2,000 ರೂ ನೋಟು ವಿನಿಮಯಕ್ಕೆ ಇನ್ನೆರಡು ತಿಂಗಳು ಬಾಕಿ | ಸೆಪ್ಟೆಂಬರ್ 30 ಕೊನೆಯ ದಿನ |

August 8, 2023
1:28 PM
ಸೆಪ್ಟೆಂಬರ್ 30ರವರೆಗೂ ಈ ನೋಟುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳಲು ಅವಕಾಶ ಕೊಡಲಾಗಿದೆ. ಅದಾದ ಬಳಿಕ ನೋಟು ಅಸಿಂಧುಗೊಳ್ಳುವುದಿಲ್ಲ ಎಂದು ಆರ್​ಬಿಐ ಹೇಳಿದೆಯಾದರೂ, ಆ ನೋಟು ನಿರುಪಯುಕ್ತವಾಗುತ್ತದಾ ಎಂಬುದು ಸ್ಪಷ್ಟಗೊಂಡಿಲ್ಲ.

ಅಂದು 500 ರೂ ಹಾಗೂ 1000ರೂ ನೋಟುಗಳ ಚಲಾವಣೆ ಹಿಂಪಡೆದಾಗ ಇಡೀ ದೇಶವೇ ಅಲ್ಲೋಲ ಕಲ್ಲೋಲವಾಗಿತ್ತು. ಆದರೆ ಕಳೆದ ಎರಡು ತಿಂಗಳ ಹಿಂದೆ 2000 ಮುಖ ಬೆಲೆಯ ನೋಡು ರದ್ದು ಮಾಡಿದಾಗ ಜನಸಾಮಾನ್ಯರು ಅಂತ ದೊಡ್ಡ ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ. ನೋಟನ್ನು ಬ್ಯಾಂಕ್‌ ಗಳಿಗೆ ಹಿಂದಿರಿಗಿಸುವ ಕೆಲಸ ಅದರಪಾಡಿಗೆ ನಡೆದಿದೆ. ಸೆಪ್ಟೆಂಬರ್ 30ರವರೆಗೂ ಈ ನೋಟುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳಲು ಅವಕಾಶ ಕೊಡಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್  ತನ್ನ 2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರವನ್ನು ಮೇ 19ರಂದು ಘೋಷಿಸಿತ್ತು. 2,000 ರೂ ನೋಟುಗಳನ್ನು ಹೊಂದಿರುವವರು ಬ್ಯಾಂಕುಗಳಲ್ಲಿ ಅವುಗಳನ್ನು ವಿನಿಮಯ ಮಾಡಿಕೊಳ್ಳಲು ತಿಳಿಸಲಾಗಿದೆ. ಜುಲೈ ತಿಂಗಳ ಅಂತ್ಯದೊಳಗೆ ಶೇ. 88ರಷ್ಟು ಪ್ರಮಾಣದಲ್ಲಿ ನೋಟುಗಳು ಮರಳಿವೆ ಎಂದು ಆರ್​ಬಿಐ ಮಾಹಿತಿ ನೀಡಿದೆ. ಅಂದರೆ ಇನ್ನೂ ಶೇ. 10ಕ್ಕಿಂತ ಹೆಚ್ಚು ನೋಟುಗಳು ಬ್ಯಾಂಕುಗಳಿಗೆ ಮರಳಿಲ್ಲದಿರುವುದು ಈ ಅಂಕಿ ಅಂಶದಿಂದ ಕಂಡುಬರುತ್ತದೆ. ಬಹಳ ಮಂದಿ ಬಳಿ 2,000 ರೂ ನೋಟುಗಳ ಸಂಗ್ರಹ ಇನ್ನೂ ಇರಬಹುದು.

ಸೆಪ್ಟೆಂಬರ್ 30ರವರೆಗೂ ಈ ನೋಟುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳಲು ಅವಕಾಶ ಕೊಡಲಾಗಿದೆ. ಅದಾದ ಬಳಿಕ ನೋಟು ಅಸಿಂಧುಗೊಳ್ಳುವುದಿಲ್ಲ ಎಂದು ಆರ್​ಬಿಐ ಹೇಳಿದೆಯಾದರೂ, ಆ ನೋಟು ನಿರುಪಯುಕ್ತವಾಗುತ್ತದಾ ಎಂಬುದು ಸ್ಪಷ್ಟಗೊಂಡಿಲ್ಲ. ಸೆಪ್ಟಂಬರ್ 30 ರ ಬಳಿಕ ಆರ್​ಬಿಐ ಈ ಬಗ್ಗೆ ಸ್ಪಷ್ಟನೆ ನೀಡಬಹುದು. ಅದೇನೇ ಇದ್ದರೂ 2,000 ರೂ ನೋಟು ವಿನಿಮಯಕ್ಕೆ ಇನ್ನೂ ಒಂದೂವರೆ ತಿಂಗಳಿಗೂ ಹೆಚ್ಚು ಕಾಲಾವಕಾಶ ಇದೆ. ಸೆಪ್ಟಂಬರ್ 30ರವರೆಗೆ ಬ್ಯಾಂಕುಗಳಿಗೆ ಯಾವ್ಯಾವಾಗ ರಜಾ ದಿನಗಳೆಂದು ತಿಳಿಯುವುದು ಈ ಸಂದರ್ಭದಲ್ಲಿ ಉಚಿತವೆನಿಸಬಹುದು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!
March 26, 2026
7:04 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!
March 25, 2026
12:30 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror