ತುಳುನಾಡು ಸಹಿತ ವಿಶ್ವದ ನಾನಾ ಭಾಗಗಳಲ್ಲಿ ಇರುವ ತುಳು ಭಾಷಿಕರಲ್ಲಿ ತುಳು ಲಿಪಿಯ ಬಗ್ಗೆ ಅರಿವು ಮತ್ತು ಆಸಕ್ತಿ ಮೂಡಿಸುವ ಉದ್ದೇಶದಿಂದ ‘ಜೈ ತುಳುನಾಡು (ರಿ.) ಸಂಘಟನೆ ನಡೆಸುವ ತುಳು ಲಿಪಿ ಆನ್-ಲೈನ್ ತರಗತಿಯಲ್ಲಿ ಭಾಗವಹಿಸಿ ಬಳಿಕ ನಡೆದ ಆನ್-ಲೈನ್ ಪರೀಕ್ಷೆಯಲ್ಲಿ ಪಂಚಮಿ ಬಿ.ಆರ್. 100 ಕ್ಕೆ 100 ಅಂಕಗಳನ್ನು ಗಳಿಸುವ ಮೂಲಕ ವಿಶೇಷ ಸಾಧನೆಯನ್ನು ಮಾಡಿದ್ದಾರೆ.
ಧಾರವಾಡದಲ್ಲಿರುವ JJS ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ ನಲ್ಲಿ 8ನೇ ತರಗತಿ ವ್ಯಾಸಾಂಗ ಮಾಡುತ್ತಿರುವ ಇವರು ಕಾಸರಗೂಡಿನ ದೇಲಂಪಾಡಿ ಗ್ರಾಮದ ಬಂದ್ಯಡ್ಕ ರಾಜೇಶ್ ಹಾಗೂ ಚಿತ್ರಕಲಾ ದಂಪತಿಯ ಪುತ್ರಿ.
ಕಳೆದ ವರ್ಷ ನವಂಬರ್ 22ರಂದು ತುಳು ಲಿಪಿ ತರಗತಿಯನ್ನು ಆನ್ ಲೈನ್ ಮುಖಾಂತರ ಜೈ ತುಳುನಾಡು (ರಿ) ಸಂಘಟನೆ ಆಯೋಜಿಸಿತ್ತು. ಸುಮಾರು 3-4 ತಿಂಗಳುಗಳ ಕಾಲ ನಡೆದ ಈ ತರಗತಿಯಲ್ಲಿ ಮೂವರು ಶಿಕ್ಷಕರು ತುಳು ವರ್ಣಮಾಲೆ, ಕಾಗುಣಿತ ಮತ್ತು ಅಂಕೆಗಳ ಪಾಠವನ್ನು ಹೇಳಿಕೊಡುತ್ತಿದ್ದರು.
ಬಳಿಕ, ಶಬ್ದಗಳು, ವಾಕ್ಯ ರಚನೆ, ತುಳುವಿನಿಂದ ಕನ್ನಡಕ್ಕೆ ಬರೆಯುವುದು, ಕನ್ನಡದಿಂದ ತುಳು ಭಾಷೆಯ ಲಿಪಿಯಲ್ಲಿ ಬರೆಯುವುದನ್ನು ಶಿಕ್ಷಕರು ಹೇಳಿಕೊಡುತ್ತಿದ್ದರು.
ಈ ಪಾಠವೆಲ್ಲಾ ಮುಗಿದ ಬಳಿಕ, ಜುಲೈ. 23ರಂದು ಜೈ ತುಳುನಾಡು ಸಂಘಟನೆ ಮುಖಾತರ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆಗಳ ಫಲಿತಾಂಶ ಆಗಸ್ಟ್ 15ರಂದು ಪ್ರಕಟವಾಗಿದೆ. ಇದರಲ್ಲಿ ಪಂಚಮಿ ಬಿ ಆರ್ 100ಕ್ಕೆ 100 ಅಂಕಗಳನ್ನು ಪಡೆದುಕೊಂಡು ಮೊದಲ ಸ್ಥಾನ ಪಡೆದಿಕೊಂಡಿದ್ದಾರೆ.
ಅರಣ್ಯದಲ್ಲಿ ಬೆಳೆಯುವ "ಸಿಕ್ಕಿಂ ಬಾಳೆ" ಜಾತಿಯಲ್ಲಿ ಹವಾಮಾನ ಬದಲಾವಣೆಯನ್ನು ತಾಳುವ ಜಿನೀಯ ಗುಣಗಳು…
ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಏರಿಳಿತ ಕಂಡುಬಂದಿದೆ. ಮಲೆನಾಡು ಮಾರುಕಟ್ಟೆಗಳಲ್ಲಿ ಸ್ವಲ್ಪ ಏರಿಕೆ…
ಅಸ್ಸಾಂನಲ್ಲಿ ಐಸಿಎಆರ್–ಐಎಆರ್‌ಐ ಸಂಸ್ಥೆ “ನೈಸರ್ಗಿಕ ಕೃಷಿ” ವಿಷಯದಡಿ ಕಿಸಾನ್ ಮೇಳ 2026 ಆಯೋಜಿಸಿತು.…
ಜಾಗತಿಕ ತಾಪಮಾನ ಏರಿಕೆಯಿಂದ ಭಾರತದಲ್ಲಿ ಮಾರುತ ಮಳೆಯ ತೀವ್ರತೆ ಹೆಚ್ಚುತ್ತಿರುವುದು ಹೊಸ ಅಧ್ಯಯನದಲ್ಲಿ…
ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಕಳ್ಳಸಾಗಣೆ ವಿರುದ್ಧ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಬಿಗುಗೊಳಿಸಿದೆ.…
ಕೊಲ್ಕತ್ತಾದಲ್ಲಿ ನಡೆದ ಸಭೆಯಲ್ಲಿ ಸೆಣಬು ವಲಯ ಸುಧಾರಣೆ, ಸುಸ್ಥಿರ ಕೃಷಿ ಹಾಗೂ ಮೀನುಗಾರಿಕೆ…