ತುಂಗಭದ್ರಾ ಆಣೆಕಟ್ಟು ಬೃಹತ್ ಆಣೆಕಟ್ಟು | ಅದು ತುಂಬುವುದು ಅಷ್ಟು ಸುಲಭವಲ್ಲ

August 12, 2024
10:37 AM

ತುಂಗಭದ್ರಾ ಆಣೆಕಟ್ಟಿನ(Tungabhadra Dam) ಗರಿಷ್ಠ ಸಾಮರ್ಥ್ಯ 1633 ಅಡಿಗಳು. ದಿನಾಂಕ 9 ಆಗಷ್ಟ್ 2024 ರ ನೀರಿನ ಮಟ್ಟ 1632. 45 ಅಡಿಗಳು. ಈಗ ತಾಂತ್ರಿಕ ದೋಷಕ್ಕೆ(Technical Issue) ಸುಮಾರು ಇಪ್ಪತ್ತು ಅಡಿ ಆಣೆಕಟ್ಟಿನೊಳಗೆ ಸಂಗ್ರಹವಾದ ನೀರು(Water) ಹೊರಬಿಟ್ಟರೆ ಮತ್ತೆ ಹೊರಬಿಟ್ಟಷ್ಟು ನೀರು ಆಣೆಕಟ್ಟನೊಳಗೆ ಈ ಬಾರಿ ಸಂಗ್ರಹ ವಾಗಲು ಸಾಧ್ಯವೇ…?

Advertisement
Advertisement
Advertisement
Advertisement

ಶರಾವತಿ ನದಿಯ ಆಣೆಕಟ್ಟು ಎರಡು ಸಾವಿರ ಚದುರ ಕಿಲೋಮೀಟರ್ ವಿಸ್ತೀರ್ಣ ದಲ್ಲಿ ನೀರು ಸಂಗ್ರಹವಾಗಿರುತ್ತದೆ. ಒಬ್ಬ ನಾಲ್ಕು ಸರ್ಕಾರಿ ಮತ್ತು ಒಂದು ಖಾಸಗಿ ವಿದ್ಯುತ್ ಸ್ಥಾವರ ಶರಾವತಿ ನದಿನೀರಿನಿಂದ ವಿದ್ಯುತ್ ಉತ್ಪಾದನೆ ಮಾಡುತ್ತದೆ. ಕಳೆದ ಸರ್ತಿ 1744 (ಗರಿಷ್ಠ 1819 ಅಡಿ) ಗೆ ಕುಸಿದಿತ್ತು. ಕೇವಲ ಒಂದು ತಿಂಗಳ ಮಳೆಗೆ ಸುಮಾರು ಅರವತ್ತೊಂದು ಅಡಿ ನೀರು ಆಣೆಕಟ್ಟಿಗೆ ಬಂದಿದೆ. ಇದೀಗ 1803 ಅಡಿ ನೀರಿದೆ. 1800 ರ ಮೇಲೆ ಒಂದೊಂದು ಅಡಿ ನೀರು ಸಂಗ್ರಹ ವಾಗುವುದು ಬಹಳ ಕಷ್ಟ. ಒಂದು ಅಡಿ ನೀರು ಏರಲು ಸಾವಿರಾರು ಕಿಲೋಮೀಟರ್ ವಿಸ್ತೀರ್ಣ ದಲ್ಲಿ ನೀರು ನಿಲ್ಲಬೇಕು. ಯಾವುದೇ ಆಣೆಕಟ್ಟು ಸಾಮಾನ್ಯ ಎತ್ತರದಲ್ಲಿ ನೀರು ಸಂಗ್ರಹ ಆಗುವುದು ಸುಲಭ. ಆದರೆ ಗರಿಷ್ಠ ಮಟ್ಟಕ್ಕೆ ನೀರು ಏರುವ ಸಮಯದಲ್ಲಿ ಬಹಳಷ್ಟು ಸವಾಲು ಎದುರಿಸಬೇಕಾಗುತ್ತದೆ.

