂಶ ಆಗಸ್ಟ್ 15ರಂದು ಪ್ರಕಟವಾಗಿದೆ. ಇದರಲ್ಲಿ ಪಂಚಮಿ ಬಿ ಆರ್ 100ಕ್ಕೆ 100 ಅಂಕಗಳನ್ನು ಪಡೆದುಕೊಂಡು ಮೊದಲ ಸ್ಥಾನ ಪಡೆದಿಕೊಂಡಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಎಲೆಚುಕ್ಕಿ ರೋಗ | ಸರ್ಕಾರದಿಂದ ಪ್ರತ್ಯೇಕ ಪರಿಹಾರ ಇಲ್ಲ | ಡಿಸೀಸ್‌ ಫಾರ್ಕಾಸ್ಟ್‌ ಮಾಡಲು ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಬೊಟ್ಯಾಡಿ ಒತ್ತಾಯ |
March 4, 2025
3:30 PM
by: ದ ರೂರಲ್ ಮಿರರ್.ಕಾಂ
ಬಿಸಿಗಾಳಿ ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ
March 4, 2025
2:33 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 04-03-2025 | ಮಾ.8 ರವರೆಗೆ ಮಳೆ ಲಕ್ಷಣ ಇಲ್ಲ | ಬಿಸಿಲಿನ ವಾತಾವರಣ ಮುಂದುವರಿಕೆ |
March 4, 2025
12:55 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 03-03-2025 | ಬಿಸಿಲಿನ ವಾತಾವರಣ ಮುಂದುವರಿಕೆ | ಮಾ.6 ರ ನಂತರ ಅಲ್ಲಲ್ಲಿ ತುಂತುರು ಮಳೆ ನಿರೀಕ್ಷೆ |
March 3, 2025
11:46 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror