Advertisement
ಪ್ರಮುಖ

ಕನ್ನಡದ ಎರಡು ಭಾರೀ ಬಜೆಟ್ ಸಿನಿಮಾಗಳು ಒಂದೇ ದಿನ ಶೂಟಿಂಗ್ ಆರಂಭ | ‘ಕಾಂತಾರ’ ಪ್ರೀಕ್ವೆಲ್ ಶೂಟಿಂಗ್ ದಿನವೇ ‘ಟಾಕ್ಸಿಕ್’ ಶೂಟಿಂಗ್ ಶುರು

Share

ಕಳೆದ ವರ್ಷ ಕಾಂತಾರ(Kantara) ಹಾಗೂ ಕೆಜಿಎಫ್‌(KGF) ಕನ್ನಡದ ಎರಡು ಚಿತ್ರಗಳು ಇಡೀ ವಿಶ್ವದಾದ್ಯಂತ ಧೂಳು ಎಬ್ಬಿಸಿದ್ದವು. ನಂತರ ಇಬ್ಬರು ನಟರ ಮುಂದಿನ ಚಿತ್ರದ ಬಗ್ಗೆ ಜನರಿಗೆ ಆಗಾಗ ನ್ಯೂಸ್‌ಗಳನ್ನು ನೀಡುತ್ತಲೇ ಇದ್ರು. ಆದರೆ ಚಿತ್ರ ಯಾವಾಗ ಶೂಟಿಂಗ್‌(Shooting) ಆರಂಭ ಆಗುತ್ತೆ ಅನ್ನೋ ಬಗ್ಗೆ ನಿಖರ ಮಾಹಿತಿ ಇರಲಿಲ್ಲ. ಇದೀಗ ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ಕರಾವಳಿ ಪ್ರತಿಭೆ ರಿಷಬ್‌ ಶೆಟ್ಟಿ ತಮ್ಮ ಮುಂದಿನ ಅದ್ಧೂರಿ ಚಿತ್ರಗಳ ಚಿತ್ರಿಕರಣದ ದಿನಾಂಕ ಘೋಷಣೆ ಮಾಡಿದ್ದಾರೆ. ಕನ್ನಡದ ಎರಡು ಭಾರೀ ಬಜೆಟ್ ಸಿನಿಮಾಗಳು ಒಂದೇ ದಿನ ಶೂಟಿಂಗ್ ಆರಂಭಿಸುತ್ತಿವೆ. ಯಶ್ (Yash) ನಟನೆಯ ಟಾಕ್ಸಿಕ್ (Toxic) ಮತ್ತು ರಿಷಬ್ ಶೆಟ್ಟಿ (Rishabh Shetty) ನಟಿಸಿ, ನಿರ್ದೇಶನ ಮಾಡುತ್ತಿರುವ ಕಾಂತಾರ (Kantara)  ಪ್ರೀಕ್ವೆಲ್ ಚಿತ್ರಗಳು ಏಪ್ರಿಲ್ 15ರಿಂದ ಚಿತ್ರೀಕರಣ ಆರಂಭಿಸುತ್ತಿವೆ.

ಕಾಂತಾರ ಚಿತ್ರೀಕರಣ ಕುಂದಾಪುರದಿಂದ ಶುರುವಾದರೆ, ಟಾಕ್ಸಿಕ್ ಶೂಟಿಂಗ್ ಬೆಂಗಳೂರಿನಲ್ಲೇ ನಡೆಯಲಿದೆ. ಕುಂದಾಪುರದಲ್ಲಿ ಕಾಂತಾರ ಚಿತ್ರಕ್ಕಾಗಿ ಬೃಹತ್ ಸೆಟ್ ಹಾಕಲಾಗಿದ್ದು, ಅಲ್ಲಿಯೇ ಬಹುತೇಕ ಒಳಾಂಗದ ಚಿತ್ರೀಕರಣ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರಂತೆ. ನಂತರ ಕಾಡು, ಮೇಡುಗಳಲ್ಲಿ ಶೆಟ್ಟರ ಕ್ಯಾಮೆರಾ ಹಿಡಿದು ಹೊರಡಲಿದ್ಧಾರೆ. ಈ ಹಿಂದೆಯೇ ಚಿತ್ರೀಕರಣ ಶುರುವಾಗಿತ್ತು ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೆ, ಏಪ್ರಿಲ್ 15ರಿಂದ ಪ್ರಾರಂಭವಾಗುತ್ತಿದೆ.

ಇತ್ತ ಟಾಕ್ಸಿಕ್ ಸಿನಿಮಾದ ಚಿತ್ರೀಕರಣಕ್ಕಾಗಿ ಬೆಂಗಳೂರಿನ ಎಚ್.ಎಂ.ಟಿ ಫ್ಯಾಕ್ಟರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಯಶ್. ಈ ಆವರಣದಲ್ಲೇ ಬೃಹತ್ ಸೆಟ್ ಹಾಕಲಾಗಿದೆ. ಒಳಾಂಗಣದ ಬಹುತೇಕ ಚಿತ್ರೀಕರಣ ಇದೇ ಸೆಟ್ ನಲ್ಲೇ ನಡೆಯಲಿದೆ. ನಂತರ ಮುಂಬೈಗೆ ಚಿತ್ರೀಕರಣ ತಂಡ ಶಿಫ್ಟ್ ಆಗಲಿದೆ ಎನ್ನುವ ಮಾಹಿತಿ ಇದೆ.

ಕಾಂತಾರ ಪ್ರೀಕ್ವೆಲ್ ಒಟ್ಟು ಬಜೆಟ್ 60 ಕೋಟಿ ಎಂದು ಹೇಳಲಾಗುತ್ತಿದೆ. ಈ ಹಿಂದಿನ ಕಾಂತಾರ ಚಿತ್ರಕ್ಕೆ ರಿಷಬ್ ಖರ್ಚು ಮಾಡಿದ್ದು ಕೇವಲ 18 ಕೋಟಿ ರೂಪಾಯಿ. ಈಗ ಅದು 60 ಕೋಟಿ ರೂಪಾಯಿಗೆ ಹಿಗ್ಗಿದೆ. ಕಾರಣ ಸ್ಕ್ರಿಪ್ಟ್ ಆ ರೀತಿಯಲ್ಲೇ ರೆಡಿ ಆಗಿದೆ. ಮತ್ತು ದೊಡ್ಡ ಮಟ್ಟದಲ್ಲಿ ಮೇಕಿಂಗ್ ಮಾಡಲಾಗುತ್ತಿದೆ. ಗಾಂಧಿನಗರದಲ್ಲಿ ಹರಿದಾಡುತ್ತಿರುವ ತಾಜಾ ಸುದ್ದಿಯ ಪ್ರಕಾರ ಟಾಕ್ಸಿಕ್ ಬಜೆಟ್ 150 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಆದರೆ, ಈವರೆಗೂ ಬಜೆಟ್ ಕುರಿತಾಗಿ ಚಿತ್ರತಂಡವಾಗಲಿ ಅಥವಾ ನಿರ್ಮಾಪಕರಾಗಲಿ ಅಧಿಕೃತವಾಗಿ ಹೇಳಿಲ್ಲ. ಯಶ್ ಸಿನಿಮಾ ಬಜೆಟ್ ನೂರು ಕೋಟಿ ಇರಲೇಬೇಕು ಎಂದು ವಿಶ್ಲೇಷಿಸಲಾಗುತ್ತಿದೆ.

  • ಅಂತರ್ಜಾಲ ಮಾಹಿತಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…

1 day ago

ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…

2 days ago

ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ

ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…

3 days ago

ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ

ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…

3 days ago