Advertisement

ಮಳೆ ಕಡಿಮೆಯಾದರೆ ನೀರು ವಿಶಾಲವಾದ ವಿಸ್ತೀರ್ಣದಲ್ಲಿ ಆಣೆಕಟ್ಟಿನಲ್ಲಿ ಏರುವುದು ಬಹಳ ಕಷ್ಟ. ಪಶ್ಚಿಮ ಘಟ್ಟಗಳ ನದಿ ಉಗಮ ಸ್ಥಾನದ ಸಮೀಪದ ಮೊದಲ ಆಣೆಕಟ್ಟು ಏರುವುದು ಸುಲಭ. ಮೊನ್ನೆ ಜುಲೈನಲ್ಲಿ ಸಾಮಾನ್ಯ ಮಳೆಗೇ ಗಾಜನೂರಿನ ತುಂಗಾ ಆಣೆಕಟ್ಟು ತುಂಬಿ ನಮಗೆಲ್ಲಾ ಅಚ್ಚರಿ ಮೂಡಿಸಿತ್ತು. ಆದರೆ ಇದೇ ಮಾದರಿಯಲ್ಲಿ ಇನ್ಯಾವ ಆಣೆಕಟ್ಟೂ ತುಂಬುವುದಿಲ್ಲ. ನಮ್ಮ ಶಿವಮೊಗ್ಗ ಜಿಲ್ಲೆಯ ವಾರಾಹಿ ಅಣೆಕಟ್ಟು ಈ ನಲವತ್ತು ವರ್ಷದಲ್ಲಿ ಬೆರಳಿಕೆಯಷ್ಟು ಬಾರಿ ಭರ್ತಿಯಾಗಿದೆ…!! ವಾರಾಹಿ ನದಿ ಹುಟ್ಟಿ ಕೇವಲ ನಲವತ್ತು ಕಿಲೋಮೀಟರ್ ನೊಳಗಿನ ಆಣೆಕಟ್ಟು ಇದು. ಈ ಆಣೆಕಟ್ಟು ನಿರ್ಮಾಣವನ್ನು ಇಂಜಿನಿಯರ್ ಗಳು ಬಹಳ ನಿರೀಕ್ಷೆ ಇಟ್ಟುಕೊಂಡು ಕಟ್ಟಿದ್ದರು. ಆದರೆ ಈ ಆಣೆಕಟ್ಟು ನಿರ್ಮಾಣ ದ ಮೊದಲು ವಾರಾಹಿ ಜಲಾನಯನ ಪ್ರದೇಶದಲ್ಲಿ ಕೇಂದ್ರೀಕೃತ ವಾಗಿ ಭಾರೀ ಮಳೆ ಆಗುತ್ತಿತ್ತು. ಆದರೆ ಆಣೆಕಟ್ಟಿಗಾಗಿ ಭಾರೀ ಪ್ರಮಾಣದ ಬೃಹತ್ ನೈಸರ್ಗಿಕ ಅರಣ್ಯವನ್ನು ಕಡಿದು ನಾಶ ಮಾಡಿ ಮುಳುಗಡೆ ಮಾಡಿದ ದುಷ್ಪರಿಣಾಮವಾಗಿ ಆಗುಂಬೆಯ ಮಳೆ ಆಗುಂಬೆಯಿಂದ ಸುಮಾರು ಐವತ್ತು ಕಿಲೋಮೀಟರ್ ದೂರದ ಮಾಸ್ತಿಕಟ್ಟೆ (ಬಾಳೆಬರೆ ಘಾಟಿ) ಗೆ ವರ್ಗಾವಣೆ ಆಯಿತು.

ವಾರಾಹಿ ಆಣೆಕಟ್ಟು ನಾಲ್ಕು ಐದು ವರ್ಷಗಳಿಗೊಮ್ಮೆ ತುಂಬುತ್ತದೆ. ವಾರಾಹಿ ಗರಿಷ್ಠ ಮಟ್ಟ 595 ಇದೀಗ 584 ಅಡಿ ನೀರಿದೆ. ಇನ್ನ ಹತ್ತು ಅಡಿ ನೀರು ಸಂಗ್ರಹ ವಾಗುವುದು ಈ ವಾತಾವರಣದಲ್ಲಿ ಕಷ್ಟ ಸಾದ್ಯ. ಆದರೆ ಬಯಲು ಸೀಮೆಯ ಪ್ರದೇಶದಲ್ಲಿ ಆಣೆಕಟ್ಟಿನ ನೀರಿನ ಮಟ್ಟ ಪ್ರವಾಹ ಬಂದರೆ ತಕ್ಷಣ ಏರುತ್ತದೆ ‌. ಆದರೆ ಸಾಮಾನ್ಯ ಮಳೆಗೆ ಏರುವುದು ಕಷ್ಟ. ಈ ತುಂಗಾ ಭದ್ರಾ ಆಣೆಕಟ್ಟಿನ ನೀರಿನ ಪ್ರಮಾಣ ಏರಲು ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯಾಗಿ ತುಂಗಾ (ಗಾಜನೂರು) ಭದ್ರಾ (ಬಿ ಆರ್ ಪ್ರಾಜೆಕ್ಟ್) ಆಣೆಕಟ್ಟಿನ ನೀರು ಏರಿ ಆ ಆಣೆಕಟ್ಟಿನಿಂದ ನೀರು ಹೊರ ಬಿಟ್ಟರೆ ಆ ಮೂಲಕ ಆಲಮಟ್ಟಿ ಕಳೆದುಕೊಂಡ ಬೃಹತ್ ಪ್ರಮಾಣದ ಇಪ್ಪತ್ತು ಅಡಿ ನೀರು ಸಂಗ್ರಹ ಆಗಲು ಸಾಧ್ಯ. ಆಗಷ್ಟ್ ಹದಿನೈದು ಬಂದಿದೆ. ಇನ್ನ ಸಾಮಾನ್ಯ ಮಳೆ ಬರಬಹುದು. ಒಂದು ತಿಂಗಳ ಕಾಲ ಮಳೆ ಬರಬಹುದು. ಆದರೆ ಅಲ್ಲಲ್ಲಿ… ಆದರೆ ಈ ಸಾರಿ ಇದುವರೆಗೂ ಬಂದಂತಹ ಭಾರೀ ಮಳೆ ಮತ್ತೆ ಬರದು ಎನಿಸುತ್ತಿದೆ. ಮಳೆ ತಜ್ಞರು ಈ ಬಗ್ಗೆ ಮಾಹಿತಿ ನೀಡಬೇಕು…

Advertisement
ಬರಹ :
ಪ್ರಬಂಧ ಅಂಬುತೀರ್ಥ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ
ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |
February 20, 2025
6:58 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror