#AshadaAmavasye | ತುಳುವರ ಆಟಿ ಅಮವಾಸ್ಯೆ ಹಬ್ಬ | ಈ ಬಾರಿ ಬಂದಿದೆ ಎರಡು ಅಮವಾಸ್ಯೆ | ಕೊಂಚ ಗೊಂದಲದ ನಡುವೆ ಜುಲೈ17ಕ್ಕೆ ಆಚರಣೆ

July 16, 2023
12:57 PM
ಆಷಾಢ ಮಾಸದಲ್ಲಿ ಬರುವ ಅಮಾವಾಸ್ಯೆ ತುಳುನಾಡ ಜನರಿಗೆ ಪ್ರಮುಖವಾದ ದಿನ. ಈ ಬಾರಿ ಜುಲೈ 17 ರಂದೇ ಆಟಿ ಅಮಾವಾಸ್ಯೆ

ಈ ವರ್ಷ ಆಟಿಯಲ್ಲಿ ಎರಡು ಅಮಾವಾಸ್ಯೆ ಬರಲಿದೆ. ಒಂದು ಜುಲೈ 17 ಮತ್ತೊಂದು ಆಗಸ್ಟ್ 16. ಮೊದಲನೆಯದ್ದು ಆಷಾಢಮಾಸದ ಅಮಾವಾಸ್ಯೆ. ಎರಡನೆಯದ್ದು ಅಧಿಕ ಶ್ರಾವಣಮಾಸದ ಅಮಾವಾಸ್ಯೆ. ಹಾಗಿರುವಾಗ ಯಾವ ಅಮಾವಾಸ್ಯೆಯನ್ನು ಆಟಿ ಅಮಾವಾಸ್ಯೆ ಎಂದು ಆಚರಿಸಬೇಕೆಂಬ ಗೊಂದಲ ಹಲವರಿಗೆ ಇದೆ.

Advertisement

ಅಮಾವಾಸ್ಯೆ ಎನ್ನುವ ದಿನವನ್ನು ಶ್ರದ್ಧೆ ಯಿಂದ ಆಚರಿಸುವ ಕ್ರಮ ಪ್ರಾದೇಶಿಕವಾದದ್ದು. ನಮ್ಮ ಊರಲ್ಲಿ ಇರುವಂತಹ ಕ್ರಮ.ಇಂತಹ ಸಂದರ್ಭದಲ್ಲಿ ಕೆಲವು ಹಬ್ಬಗಳನ್ನು ಎರಡೂ ದಿನಗಳಲ್ಲಿ ಆಚರಿಸುವ  ಕ್ರಮ ಇದೆ .

ಆದರೆ ಅಟಿ ಅಮಾವಾಸ್ಯೆಯ ದಿನ ಮದ್ದು ಕುಡಿಯುವ ಸಂಪ್ರದಾಯವಿದೆ. ಅದೇ ಪ್ರಧಾನ ಆಚರಣೆಯೂ ಆಗಿದೆ.  ಅದು‌ ಹುಳಗಳನ್ನು ಕೊಲ್ಲುವುದಕ್ಕಾಗಿ ಇರುವ ಮದ್ದು ಇಂತಹ ಆರೋಗ್ಯದ ಉದ್ದೇಶಕ್ಕಾಗಿ  ಉಪಯೋಗವಾಗುವ ಮದ್ದನ್ನು ವರ್ಷಕ್ಕೊಂದೇ ದಿನ ಕುಡಿಯುವುದು ಸಂಪ್ರದಾಯ ಮತ್ತು ಆರೋಗ್ಯಕರವೂ ಹೌದು.  ಮೇಲಾಗಿ ಅದು ಹಾಲೆಯ (ಪಾಲೆ) ಮರದ ಕೆತ್ತೆಯಿಂದ ತೆಗೆಯುವ ಮದ್ದು  ಆ ಮರದ ಸಂಖ್ಯೆಯೂ‌ ಕಡಿಮೆ ಇರುವ ಕಾರಣ ಎರಡೆರಡು ಭಾರಿ ಅದರ ಕೆತ್ತೆ ತೆಗೆದರೆ ಮರಕ್ಕೂ ತೊಂದರೆಯಾಗಬಹುದು. ಮದ್ದು ತುಂಬ ಉಷ್ಣವಾದ ಕಾರಣವೂ ಎರಡೆರಡು ದಿನ ಕುಡಿಯುವುದು ಸಮಂಜಸವಲ್ಲ. ಈ ಎಲ್ಲ ದೃಷ್ಟಿಯಿಂದ ಇದರ ಆಚರಣೆಯ ದಿನ ಒಂದೇ ಆದರೆ ಸೂಕ್ತ. ಆದ್ದರಿಂದ ಯಾವ ದಿನ ಒಳ್ಳೆಯದು ಎಂದು ಯೋಚಿಸಬೇಕು.

