ಗ್ರಾಮೀಣ ಮತ್ತು ಕಡಿಮೆ ಆದಾಯದ ಕುಟುಂಬಗಳ ಮಹಿಳೆಯರಿಗೆ ಅಡುಗೆಮನೆಯ ಹೊಗೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಂದ ರಕ್ಷಣೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಉಜ್ವಲ ಯೋಜನೆ 2.0 (PMUY 2.0) ಅನ್ನು ಜಾರಿಗೆ ತಂದಿದೆ.
ಸಾಂಪ್ರದಾಯಿಕ ಕಟ್ಟಿಗೆ, ಕಲ್ಲಿದ್ದಲು ಹಾಗೂ ಸಗಣಿ ಒಲೆಗಳಿಂದ ಹೊರಬರುವ ಹೊಗೆಯಿಂದ ಕಣ್ಣು, ಉಸಿರಾಟ ಮತ್ತು ಶ್ವಾಸಕೋಶ ಸಂಬಂಧಿತ ಕಾಯಿಲೆಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಶುದ್ಧ LPG ಅಡುಗೆ ಅನಿಲವನ್ನು ಯಾವುದೇ ಆರಂಭಿಕ ವೆಚ್ಚವಿಲ್ಲದೆ ಒದಗಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.
ಉಜ್ವಲ ಯೋಜನೆ 2.0 ಎಂದರೇನು? : 2016ರಲ್ಲಿ ಆರಂಭಗೊಂಡ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಯಶಸ್ಸಿನ ಬಳಿಕ, ಅದರ ವಿಸ್ತೃತ ರೂಪವಾಗಿ 2021ರಲ್ಲಿ ಉಜ್ವಲ ಯೋಜನೆ 2.0 ಜಾರಿಗೊಂಡಿತು. ಬಡತನ ರೇಖೆಗಿಂತ ಕೆಳಗಿನ (BPL) ಹಾಗೂ ಇತರೆ ಅರ್ಹ ವರ್ಗದ ಕುಟುಂಬಗಳ ಮಹಿಳೆಯರಿಗೆ ಉಚಿತ LPG ಸಂಪರ್ಕ ನೀಡುವುದು ಇದರ ಉದ್ದೇಶವಾಗಿದೆ.
ಪ್ರಮುಖ ಆರ್ಥಿಕ ಪ್ರಯೋಜನಗಳು:
-
ಉಚಿತ LPG ಗ್ಯಾಸ್ ಸಂಪರ್ಕ – ಸಿಲಿಂಡರ್ ಮತ್ತು ರೆಗ್ಯುಲೇಟರ್‌ಗಾಗಿ ಭದ್ರತಾ ಠೇವಣಿ ಸರ್ಕಾರವೇ ಭರಿಸುತ್ತದೆ
-
ಉಚಿತ ಗ್ಯಾಸ್ ಸ್ಟೌವ್ ಮತ್ತು ಕಿಟ್ – ಸ್ಟೌವ್, ಸುರಕ್ಷತಾ ಪೈಪ್, ರೆಗ್ಯುಲೇಟರ್ ಸೇರಿ ₹2,000–₹3,000 ಮೌಲ್ಯದ ಕಿಟ್
-
ಮೊದಲ ಗ್ಯಾಸ್ ಸಿಲಿಂಡರ್ ರೀಫಿಲ್ ಉಚಿತ
-
ಸಿಲಿಂಡರ್ ಆಯ್ಕೆ – 14.2 ಕೆಜಿ ಅಥವಾ 5 ಕೆಜಿ ಸಿಲಿಂಡರ್
-
ಸಬ್ಸಿಡಿ ಸೌಲಭ್ಯ – ಪ್ರತಿ ಸಿಲಿಂಡರ್‌ಗೆ ₹300ರಂತೆ ವರ್ಷಕ್ಕೆ 12 ಸಿಲಿಂಡರ್‌ಗಳಿಗೆ DBT ಮೂಲಕ ಜಮಾ
ಯಾರು ಅರ್ಜಿ ಸಲ್ಲಿಸಬಹುದು?:
-
18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಮಹಿಳೆ
-
BPL ಅಥವಾ ಸರ್ಕಾರ ಸೂಚಿಸಿರುವ ಇತರೆ ಅರ್ಹ ವರ್ಗ
-
ಮನೆಯಲ್ಲೀಗಾಗಲೇ LPG ಸಂಪರ್ಕ ಇರಬಾರದು
-
ಪ್ರತಿ ಕುಟುಂಬಕ್ಕೆ ಒಂದು LPG ಸಂಪರ್ಕ ಮಾತ್ರ
ಅಗತ್ಯವಿರುವ ದಾಖಲೆಗಳು:
-
ಆಧಾರ್ ಕಾರ್ಡ್ (ಕಡ್ಡಾಯ)
-
ಪಡಿತರ ಚೀಟಿ
-
ಬ್ಯಾಂಕ್ ಪಾಸ್‌ಬುಕ್ (ಖಾತೆ ಸಂಖ್ಯೆ ಮತ್ತು IFSC)
-
ಪಾಸ್‌ಪೋರ್ಟ್ ಗಾತ್ರದ ಫೋಟೋ
-
ಮತದಾರರ ಗುರುತಿನ ಚೀಟಿ (ಲಭ್ಯವಿದ್ದರೆ)
ಅರ್ಜಿ ಸಲ್ಲಿಸುವ ವಿಧಾನ:
ಆನ್‌ಲೈನ್ ವಿಧಾನ
-
ಅಧಿಕೃತ ವೆಬ್‌ಸೈಟ್ pmuy.gov.in ಗೆ ಭೇಟಿ ನೀಡಿ
-
“ಹೊಸ ಉಜ್ವಲ 2.0 ಸಂಪರ್ಕ” ಆಯ್ಕೆಮಾಡಿ
-
ನಿಮ್ಮ ಗ್ಯಾಸ್ ಕಂಪನಿಯನ್ನು ಆಯ್ಕೆಮಾಡಿ – Indane, Bharat Gas ಅಥವಾ HP Gas
-
ಮೊಬೈಲ್ ಸಂಖ್ಯೆ ನೀಡಿ OTP ಮೂಲಕ ಪರಿಶೀಲನೆ ಮಾಡಿ
-
ಅರ್ಜಿ ಫಾರ್ಮ್ ಭರ್ತಿ ಮಾಡಿ ದಾಖಲೆಗಳನ್ನು ಅಪ್‌ಲೋಡ್ ಮಾಡಿ
ಆಫ್‌ಲೈನ್ ವಿಧಾನ
-
ಹತ್ತಿರದ LPG ಗ್ಯಾಸ್ ಏಜೆನ್ಸಿಗೆ ಭೇಟಿ
-
ಉಜ್ವಲ ಯೋಜನೆ ಅರ್ಜಿ ಫಾರ್ಮ್ ಪಡೆದು ಭರ್ತಿ
-
ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ ಸಲ್ಲಿಕೆ
ಯೋಜನೆಯ ಮಹತ್ವ : ಉಜ್ವಲ ಯೋಜನೆ 2.0 ಕೇವಲ ಸಬ್ಸಿಡಿ ಯೋಜನೆಯಲ್ಲ; ಇದು ಮಹಿಳೆಯರ ಆರೋಗ್ಯ, ಗೌರವ ಮತ್ತು ಜೀವನಮಟ್ಟವನ್ನು ಸುಧಾರಿಸುವ ರಾಷ್ಟ್ರೀಯ ಉಪಕ್ರಮವಾಗಿದೆ. ಹೊಗೆಮುಕ್ತ ಅಡುಗೆಮನೆಯ ಮೂಲಕ ಆರೋಗ್ಯಕರ ಭಾರತ ನಿರ್ಮಿಸುವತ್ತ ಇದು ದೊಡ್ಡ ಹೆಜ್ಜೆಯಾಗಿದೆ.



