ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಉಡುಪಿ ಜಿಲ್ಲೆಯಲ್ಲೂ ಇದೆ…!

May 23, 2022
11:22 PM
News Summary
ಒಂದು ಕಾಲದಲ್ಲಿ ಆಗುಂಬೆ ಎಂದರೆ ಮಳೆಯ ನಾಡು. ಇದೀಗ ಕಾಲ ಬದಲಾದಂತೆ ಮಳೆಯ ವೇಗ ಕಡಿಮೆಯಾಗಿದೆ. ಆದರೆ ಹೆಚ್ಚು ಮಳೆ ಬೀಳುವ ಪ್ರದೇಶವೂ ಬದಲಾಗಿದೆ. ಇದಕ್ಕೆ ಪರಿಸರದ ಸೂಕ್ಷ್ಮ ಅರಿಯಬೇಕಿದೆ.

ಒಂದು ಕಾಲದಲ್ಲಿ ರಾಜ್ಯದ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ತೀರ್ಥಹಳ್ಳಿ ತಾಲೂಕಿನ ಆಗುಂಬೆ, ದಕ್ಷಿಣ ಭಾರತದ ಚಿರಾಪುಂಜಿ ಎಂಬ ಹೆಸರು ಪಡೆದಿತ್ತು. ಇದೀಗ ಉಡುಪಿ ಜಿಲ್ಲೆಯಲ್ಲೂ ಕೆಲವು ಪ್ರದೇಶಗಳು ರಾಜ್ಯದಲ್ಲಿ  ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅಂತಹದ್ದೇ ಪ್ರದೇಶಗಳು ಇವೆ. ಅದರಲ್ಲಿ ಸುಳ್ಯ ತಾಲೂಕಿನ ಕಲ್ಲಾಜೆಯೂ ಒಂದಾಗಿದೆ.

Advertisement
Advertisement
Advertisement
Advertisement

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಕೆಎಸ್‌ಡಿಎಂಎ) ಅಂಕಿಅಂಶಗಳ ಪ್ರಕಾರ, 2015 ಮತ್ತು 2021 ರ ನಡುವೆ ಕಳೆದ ಏಳು ವರ್ಷಗಳಲ್ಲಿ ಉಡುಪಿ ಜಿಲ್ಲೆಯ ವಿವಿಧ ಸ್ಥಳಗಳು ಕರ್ನಾಟಕದಲ್ಲಿ ಐದು ಬಾರಿ ಅತಿ ಹೆಚ್ಚು ಮಳೆ ಬಿದ್ದಿದೆ. 2015 ಮತ್ತು 2018 ಹೊರತುಪಡಿಸಿ, ಉಡುಪಿ ಜಿಲ್ಲೆ ಮಳೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದಕ್ಕೆ ಹಲವು ಕಾರಣ ಇದ್ದರೂ ಅರಣ್ಯ ನಾಶವೇ ಪ್ರಮುಖ ಕಾರಣವಾಗಿದೆ. ಅಂಕಿಅಂಶಗಳ ಪ್ರಕಾರ, ಉಡುಪಿ ಜಿಲ್ಲೆಯ ಬೈರಂಪಳ್ಳಿಯಲ್ಲಿ 2016 ರಲ್ಲಿ ಅತಿ ಹೆಚ್ಚು (5,916 ಮಿಮೀ) ಮಳೆ ದಾಖಲಾಗಿದೆ. ನಂತರದ ವರ್ಷದಲ್ಲಿ ಕಾರ್ಕಳ ತಾಲೂಕಿನ ಶಿರ್ಲಾಲುವಿನಲ್ಲಿ 6,936 ಮಿ.ಮೀ ಮಳೆ ದಾಖಲಾಗಿದೆ. 2016 ಮತ್ತು 2017 ರಲ್ಲಿ, ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಕ್ರಮವಾಗಿ 5,524 ಮಿಮೀ ಮತ್ತು 5,345 ಮಿಮೀ ಮಳೆ ದಾಖಲಾಗಿದೆ.ಅದೇ ರೀತಿ 2019ರಲ್ಲಿ ಉಡುಪಿಯ ಹೆಬ್ರಿ 9,340 ಮಿ.ಮೀ ಮಳೆಯೊಂದಿಗೆ ಅಗ್ರಸ್ಥಾನದಲ್ಲಿದ್ದರೆ, 2020ರಲ್ಲಿ ಇನ್ನಾಜೆ 7,988 ಮಿ.ಮೀ.  ಕಳೆದ ಕೆಲವು ಸಮಯಗಳಿಂದ  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಪ್ರದೇಶ ಮಳೆ ಹೆಚ್ಚಾಗಿದೆ. ಕಳೆದ ಏಳು ವರ್ಷಗಳಲ್ಲಿ ಆಗುಂಬೆಗಿಂತ ಹುಲಿಕಲ್ ನಲ್ಲಿ ಹೆಚ್ಚು ಮಳೆಯಾಗಿದೆ ಎಂಬುದು ದಾಖಲೆ ಹೇಳುತ್ತದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಹಲವು ಕಡೆ ಉತ್ತಮ ಮಳೆಯಾಗುತ್ತದೆ. ಅರಣ್ಯ ಪ್ರದೇಶ ಹೆಚ್ಚು ಇರುವ ಸುಳ್ಯ ತಾಲೂಕಿನ ಕಲ್ಲಾಜೆ, ಕೊಲ್ಲಮೊಗ್ರ, ಮಡಪ್ಪಾಡಿ, ಬಳ್ಪ, ಸುಬ್ರಹ್ಮಣ್ಯ ಸೇರಿದಂತೆ ಬೆಳ್ತಂಗಡಿ ತಾಲೂಕಿನ ವಿವಿದೆಡೆ ಹೆಚ್ಚು ಮಳೆಯಾಗುತ್ತದೆ.

ಈ ವ್ಯತ್ಯಾಸಕ್ಕೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಏಕ-ವೃಕ್ಷ ಕೃಷಿ ತೋಟಗಳು ಮತ್ತು ಅರಣ್ಯನಾಶವು ಹವಾಮಾನ ಬದಲಾವಣೆಗೆ ಪ್ರಮುಖ ಕಾರಣಗಳಾಗಿವೆ. ಕರ್ನಾಟಕದಲ್ಲಿ  ಶೇ.33 ಅರಣ್ಯ ಭೂಮಿ ಇರಬೇಕಿತ್ತು, ಆದರೆ ಸದ್ಯ ಶೇ.20 ರಷ್ಟು ಮಾತ್ರವೇ ಅರಣ್ಯ ಪ್ರದೇಶ ಇದೆ. ರಾಜ್ಯದಲ್ಲಿ ಪಶ್ಚಿಮ ಘಟ್ಟಗಳು ಕೇವಲ  ಶೇ.18 ಅರಣ್ಯವನ್ನು ಹೊಂದಿದೆ. ಕಳೆದ ಹತ್ತು ವರ್ಷಗಳಲ್ಲಿ ಶೇ.10 ಅರಣ್ಯವನ್ನು ಕಳೆದುಕೊಳ್ಳಲಾಗಿದೆ. ಹೀಗಾಗಿ ನೀರಿನ ಸಮಸ್ಯೆ ಮತ್ತು ಅಕಾಲಿಕ ಮಳೆಯಾಗುತ್ತಿದೆ ಎನ್ನುವುದು ತಜ್ಞರ ಅಭಿಮತ. ಹೀಗೇ ಮುಂದುವರಿದು ಮಳೆಯ ಸ್ವರೂಪವು ಸಂಪೂರ್ಣವಾಗಿ ಬದಲಾಗಲಿದೆ ಎನ್ನುವುದು  ತಜ್ಞರ ಅಭಿಮತ.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು ಅಧಿಕ
February 25, 2025
7:20 AM
by: ದ ರೂರಲ್ ಮಿರರ್.ಕಾಂ
ಸರ್ಕಾರಿ ಬಸ್ ನಿರ್ವಾಹಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿ
February 25, 2025
7:10 AM
by: The Rural Mirror ಸುದ್ದಿಜಾಲ
ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು
February 25, 2025
7:05 AM
by: The Rural Mirror ಸುದ್ದಿಜಾಲ
ಏರುತ್ತಿರುವ ತಾಪಮಾನ | 2030 ರ ವೇಳೆಗೆ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ | ಕೃಷಿ ಸಾಲ ಮರುಪಾವತಿ ಮೇಲೆ ಹೊಡೆತ..? |
February 24, 2025
10:54 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror