ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನಲ್ಲಿ ಗಣನೀಯ ಏರಿಕೆಯಾಗಿದ್ದು, ಪ್ರಸಕ್ತ ಜಲಾಶಯದಲ್ಲಿ 77.144 ಟಿಎಂಸಿ ನೀರು ಸಂಗ್ರಹವಿದೆ. ಕಳೆದ 24ಗಂಟೆಗಳಲ್ಲಿ 32 ಸಾವಿರದ 767 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇಂದು ಜಲಾಶಯಕ್ಕೆ 29 ಸಾವಿರದ 645 ಕ್ಯೂಸೆಕ್ ನೀರು ಹರಿದು ಬಂದು, ಇದಕ್ಕಿದ್ದಂತೆ ನೀರಿನ ಸಂಗ್ರಹದಲ್ಲಿ ಏರಿಕೆಯಾಗಿದೆ. ಈಗ ನಾಲ್ಕು ಗೇಟ್ ಗಳ ಮೂಲಕ ೧೦ಸಾವಿರದ ೪೦೦ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ ಎಂದು ತುಂಗಭದ್ರಾ ಜಲ ಮಂಡಳಿ ತಿಳಿಸಿದೆ. ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಲ್ಲಿ ವಾಸಿಸುವ ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಎಚ್ಚರಿಕೆ ನೀಡಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

