ತೋಟಗಾರಿಕಾ ಇಲಾಖೆ ಶಿರಸಿ, ಜೀವವೈವಿಧ್ಯ ಮಂಡಳಿ , ತಾಲೂಕಾ ಪಂಚಾಯತ್ ಶಿರಸಿ, ಉತ್ತರಕನ್ನಡ ಸಾವಯವ ಒಕ್ಕೂಟ , ಶಿರಸಿ ಮತ್ತು ವನಸ್ತ್ರೀ ಸಂಸ್ಥೆ ಇವರ ಸಹಯೋಗದಲ್ಲಿ ಎರಡು ದಿನಗಳ ಹಲಸು ಮತ್ತು ಮಲೆನಾಡು ಮೇಳ ಹಾಗೂ ವಿಚಾರ ಸಂಕಿರಣವನ್ನು ಜೂ.29 ಹಾಗೂ 30 ರಂದು ಆಯೋಜಿಸಲಾಗಿದೆ.
ಮೇಳದ ವಿಶೇಷತೆಗಳು : ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಹಲಸು ಮತ್ತು ಹಲಸಿನ ಬೀಜದಿಂದ ಮಾಡಿದ ಖಾದ್ಯಗಳ ಸ್ಪರ್ಧೆ, ವನಸ್ತ್ರೀ ಸಂಸ್ಥೆಯವರಿಂದ ಸಾಂಪ್ರದಾಯಿಕ ತರಕಾರಿ ಬೀಜಗಳ ಮಾರಾಟ, ಹಲಸಿನ ವಿಶೇಷ ತಳಿಗಳ ಪ್ರದರ್ಶನ ಮತ್ತು ಮಾರಾಟ, ಹೂವಿನ ಹಾಗೂ ತರಕಾರಿ ಸಸ್ಯಗಳ ಪ್ರದರ್ಶನ ಮತ್ತು ಮಾರಾಟ, ‘ಸೆಲ್ಕೊ’ ಫೌಂಡೇಶನ್ ವತಿಯಿಂದ ಸೋಲಾರ್ ಆಧಾರಿತ ಆಹಾರ ಸಂಸ್ಕರಣಾ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ. ಮೇಳದ ಎರಡೂ ದಿನಗಳು ಹಲಸಿನ ಸಾಂಪ್ರದಾಯಿಕ ಖಾದ್ಯಗಳ ಕ್ಯಾಂಟೀನ್ ಇರಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – 8660553054
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel