ರಷ್ಯಾದ ಪಡೆಗಳಿಂದ ಇತ್ತೀಚೆಗೆ ಆಕ್ರಮಿಸಿಕೊಂಡ ಕೀವ್ ಪ್ರದೇಶದಲ್ಲಿ ಒಟ್ಟು 410 ನಾಗರಿಕರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉಕ್ರೇನ್‌ನ ಪ್ರಾಸಿಕ್ಯೂಟರ್ ಜನರಲ್ ಐರಿನಾ ವೆನೆಡಿಕ್ಟೋವಾ ಹೇಳಿದ್ದಾರೆ.
ರಷ್ಯಾ ಸೇನೆಯಿಂದ ಇತ್ತೀಚೆಗೆ ವಶಪಡಿಸಿಕೊಂಡ ಕೀವ್ ಪ್ರದೇಶದಲ್ಲಿ ಉಕ್ರೇನ್ ನ 410 ನಾಗರಿಕ ದೇಹಗಳು ದೊರೆತಿವೆ ಎಂದು ಅಲ್ಲಿನ ಪ್ರಾಸಿಕ್ಯೂಟರ್ ಜನರಲ್ ಐರಿನಾ ವೆನೆಡಿಕ್ಟೋವಾ ಭಾನುವಾರ ಹೇಳಿದ್ದಾರೆ.ಉಕ್ರೇನ್ ರಾಜಧಾನಿಯಾದ ಕೀವ್ ನಿಂದ ವಾಯುವ್ಯಕ್ಕೆ 30 ಕಿಲೋಮೀಟರ್ (19 ಮೈಲುಗಳು) ದೂರದ ಬುಚಾ ಪಟ್ಟಣದಲ್ಲಿ ನೂರಾರು ಸಂಖ್ಯೆಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ಇದು ರಷ್ಯಾ “ಉದ್ದೇಶಪೂರ್ವಕವಾಗಿ ಮಾಡಿರುವ ಹತ್ಯಾಕಾಂಡ” ಎಂದು ಉಕ್ರೇನ್ ಆರೋಪಿಸಿದೆ.
In a video address, Ukranian President Volodymyr Zelenskyy denounced the allegedly targeted killings of civilians in towns the Russians occupied. He warned that more atrocities may be revealed if Russian forces are driven from other occupied areas. https://t.co/pRHWdnhnhU
— The Associated Press (@AP) April 3, 2022
Advertisement
ಕೀವ್ ಬಳಿಯ ಬುಚಾ ಪಟ್ಟಣದಲ್ಲಿ ನಾಗರಿಕರ ಹತ್ಯೆಯ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಭಾನುವಾರ ಒತ್ತಾಯಿಸಿದ್ದಾರೆ. ‘ಉಕ್ರೇನ್‌ನ ಬುಚಾದಲ್ಲಿ ಕೊಲ್ಲಲ್ಪಟ್ಟ ನಾಗರಿಕರ ಚಿತ್ರಗಳಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಈ ಬಗ್ಗೆ ಸ್ವತಂತ್ರ ತನಿಖೆ ಅತ್ಯಗತ್ಯ’ ಎಂದು ಅವರು ಟ್ವೀಟ್ ಮಾಡಿದ್ದಾರೆ.