ಮನೆಯ ಒಳಗೆ ಚಿರತೆ ನುಗ್ಗಿ ಆತಂಕ ಸೃಷ್ಠಿಸಿದ ಘಟನೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಮುದ್ದಲಿಂಗನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿದ್ದ ದಂಪತಿಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ.
ರಾಜ್ಯ ಹೆದ್ದಾರಿ 33 ಮದ್ದೂರು, ಕುಣಿಗಲ್ ರಸ್ತೆಯ ಪಕ್ಕದ ಗುಡ್ಡದ ಕಡೆಯಿಂದ ಬಂದು ಗ್ರಾಮದ ಶಿವಣ್ಣ ಅವರ ಮನೆಗೆ ನುಗ್ಗಿದೆ, ಆ ವೇಳೆ ಶಿವಣ್ಣ ಮತ್ತು ಆತನ ಪತ್ನಿ ಪದ್ಮಮ್ಮ ಅವರು ಮನೆಯ ಹಾಲ್‌ನಲ್ಲಿ ಇದ್ದರು. ಚಿರತೆ ಮನೆಯ ಒಳಗೆ ಬರುತ್ತಿರುವುದನ್ನು ನೋಡಿದ ಶಿವಣ್ಣ ಹಾಗೂ ಆಕೆಯ ಪತ್ನಿ ಕಿರಿಚಿಕೊಂಡು ಮನೆಯಿಂದ ಹೊರ ಓಡಿ ಬಂದು ಮನೆಯ ಬಾಗಿಲಿಗೆ ಚಿಲ್ಕ ಹಾಕಿ ಚಿರತೆಯನ್ನು ಕೂಡಿಹಾಕಿದರು.ಚಿರತೆ ಹಾಗೂ ಮನೆಯವರ ಕಿರುಚಾಟದಿಂದ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಬಂದು ಚಿರತೆಯನ್ನು ನೋಡಿ ಗಾಬರಿಗೊಂಡರು.ತಕ್ಷಣ ಹುಲಿಯೂರುದುರ್ಗ ವಲಯ ಅರಣ್ಯಾಧಿಕಾರಿಗಳಿಗೆ ವಿಷಯವನ್ನು ತಿಳಿಸಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel