ಮಾರ್ಚ್ 23 ರಂದು ಸ್ಪೇನ್‌ನ ಪೂರ್ವ ವೇಲೆನ್ಸಿಯಾದಲ್ಲಿನ ಆಸ್ಪತ್ರೆಯಲ್ಲಿ ಆಮ್ನಿಯೋಟಿಕ್ ಚೀಲದೊಂದಿಗೆ ಸಿಸೇರಿಯನ್ ಮೂಲಕ ಅವಳಿ ಹೆಣ್ಣು ಮಕ್ಕಳು ಜನಿಸಿದವು.ಇದು 80,000 ಜನರಲ್ಲಿ ಒಬ್ಬರಿಗೆ ಸಂಭವಿಸುವ ಅಪರೂಪದ ಘಟನೆ ಎಂದು ಹೇಳಲಾಗುತ್ತದೆ. ಈ ಅಪರೂಪದ ಜನ್ಮವನ್ನು ‘ಮುಸುಕಿನ ಜನನ’ , ‘ಮತ್ಸ್ಯಕನ್ಯೆ ಅಥವಾ ‘ಎನ್ ಕಾಲ್’ ಜನನ ಎಂದೂ ಕರೆಯಲಾಗುತ್ತದೆ.
ಹೆರಿಗೆ ಸಮಯ ಹತ್ತಿರ ಬರುತ್ತಿದ್ದಂತೆ ವಾಟರ್ ಬ್ರೇಕ್ ಅಥವಾ ನೀರೊಡೆಯುವ ಪ್ರಕ್ರಿಯೆ ಸಾಮಾನ್ಯವಾದುದು. ಆದರೆ, ಇಲ್ಲಿ ನೀರೊಡೆಯದೆಯೇ ಮಗು ಜನಿಸಿದೆ.ಈ ಅವಳಿ ಹೆಣ್ಣುಮಕ್ಕಳ ಜನನದ ಬೆರಗುಗೊಳಿಸುವ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು 80,000 ಜನರಲ್ಲಿ ಒಬ್ಬರಿಗೆ ಸಂಭವಿಸುವ ಅಪರೂಪದ ಘಟನೆ ಎಂದು ಹೇಳಲಾಗುತ್ತದೆ. ಒಡೆಯದ ಆಮ್ನಿಯೋಟಿಕ್ ಚೀಲದೊಳಗೆ ಮಗು ಹೊರಬಂದಾಗ ಇದು ಸಂಭವಿಸುತ್ತದೆ, ಆಮ್ನಿಯೋಟಿಕ್ ಚೀಲ ಸಾಮಾನ್ಯವಾಗಿ ಮಹಿಳೆ ಹೆರಿಗೆಗೆ ಹೋದಾಗ ಒಡೆಯುತ್ತದೆ.
Hoy en el hospital de Vinaròs hemos tenido una cesárea velada (2 gemela) y aquí podéis ver el entusiasmo de los participantes @GVASalutVinaros @VinarosNews @GVAsanitat @epmediterraneo
Porque hay días que hacen que recordemos porque estamos en esto. Lo comparto con permiso, claro pic.twitter.com/YG0OR164Og— AnaTeijelo (@AnaTeijelo) March 23, 2022
Advertisement