“ಉಡುಪಿ ಮಿಠಾಯಿ” ಮನೆ…! | ಇಲ್ಲಿನ ವಿಶೇಷತೆ ಏನು..?

August 7, 2024
11:09 PM

ನೀವು ಶಂಕರ್ ನಾಗ್ ರವರ ನಿರ್ದೇಶನದ ಮಾಲ್ಗುಡಿ ಡೇಸ್ ದಾರವಾಹಿ ಯನ್ನು ಟಿವಿಯಲ್ಲಿ ನೋಡಿರಬಹುದು. ಅದರಲ್ಲಿ ಮಿಠಾಯಿವಾಲ ಎಂಬ ಮಾಲಿಕೆ ಬರುತ್ತದೆ.  ಅನಂತ್ ನಾಗ್ ಮತ್ತು ದಿವಂಗತ ಮನ್ ದೀಪ್ ರಾಯ್ ಮುಖ್ಯ ಭೂಮಿಕೆಯಲ್ಲಿರುವ ಆ ಮಾಲಿಕೆಯಲ್ಲಿ ಆ ಕಾಲದ (1940 – 1950 ರ ಕಾಲದ) ಮಿಠಾಯಿ ಅಂಗಡಿ ಯಾನೆ ಸ್ವೀಟ್ ಸ್ಟಾಲ್ ನ ದೃಶ್ಯ ಇದೆ. ಮೂವತ್ತೈದು ವರ್ಷಗಳ ಹಿಂದೆ ಆಗುಂಬೆಯಲ್ಲಿ ಆರ್ ಕೆ ನಾರಾಯಣ್ ಅವರ ಕಲ್ಪನೆಯ ಮಾಲ್ಗುಡಿ ಊರಿನ ಮಿಠಾಯಿ ಅಂಗಡಿಯನ್ನ ಅಧ್ಬುತವಾಗಿ ಮರು ಸೃಷ್ಟಿ ಮಾಡಿಸಿದವರು ನಿರ್ದೇಶಕ ಶಂಕರ್ ನಾಗ್ ರವರು. ಆ ಧಾರವಾಹಿ ಯಲ್ಲಿ ಆ ಮಿಠಾಯಿ ವಾಲ ಮಾಲಿಕೆಯನ್ನ ನೋಡಿದವರಿಗೆ ಅಂತಹದ್ದೇ ಒಂದು ನೂರು ವರ್ಷಗಳ ಹಿಂದಿನ ಕಾಲದ ಮಿಠಾಯಿ ಮನೆ ಜ್ಞಾಪಿಸುವ “ಉಡುಪಿ ಮಿಠಾಯಿ” ಎಂಬ ಹೆಸರಿನಲ್ಲಿ “ಸಮರ್ಪಣ” ಎಂಬ ಉಪ ನಾಮ ದೊಂದಿಗೆ ಚಿತ್ರ ಕಲಾವಿದರಾದ  ಪುರುಷೋತ್ತಮ ಅಡ್ವೆಯವರು ಉಡುಪಿ ಅದಮಾರು  ಶ್ರೀ ಈಶ ಪ್ರಿಯ ಶ್ರೀ ಗಳ ಆಶಿರ್ವಾದದಲ್ಲಿ ಸ್ಥಾಪಿಸಿದ್ದಾರೆ.

Advertisement
Advertisement

ಈ ವಿಶೇಷ ಅಂಗಡಿ ಉಡುಪಿ ಯ ಶ್ರೀ ಅದಮಾರು ಮಠದ ಗೆಸ್ಟ್ ಹೌಸ್ ಎದುರಿದೆ. ಈ ಅಂಗಡಿಯ ಫಲಕ , ಅಂಗಡಿಯ ಪ್ರಾಂಗಣ , ಅಂಗಡಿಯ ಒಳಾಂಗಣ ವಿನ್ಯಾಸ ,ಅಂಗಡಿಯಲ್ಲಿ ವಸ್ತುಗಳನ್ನು ಸಂಗ್ರಹಿಸಿ ಇಟ್ಟಿರುವ ಪಾತ್ರೆ ಪಡಗಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲಾ ಬಗೆಯ ದೇಸಿ ವಸ್ತುಗಳು ಮತ್ತು ಕೈ ತಯಾರಿಕೆಯ ಸಿಹಿ ಉತ್ಪನ್ನ ಗಳು ಗ್ರಾಹಕ ಅತ್ಯಾಕರ್ಷಿಸುತ್ತದೆ.‌
ಪುರುಷೋತ್ತಮ ಅಡ್ವೆ ಯವರು ಈ ಉಡುಪಿ ಮಿಠಾಯಿ ಮನೆಯ ಸಂಯೋಜಕರು.

Advertisement

” ಉಡುಪಿ ಮಿಠಾಯಿ ” ಯಾನೆ “ಸಮರ್ಪಣ ” ದ ಅತ್ಯಂತ ದೊಡ್ಡ ‘ಅತಿ ರಸ ” ಸಿಹಿಯ ವಿಚಾರವೇನೆಂದರೆ ಚಿಕ್ಕ ಚಿಕ್ಕ ಆಹಾರೋತ್ಪನ್ನ ತಯಾರಕರ ಕೈಯಲ್ಲಿ “ಗ್ರಾಹಕರ ” ಆಶಯಕ್ಕೆ ಅನುಗುಣವಾಗಿ , ಅತ್ಯಂತ ಮುಚ್ಚಟೆಯಲ್ಲಿ , ಶುದ್ಧವಾಗಿ ಮನೆಯಲ್ಲಿ ಯಾವುದೇ ರಾಸಾಯನಿಕ ಚೋದಕ ಬಳಕೆಯಿಲ್ಲದೇ, ಕಲಬೆರಕೆಯಿಲ್ಲದೇ ತಯಾರಿಸಲಾದ ಆಹಾರೋತ್ಪನ್ನವನ್ನ ತಯಾರಿಕರಿಂದ ಗೌರವಯುತವಾಗಿ ಖರೀದಿಸಿ “ಅವರಿಗೊಂದು” ಮಾರಾಟದ ವೇದಿಕೆ ಮಾಡುತ್ತಿರುವುದು. ಇದೊಂಥರ ಜೇನು ಮಕರಂದ ಸಂಗ್ರಹಿಸಿ ಜೇನು ತುಪ್ಪವನ್ನು ತಯಾರಿಸಿ ಸಮಾಜಕ್ಕೆ ನೀಡಿದಂತೆ…ಒಂಥರ ಇದು ಮಧುಕರ ವೃತ್ತಿ …

ಈ ಆಹಾರೋತ್ಪನ್ನ ದ ಜೊತೆಯಲ್ಲಿ ಸಾವಯವ ಅಕ್ಕಿ ಬೇಳೆ ಸಿರಿ ಧಾನ್ಯ ಗಳು , ದೇಸಿ ತಳಿ ಹಸುಗಳ ತುಪ್ಪ, ಇತರ ಉತ್ಪನ್ನ ಗಳು ಮತ್ತು ಕೈ ತಯಾರಿಕೆಯ ಮಗ್ಗದ ವಸ್ತ್ರ ಉತ್ಪನ್ನ ಗಳು , ಸಾಂಪ್ರದಾಯಿಕ ಮನೆ ಬಳಕೆಯ ಉತ್ಪನ್ನ ಗಳು ಇನ್ನೂ ಅನೇಕ ವಸ್ತುಗಳು ” “ಉಡುಪಿ ಮಿಠಾಯಿ” ಮನೆಯಲ್ಲಿ ” ಲಭ್ಯ…

Advertisement

ಉಡುಪಿ ಕೃಷ್ಣ ಮಠ ಕ್ಕೆ ಹೋದವರು ಶ್ರೀ ಕೃಷ್ಣ ಪರಮಾತ್ಮನ ದರ್ಶಿಸಿ ನಂತರ ಅದಮಾರು ಮತ್ತು ಪೇಜಾವರ ಮಠದ ನಡುವಿನ ಓಣಿಯಲ್ಲಿ ಸ್ವಲ್ಪ ಮೇಲೆ ಹೋದರೆ ಅದಮಾರು ಮಠದ ಗೆಸ್ಟ್ ಹೌಸ್ ಸಿಗುತ್ತದೆ. ಈ ಗೆಸ್ಟ್ ಹೌಸ್ ಎದುರಿಗೆ ಈ ” ಉಡುಪಿ ಮಿಠಾಯಿ ” ಮನೆ ” ಇದೆ. ಉಡುಪಿ ಬಸ್ ನಿಲ್ದಾಣದಿಂದ ಬರುವವರು ವುಡ್ ಲ್ಯಾಂಡ್ಸ್ ಹೋಟೆಲ್ ಕೆಳ ಭಾಗಕ್ಕೆ ಬಂದರೆ ” ಉಡುಪಿ ಮಿಠಾಯಿ ” ಮನೆ ಸಿಗುತ್ತದೆ. ಪುರುಷೋತ್ತಮ ಅಡ್ವೆಯವರ ಪರಿಕಲ್ಪನೆ ಸಂಯೋಜನೆಯ ಈ ವಿಶೇಷ ಅಂಗಡಿಗೆ ಒಮ್ಮೆ ಬೇಟಿ ಕೊಡಿ… ಖಂಡಿತವಾಗಿಯೂ ನೀವು “ಉಡುಪಿ ಮಿಠಾಯಿ” ಮನೆಯಿಂದ ಏನನ್ನಾದರೂ ಖರೀದಿಸದೇ ಮರಳಲಾರರಿ…‌
” ಉಡುಪಿ ಮಿಠಾಯಿ’ ಮನೆ ಯಲ್ಲಿ ಖರೀದಿಸಿ ದೇಸಿ ಉದ್ಯಮ ಗಳನ್ನು ಪ್ರೋತ್ಸಾಹಿಸಿ..

ಮೂಲತಃ  ಪುರುಷೋತ್ತಮ ಅಡ್ವೆಯವರು ಚಿತ್ರ ಕಲಾವಿದರು. ಅವರಲ್ಲಿರುವ ಕಲಾತ್ಮಕತೆ ಈ ವಿಭಿನ್ನ ಪರಿಕಲ್ಪನೆ ಗೆ ನಾಂದಿಯಾಗಿರಬಹುದು. ಈ ಉದ್ಯಮದ ಪರಿಕಲ್ಪನೆಯ ಸಾರ ಸಮಸ್ತ ರಿಂದ ಸಮಸ್ತರಿಗೆ ಸಮರ್ಪಣೆ ಎಂಬುದಾಗಿದೆ. ಬಂಧುಗಳೇ, ನೀವು ಉಡುಪಿ ಗೆ ಹೋದಾಗ  ಪುರುಷೋತ್ತಮ ಅಡ್ವೆಯವರ ಸಮರ್ಪಣಾ ಭಾವದಿಂದ ಸ್ಥಾಪಿಸಿರುವ “ಉಡುಪಿ ಮಿಠಾಯಿ” ಮನೆಗೆ ಬೇಟಿ ಕೊಟ್ಟು ಒಮ್ಮೆ ಈ ವೈಶಿಷ್ಟ್ಯ ಪೂರ್ಣತೆಯ ಅನುಭವವನ್ನು ನೀವೂ ಹೊಂದಿ.

Advertisement
ಬರಹ :
ಪ್ರಬಂಧ ಅಂಬುತೀರ್ಥ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಗ್ರಾಮೀಣ ಪರಿಸರದಲ್ಲಿ ಕೃಷಿ ಜ್ಞಾನಾನುಭವದ ಜೀವಂತ ಸಾಕ್ಷಿ ಬದನಾಜೆ ಶಂಕರ ಭಟ್
September 18, 2024
9:11 PM
by: ಡಾ.ಚಂದ್ರಶೇಖರ ದಾಮ್ಲೆ
ಧರ್ಮಕ್ಕೆ ಸಿಗುವುದಾದರೆ ಇರಲಿ ಎಂಬ ಮನೋಭಾವ
September 11, 2024
11:27 PM
by: ಡಾ.ಚಂದ್ರಶೇಖರ ದಾಮ್ಲೆ
ಅಡಿಕೆ ಬೆಳೆಗಾರರಿಗೆ ಮುಂದೊಂದು ದಿನ ಹೀಗಾಗಬಹುದೇ…!?
September 8, 2024
9:24 PM
by: ಪ್ರಬಂಧ ಅಂಬುತೀರ್ಥ
ವಿಶ್ವಗುರುವಾಗುವತ್ತ ಭಾರತ | ಶಿಕ್ಷಣ ಮತ್ತು ಕೃಷಿಕ್ಷೇತ್ರಗಳು ಅಸ್ಥಿರವಾಗುತ್ತಿರುವುದು ಗಮನದಲ್ಲಿದೆಯೆ?
September 4, 2024
9:29 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror