ಹಲಸು ಸ್ನೇಹಿ ಕೂಟದ ಹಿನ್ನೋಟದ ಹೆಜ್ಜೆಗಳು ‘ಫಲಪ್ರದ’

May 22, 2024
10:24 AM
ಹಲಸು ಸ್ನೇಹೀ ಕೂಟದ ಕೆಲಸ ಕಾರ್ಯಗಳ ದಾಖಲೀಕರಣ ಇಲ್ಲಿದೆ.
ಬಂಟ್ವಾಳ ತಾಲೂಕಿನ ಉಬರು-ಮುಳಿಯ ‘ಹಲಸು ಸ್ನೇಹಿ ಕೂಟ’ವು 2011ರಿಂದ ಸಕ್ರಿಯ. ಹಲಸು, ಗೆಡ್ಡೆ, ತರಕಾರಿ, ಮಾವು, ಕಾಡುಮಾವು, ಪುನರ್ಪುಳಿ, ಚಳಿಗಾಲದ ತರಕಾರಿ, ಸಿರಿಧಾನ್ಯ, ಸೊಪ್ಪು ತರಕಾರಿಗಳು, ಹಣ್ಣುಗಳ ಫಲಾಹಾರ.. ಹೀಗೆ ಅನ್ಯಾನ್ಯ ಕಾರ್ಯಕ್ರಮಗಳನ್ನು ಒಂದು ಗ್ರಾಮ ಮಟ್ಟದ ವ್ಯಾಪ್ತಿಯಲ್ಲಿ ನಡೆಸಿದೆ. 
ಹಲಸು ಮತ್ತು ಮಾವಿನ ‘ರುಚಿ ನೋಡಿ ತಳಿ ಆಯ್ಕೆ’ ಮೂಲಕ ಸುಮಾರು ಐವತ್ತಕ್ಕೂ ಮಿಕ್ಕಿ ತಳಿಗಳು ಅಭಿವೃದ್ಧಿಗೊಂಡು ಕೃಷಿಕರ ತೋಟದಲ್ಲಿ ಬೆಳೆದಿವೆ. ಹಲಸಿನ ತೋಟಗಳು ಎದ್ದಿವೆ. ಮೌಲ್ಯವರ್ಧಿತ ಉತ್ಪನ್ನಗಳು ಸಿದ್ಧಗೊಂಡಿವೆ. ಸುಮಾರು ಇಪ್ಪತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ಉತ್ತಮ ಹಲಸು-ಮಾವುಗಳನ್ನು ‘ಕೃಷಿಕರೇ’ ಆಯ್ಕೆ ಮಾಡಿರುವುದು ವಿಶೇಷ.
ಸಂಪರ್ಕಕ್ಕೆ ಬಂದ ಅನೇಕ ಮನೆಗಳಲ್ಲಿ ಹಲಸು, ಮಾವು, ಸಿರಿಧಾನ್ಯ.. ಹೀಗೆ ಖಾದ್ಯಗಳಿಗೆ ಮೊದಲ ಮಣೆ. ಸದ್ದಿಲ್ಲದೆ ದಶಕಕ್ಕೂ ಮಿಕ್ಕಿ ಕಲಾಪಗಳನ್ನು ನಡೆಸುವುದ ಮೂಲಕ ಕೃಷಿ, ಕೃಷಿಕರ ಆಸಕ್ತಿಗಳನ್ನು ಜೀವಂತವಿಟ್ಟಿದೆ.
ಹನ್ನೊಂದು ವರುಷದ ‘ಹಲಸು ಸ್ನೇಹಿ ಕೂಟ’ದ ಕಲಾಪಗಳ ವಿವರಗಳು, ಆಯ್ಕೆಯಾದ ತಳಿಗಳು, ವಿಷಯ ತಜ್ಞರ ಮಾತುಗಳು ‘ಫಲಪ್ರದ’ ಪುಸ್ತಕದ ಹೂರಣಗಳು.
ಪುಸ್ತಕದ ಲೇಖಕ : ನಾ. ಕಾರಂತ ಪೆರಾಜೆ. ಹಲಸು ಸ್ನೇಹಿ ಕೂಟದ ಪ್ರಕಾಶನ.  ಪುತ್ತೂರಿನ ಜೈನ್ ಭವನದಲ್ಲಿ ಮೇ 24 ರಂದು ಅಡಿಕೆ ಪತ್ರಿಕೆಯ ಪ್ರಕಾಶಕ ಪಡಾರು ರಾಮಕೃಷ್ಣ ಶಾಸ್ತ್ರಿಯವರು ‘ಫಲಪ್ರದ’ವನ್ನು ಅನಾವರಣಗೊಳಿಸುವರು. ಪುತ್ತೂರಿನ ಶಾಸಕ ಅಶೋಕ ಕುಮಾರ್ ರೈ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಡಾ.ದಿನಕರ ಅಡಿಗ, ಬಲರಾಮ ಆಚಾರ್ಯ, ಮುಳಿಯ ವೆಂಕಟಕೃಷ್ಣ ಶರ್ಮ ಇವರೆಲ್ಲರ ಶುಭಸೇಸೆಯೊಂದಿಗೆ ‘ಫಲಪ್ರದ’ ಪುಸ್ತಕ ಅನಾವರಣಗೊಳ್ಳಲಿದೆ.

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ| 21-11-2024 | ಮಳೆಯ ಸಾಧ್ಯತೆ ಕಡಿಮೆ | ನ.26 ಸುಮಾರಿಗೆ ಚಂಡಮಾರುತ ಸಾಧ್ಯತೆ |
November 21, 2024
2:52 PM
by: ಸಾಯಿಶೇಖರ್ ಕರಿಕಳ
ದ ಕ ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ
November 20, 2024
8:06 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-11-2024 | ರಾಜ್ಯದಲ್ಲಿ ಒಣಹವೆ | ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಲಕ್ಷಣ |
November 20, 2024
5:38 PM
by: ಸಾಯಿಶೇಖರ್ ಕರಿಕಳ
ರಾಜ್ಯದ ಕೈಗಾರಿಕೆಗಳಲ್ಲಿ ಹಸಿರು ತಂತ್ರಜ್ಞಾನ ಅಳವಡಿಸಲು ಆದ್ಯತೆ | ಮುಖ್ಯಮಂತ್ರಿ ಸಿದ್ದರಾಮಯ್ಯ
November 20, 2024
5:05 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror