ತುಳುನಾಡ ದೈವಾರಾಧನೆ ಟೂರ್‌ ಪ್ಯಾಕೇಜ್‌…! | ಕರಾವಳಿಗರಿಂದ ಭಾರೀ ಖಂಡನೆ |

December 4, 2023
1:41 PM

ತುಳುನಾಡು(Tulunadu) ನಾಗಾರಾಧನೆ ಮತ್ತು ಭೂತಾರಾಧನೆಯ(Bhootharadhane) ನೆಲ. ಭೂತಾರಾಧನೆ ಪರಿಸರದ ಜನರನ್ನು ಒಳಗೊಳಿಸುವ ಬಹುತ್ವದ ಧರ್ಮ. ಭೂತದ ನುಡಿಯಲ್ಲಿಯೇ ಹೇಳುವುದಾದರೆ ಹತ್ತು ತಾಯಿಯ ಮಕ್ಕಳನ್ನು ಒಂದು ಮಡಿಲಲ್ಲಿರಿಸಿ ರಮಿಸಿ ಎದೆ ಹಾಲು ಕುಡಿಸಿ ಪೋಷಿಸುವ ಶಕ್ತಿಗಳು ಇವು. ಇಲ್ಲಿ ಭೂತ ಶಕ್ತಿಗಳು ತಾಯಿ ಶಕ್ತಿಗಳು ಎನ್ನುವುದು ನಂಬಿಕೆ. ಅಂತಹ ತುಳುನಾಡಿನ ಭೂತಾರಾಧನೆಗೆ ಆಚರಣೆಯನ್ನೇ ಉದ್ಯಮ ಮಾಡಲು ಹೊರಟಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಇದೀಗ ಕೋಲವನ್ನು ರದ್ದು ಪಡಿಸುವುದಾಗಿ ಸಂಘಟಕರು ಒಪ್ಪಿಕೊಂಡಿದ್ದಾರೆ.

ದೈವಕೋಲ, ಕಂಬಳದ ಹೆಸರಿನಲ್ಲಿ ದೈವಾರಾಧನೆಯಲ್ಲೂ ಟ್ರಾವೆಲ್ ಏಜೆನ್ಸಿಯೊಂದು ಟೂರ್ ಪ್ಯಾಕೇಜ್ ಪರಿಚಯಿಸಿದ್ದು, ಇದು ಕರಾವಳಿ(Coastal) ಮಂದಿಯ ಆಕ್ರೋಶಕ್ಕೆ ಕಾರಣವಾಗಿದೆ. ಟ್ರಾವೆಲ್ ಸಂಸ್ಥೆಯೊಂದು 2,899 ರೂಪಾಯಿ ದರ ವಿಧಿಸಿ ಬೋಟಿಂಗ್(Boating), ಉಪ್ಪಿನಂಗಡಿಯಲ್ಲಿ ಕಂಬಳ(Kambala), ಪುತ್ತೂರಿನಲ್ಲಿ ಪಾರ್ಟಿ(Party), ಬೊಳ್ಳಾಡಿ ಫಾರ್ಮ್‌ನಲ್ಲಿ ದೈವದ ಕೋಲ, ಬೀರಮಲೆ ಬೆಟ್ಟಕ್ಕೆ ಚಾರಣ(Trucking) ಎಂಬ ಆಫರ್(Offer) ನೀಡಿದೆ. ಫೆಬ್ರವರಿ 10 ಮತ್ತು 11ರಂದು ಎರಡು ದಿನಗಳ ಕಾಲ ಈ ಪ್ರವಾಸ ನಿಗದಿ ಮಾಡಲಾಗಿದೆ. ಸದ್ಯ ಈ ಪ್ಯಾಕೇಜ್ ‌ಬೆಂಗಳೂರು, ಮುಂಬೈಗಳಂತಹ ಮಹಾನಗರಗಳಲ್ಲಿ ಇರುವವರ ವಾಟ್ಸ್ಆ್ಯಪ್ ಗಳಲ್ಲಿ, ಪೇಸ್‌ ಬುಕ್‌ ನಲ್ಲಿ ಹರಿದಾಡಿದೆ.

ತುಳುನಾಡಿನಲ್ಲಿ ದೈವಾರಾಧನೆಗೆ ಅಪಚಾರ ಮಾಡುವುದು ಸರಿಯಲ್ಲ ಎಂದು ದೈವ ನರ್ತಕ ದಯಾನಂದ ಜಿ ಕತ್ತಲ್ ಸಾರ್ ಹೇಳಿದ್ದಾರೆ.

ತುಳುನಾಡ ಭೂತಾರಾಧನೆ ಬಗ್ಗೆ ಒಂದು ಕಾಲದಲ್ಲಿ ಭೂತದ ಹೆಸರು ಹೇಳಲು ಹಿಂದೆ ಮುಂದೆ ನೋಡುತ್ತಿದ್ದ ಕಾಲ ಇತ್ತು. ಅಂತಹದ್ದರಲ್ಲಿ ಈಗ ಭೂತಾರಾಧನೆಯ ಹೆಸರಲ್ಲಿ ಟೂರು ಪ್ಯಾಕೇಜ್‌ ಮಾಡಿ ಬಿಸಿನೆಸ್‌ ಮಾಡಲು ಹೊರಟಿದ್ದಾರೆ. ಕೇವಲ ದೈವಕೋಲವನ್ನು ಭಕ್ತಿಭಾವದಿಂದ ನೋಡಿ ಅದರ ಆಚರಣೆಗೆ ತಲೆ ಭಾಗಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ.

A travel agency has introduced a tour package in the name of Daivakola and Kambal, which has caused outrage among the coastal people. A travel agency charged Rs 2,899 and offered boating, blanket at Uppinandi, party at Puttur, Daivada Kola at Bolladi Farm, trek to Beeramale hill. The tour is scheduled for two days on February 10 and 11. Currently, this package is circulating in the WhatsApp groups and FBs of people in big cities like Bangalore and Mumbai.
- ಅಂತರ್ಜಾಲ ಮಾಹಿತಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!
March 25, 2026
12:30 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್
ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ
March 23, 2026
10:18 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror