ತುಮಕೂರು ರೈತರ ಖಾತೆಗೆ ಬಂತು ಉಂಡೇ ಕೊಬ್ಬರಿ ಬಾಕಿ ಹಣ | 346.50 ಕೋಟಿ ರೂ. ಪಾವತಿ ಬಗ್ಗೆ ಕೇಂದ್ರ ಸಚಿವ ಸೋಮಣ್ಣ ಮಾಹಿತಿ

August 6, 2024
12:03 PM

2024 ನೇ ಸಾಲಿನಲ್ಲಿ ತುಮಕೂರು ಜಿಲ್ಲೆಯಲ್ಲಿ ರೈತರಿಂದ ಖರೀದಿಸ್ಪಲಟ್ಟ ಉಂಡೇ ಕೊಬ್ಬರಿಗೆ ಸಂಬಂಧಪಟ್ಟ 346.50 ಕೋಟಿ ರೂ. ಮೊತ್ತವನ್ನು ರೈತರ ಖಾತೆಗೆ ಪಾವತಿಸಲಾಗಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ. ಸೋಮಣ್ಣಮಾಹಿತಿ ನೀಡಿದ್ದಾರೆ.

Advertisement
Advertisement
Advertisement

2024 ನೇ ಸಾಲಿನಲ್ಲಿ ತುಮಕೂರು ಜಿಲ್ಲೆಯ ಸುಮಾರು 27,000 ರೈತರಿಂದ ಒಟ್ಟು 3,15,000 ಕ್ವಿಂಟಲ್ ಉಂಡೆ ಕೊಬ್ಬರಿಯನ್ನು ಕನಿಷ್ಟ ಬೆಂಬಲ ಬೆಲೆ ಅಡಿ ಖರೀದಿಸಲಾಗಿತ್ತು. ಈ ಸಂಬಂಧ ಒಟ್ಟು ಬಾಬ್ತು 378 ಕೋಟಿ ರೂ.ಗಳನ್ನು ತುಮಕೂರಿನ ಕೊಬ್ಬರಿ ಬೆಳೆಗಾರರಿಗೆ ಪಾವತಿಸಬೇಕಾಗಿತ್ತು. ಹಾಗಾಗಿ, ಆಗಸ್ಟ್ 5 ರವರೆಗೆ ಸುಮಾರು 346.50 ಕೋಟಿ ರೂ. ಮೊತ್ತವನ್ನು (ಪ್ರತಿಶತ 92 ರಷ್ಟು) ರೈತರ ಖಾತೆಗೆ ನೇರವಾಗಿ(ಡಿಬಿಟಿ ಮುಖೇನ) ಪಾವತಿಸಲಾಗಿದೆ ಎಂದು ಕೇಂದ್ರ ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸುಮಾರು 24,600 ರೈತರಿಗೆ ಈ ಬಾಬ್ತು ನೇರವಾಗಿ ಡಿಬಿಟಿ ಮೂಲಕ ರೈತರ ಖಾತೆಗೆ ಪಾವತಿಸಲಾಗಿದೆ. ಬಾಕಿ ಉಳಿದ ಸುಮಾರು 2,438 ರೈತರ ಖಾತೆಗೆ ಅಂದಾಜು 31.64 ಕೋಟಿ ಬಾಬ್ತನ್ನು ರೈತರಿಗೆ ಪಾವತಿಸಬೇಕಾಗಿದೆ (ಪ್ರತಿಶತ 8 ರಷ್ಟು ಮಾತ್ರ). ಈ ಮೊತ್ತವನ್ನು ಅತೀ ಶೀಘ್ರದಲ್ಲಿ ತುಮಕೂರಿನ ರೈತರಿಗೆ ಪಾವತಿಸುವಂತೆ ರಾಜ್ಯದಲ್ಲಿನ ಸಂಬಂಧಪಟ್ಟ ಎಜೆನ್ಸಿಗೆ ನಿರ್ದೆಶನ ನೀಡಲಾಗಿದೆ ಎಂದು ಹೇಳಿದ್ದಾರೆ.

Advertisement

ಕೇಂದ್ರದಲ್ಲಿನ ನೆಫೆಡ್ ಸಂಸ್ಥೆಯಿಂದ ರಾಜ್ಯಕ್ಕೆ ಬರಬೇಕಾದ ಬಾಕಿ ಮೊತ್ತ 691 ಕೋಟಿ ರೂ. ಗಳನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸಲು ಕ್ರಮ ಜರುಗಿಸಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ಸಚಿವ ಶಿವರಾಜ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ಮನವಿ ಮಾಡಿರುವುದಾಗಿ ಸಚಿವ ಸೋಮಣ್ಣ ತಿಳಿಸಿದ್ದಾರೆ. ರೈತರ ಖಾತೆಗೆ ಹಣ ಸಂದಾಯವಾದ ಬಗ್ಗೆ ಸಂತಸ ವ್ಯಕ್ತಪಡಿಸಿದ ಕೇಂದ್ರ ಸಚಿವ ಸೋಮಣ್ಣ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

  • ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ| 21-11-2024 | ಮಳೆಯ ಸಾಧ್ಯತೆ ಕಡಿಮೆ | ನ.26 ಸುಮಾರಿಗೆ ಚಂಡಮಾರುತ ಸಾಧ್ಯತೆ |
November 21, 2024
2:52 PM
by: ಸಾಯಿಶೇಖರ್ ಕರಿಕಳ
ದ ಕ ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ
November 20, 2024
8:06 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-11-2024 | ರಾಜ್ಯದಲ್ಲಿ ಒಣಹವೆ | ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಲಕ್ಷಣ |
November 20, 2024
5:38 PM
by: ಸಾಯಿಶೇಖರ್ ಕರಿಕಳ
ರಾಜ್ಯದ ಕೈಗಾರಿಕೆಗಳಲ್ಲಿ ಹಸಿರು ತಂತ್ರಜ್ಞಾನ ಅಳವಡಿಸಲು ಆದ್ಯತೆ | ಮುಖ್ಯಮಂತ್ರಿ ಸಿದ್ದರಾಮಯ್ಯ
November 20, 2024
5:05 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror