ಇತ್ತ ಟಾಕ್ಸಿಕ್ ಸಿನಿಮಾದ ಚಿತ್ರೀಕರಣಕ್ಕಾಗಿ ಬೆಂಗಳೂರಿನ ಎಚ್.ಎಂ.ಟಿ ಫ್ಯಾಕ್ಟರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಯಶ್. ಈ ಆವರಣದಲ್ಲೇ ಬೃಹತ್ ಸೆಟ್ ಹಾಕಲಾಗಿದೆ. ಒಳಾಂಗಣದ ಬಹುತೇಕ ಚಿತ್ರೀಕರಣ ಇದೇ ಸೆಟ್ ನಲ್ಲೇ ನಡೆಯಲಿದೆ. ನಂತರ ಮುಂಬೈಗೆ ಚಿತ್ರೀಕರಣ ತಂಡ ಶಿಫ್ಟ್ ಆಗಲಿದೆ ಎನ್ನುವ ಮಾಹಿತಿ ಇದೆ.
ಕಾಂತಾರ ಪ್ರೀಕ್ವೆಲ್ ಒಟ್ಟು ಬಜೆಟ್ 60 ಕೋಟಿ ಎಂದು ಹೇಳಲಾಗುತ್ತಿದೆ. ಈ ಹಿಂದಿನ ಕಾಂತಾರ ಚಿತ್ರಕ್ಕೆ ರಿಷಬ್ ಖರ್ಚು ಮಾಡಿದ್ದು ಕೇವಲ 18 ಕೋಟಿ ರೂಪಾಯಿ. ಈಗ ಅದು 60 ಕೋಟಿ ರೂಪಾಯಿಗೆ ಹಿಗ್ಗಿದೆ. ಕಾರಣ ಸ್ಕ್ರಿಪ್ಟ್ ಆ ರೀತಿಯಲ್ಲೇ ರೆಡಿ ಆಗಿದೆ. ಮತ್ತು ದೊಡ್ಡ ಮಟ್ಟದಲ್ಲಿ ಮೇಕಿಂಗ್ ಮಾಡಲಾಗುತ್ತಿದೆ. ಗಾಂಧಿನಗರದಲ್ಲಿ ಹರಿದಾಡುತ್ತಿರುವ ತಾಜಾ ಸುದ್ದಿಯ ಪ್ರಕಾರ ಟಾಕ್ಸಿಕ್ ಬಜೆಟ್ 150 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಆದರೆ, ಈವರೆಗೂ ಬಜೆಟ್ ಕುರಿತಾಗಿ ಚಿತ್ರತಂಡವಾಗಲಿ ಅಥವಾ ನಿರ್ಮಾಪಕರಾಗಲಿ ಅಧಿಕೃತವಾಗಿ ಹೇಳಿಲ್ಲ. ಯಶ್ ಸಿನಿಮಾ ಬಜೆಟ್ ನೂರು ಕೋಟಿ ಇರಲೇಬೇಕು ಎಂದು ವಿಶ್ಲೇಷಿಸಲಾಗುತ್ತಿದೆ.
- ಅಂತರ್ಜಾಲ ಮಾಹಿತಿ