ಯಾವ ಎರಡು ಆಮವಾಸ್ಯೆಗಳ ಮಧ್ಯೆ ಸೂರ್ಯ ಸಂಕ್ರಮಣ ಬರುವುದಿಲ್ಲವೋ ಆ ಚಂದ್ರಮಾಸವನ್ನು ಅಧಿಕ ಮಾಸವೆಂದು ಕರೆಯುತ್ತಾರೆ. ಚಾಂದ್ರ ಮಾಸದ ಯಾವ ಮಾಸದಲ್ಲಿ ಎರಡು ಸೂರ್ಯ ಸಂಕ್ರಮಣ ಬರುವುದೋ ಅಂದರೆ ಅಮಾವಾಸ್ಯೆ ಯಿಂದ ಅಮವಾಸ್ಯೆಯೊಳಗೆ 2 ಸೂರ್ಯ ಸಂಕ್ರಮಣಗಳು ಬರುವವೋ ಅದನ್ನು ಕ್ಷಯ ಮಾಸ ಎನ್ನುತ್ತಾರೆ.

ಅಧಿಕಮಾಸವನ್ನು ಮಲಮಾಸ ಎನ್ನುವುದಾಗಿ ಕರೆಯುವುದು ಒಂದು ಮತ. ಆದ್ದರಿಂದ ಅಧಿಕ ಶ್ರಾವಣದ ಎರಡನೆಯ ಅಮಾವಾಸ್ಯೆ ಮೊದಲ ಅಮಾವಾಸ್ಯೆಯಷ್ಟು ಸೂಕ್ತವಲ್ಲದ ದಿನ ಅಲ್ಲ. ಈ ಎಲ್ಲ ಕಾರಣದಿಂದ ವಿದ್ವಾಂಸರು ಅಭಿಪ್ರಾಯಪಟ್ಟಂತೆ ಮೊದಲ  ಆಟಿ ಅಮಾವಾಸ್ಯೆ ಅಂದರೆ ಜುಲೈ 17 ರಂದೇ ಆಟಿ ಅಮಾವಾಸ್ಯೆ ಆಚರಿಸುವುದು ಸೂಕ್ತ. ಪಲಿಮಾರು ಮಠದ ಪಂಚಾಂಗದಲ್ಲಿಯೂ ಈ ದಿನವನ್ನೇ ಆಟಿ ಅಮಾವಾಸ್ಯೆ ಎಂದು ಬರೆದಿದ್ದಾರೆ

ಆದ್ದರಿಂದ ಒಂದನೇ ಅಮಾವಾಸ್ಯೆ ಅಂದರೆ ಜುಲೈ 17 ರಂದೇ ಆಟಿ ಅಮಾವಾಸ್ಯೆ ಯಾಗಿ ಆಚರಿಸುವುದು ಸರಿಯಾದ ಕ್ರಮ.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮೇ.9 | ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯ ನಾಟಕ | ಸಂತೋಷದಿಂದ ನಗಲು ಒಂದು ವೇದಿಕೆ
May 9, 2025
7:51 AM
by: ದ ರೂರಲ್ ಮಿರರ್.ಕಾಂ
ಮೇ.11 ಮುಳಿಯ ಕೃಷಿ ಗೋಷ್ಟಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ | ಕೃಷಿ-ಕೃಷಿ ಮಾರುಕಟ್ಟೆ-ಕೃಷಿ ಯಾಂತ್ರೀಕರಣ -ಕೃಷಿ ಬೆಳವಣಿಗೆ |
May 9, 2025
7:46 AM
by: ದ ರೂರಲ್ ಮಿರರ್.ಕಾಂ
ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ
May 6, 2025
7:02 AM
by: The Rural Mirror ಸುದ್ದಿಜಾಲ
ಬದರೀನಾಥ ಧಾಮ ಯಾತ್ರಾ ಆರಂಭ | ಭಾರೀ ಪ್ರಮಾಣದಲ್ಲಿ ಆಗಮಿಸಿರುವ ಭಕ್ತರು | ಸುರಕ್ಷತೆಗಾಗಿಅರೆಸೇನಾ ಪಡೆ ನಿಯೋಜನೆ
May 5, 2025
12:21 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group