ವಿದ್ಯುತ್ ಅಭಾವದಿಂದ ರಾಜ್ಯದಲ್ಲಿ ಅನಧಿಕೃತ ಲೋಡ್‌ಶೆಡ್ಡಿಂಗ್ | ಗ್ರಾಮೀಣ, ನಗರ ಪ್ರದೇಶಗಳಲ್ಲಿ ವಿದ್ಯುತ್‌ ಕಣ್ಣಾಮುಚ್ಚಾಲೆ

October 11, 2023
8:46 PM
ಲೋಡ್‌ಶೆಡ್ಡಿಂಗ್ ವಿರುದ್ಧ ರಾಜ್ಯದ ರೈತರು ಸಿಡಿಯುತ್ತಿದ್ದಾರೆ. ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಹಾಸನ, ಚಾಮರಾಜನಗರ, ಬೆಳಗಾವಿಯ ಚಿಕ್ಕೋಡಿ ಸೇರಿ ಹಲವೆಡೆ ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ. ನಮಗೆ ಉಚಿತ ವಿದ್ಯುತ್‌ ಬೇಡ. ಬೆಳೆ ಉಳಿಸಿಕೊಳ್ಳಲು ವಿದ್ಯುತ್‌ ನೀಡಿ ಎಂದು ಆಗ್ರಹಿಸಿದ್ದಾರೆ.

ಯಾವಾಗಲೂ, ಹೆಚ್ಚಿನ ಸಂದರ್ಭದಲ್ಲಿ ವಿದ್ಯುತ್‌ಗೆ ರೈತ #Farmer ಹಾಗೂ ಗ್ರಾಮೀಣ #Rural ಭಾಗ ಕೊನೆಯ ಅವಕಾಶ. ಅದರಲ್ಲೂ ವಿದ್ಯುತ್‌ ಅಭಾವ ಆದಾಗ ಗ್ರಾಮೀಣ ಭಾಗಕ್ಕೆ ಪವರ್‌ ಕಟ್‌ ನಲ್ಲೂ ಮೊದಲ ಆದ್ಯತೆ. ರಾಜ್ಯದಲ್ಲಿ ವಿದ್ಯುತ್ ಅಭಾವ ತೀವ್ರಗೊಂಡಿದ್ದು, ಹೀಗಾಗಿ ಸದ್ದಿಲ್ಲದೇ ಅನಧಿಕೃತ ಲೋಡ್‌ಶೆಡ್ಡಿಂಗ್  ಜಾರಿ ಮಾಡಿದೆ. ವಿದ್ಯುತ್ ಅಭಾವದ ನಡುವೆಯೂ ಎಲ್ಲಾ ಎಸ್ಕಾಂಗಳು ಕೈಗಾರಿಕಾ ವಲಯಕ್ಕೆ ಆದ್ಯತೆ ನೀಡಿದ್ದು ಕೃಷಿಕರನ್ನು ಸಂಪೂರ್ಣ ಕಡೆಗಣಿಸಿದೆ. ಗ್ರಾಮೀಣ ಭಾಗ ಮಾತ್ರವಲ್ಲದೇ ನಗರ ಪ್ರದೇಶಗಳಲ್ಲಿಯೂ ಲೋಡ್‌ಶೆಡ್ಡಿಂಗ್ ಆರಂಭವಾಗಿದೆ.

Advertisement

ಲೋಡ್‌ಶೆಡ್ಡಿಂಗ್ ವಿರುದ್ಧ ರಾಜ್ಯದ ರೈತರು ಸಿಡಿಯುತ್ತಿದ್ದಾರೆ. ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಹಾಸನ, ಚಾಮರಾಜನಗರ, ಬೆಳಗಾವಿಯ ಚಿಕ್ಕೋಡಿ ಸೇರಿ ಹಲವೆಡೆ ರೈತರು ಬೀದಿಗಿಳಿದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ನಮಗೆ ಉಚಿತ ವಿದ್ಯುತ್‌ ಬೇಡ. ಬೆಳೆ ಉಳಿಸಿಕೊಳ್ಳಲು ವಿದ್ಯುತ್‌ ನೀಡಿ ಎಂದು ಆಗ್ರಹಿಸಿದ್ದಾರೆ. ಇದಕ್ಕೆ ವಿಪಕ್ಷ ಬಿಜೆಪಿಯೂ ಸಾಥ್ ನೀಡಿದೆ. ಚಿಕ್ಕಬಳ್ಳಾಪುರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ. ಬಿಜೆಪಿ ನಾಯಕರು ಎತ್ತಿನಗಾಡಿಯಲ್ಲಿ ಸಂಚರಿಸಿ ಸರ್ಕಾರದ ವಿರುದ್ಧ ಕಿಡಿಕಾರಿದರು. ತೀವ್ರ ವಿದ್ಯುತ್ ಸಮಸ್ಯೆ ಇರುವುದನ್ನು ಇಂಧನ ಇಲಾಖೆಒಪ್ಪಿಕೊಂಡಿದ್ದು, ವಿಪಕ್ಷಗಳ ಟೀಕೆ ಬೆನ್ನಲ್ಲೇ ಅಂಕಿ ಅಂಶ ಬಹಿರಂಗಮಾಡಿದೆ.

ಇಂಧನ ಇಲಾಖೆ ಹೇಳಿದ್ದೇನು?: ಮುಂಗಾರು ಕೊರತೆಯಿಂದ ತೀವ್ರ ವಿದ್ಯುತ್ ಸಮಸ್ಯೆಯಾಗಿದ್ದು ಪವನ ವಿದ್ಯುತ್, ಸೋಲಾರ್, ಜಲ ವಿದ್ಯುತ್, ಉಷ್ಣಸ್ಥಾವರಗಳಲ್ಲಿ ಉತ್ಪಾದನೆ ಕುಂಠಿತವಾಗಿದೆ. ಪ್ರಸ್ತುತ ನಿತ್ಯ 15 ಸಾವಿರ ಮೆಗಾವ್ಯಾಟ್ ವಿದ್ಯುತ್‌ಗೆ ಬೇಡಿಕೆ ಇದ್ದು ಕಳೆದ ವರ್ಷ ಇದೇ ಅವಧಿಯಲ್ಲಿ 9,032 ಮೆಗಾವ್ಯಾಟ್‌ಗೆ ಬೇಡಿಕೆ ಇತ್ತು. ರಾಜ್ಯದಲ್ಲಿ ನಿತ್ಯ 10 ಸಾವಿರ ಮೆಗಾವ್ಯಾಟ್ ಉತ್ಪಾದನೆಯಾಗುತ್ತಿದ್ದು ಕೇಂದ್ರ ಮತ್ತು ಹೊರ ರಾಜ್ಯಗಳಿಂದ 3 ಸಾವಿರ ಮೆಗಾವ್ಯಾಟ್ ಪೂರೈಕೆ ಆಗುತ್ತಿದೆ. ನಿತ್ಯ 2 ಸಾವಿರ ಮೆಗಾವ್ಯಾಟ್‌ನಷ್ಟು ವಿದ್ಯುತ್ ಕೊರತೆಯಿದೆ. ಅಲ್ಪಾವದಿಯ ಟೆಂಡರ್ ಮೂಲಕ ವಿದ್ಯುತ್ ಖರೀದಿಗೆ ಪ್ರಯತ್ನ ನಡೆಯುತ್ತಿದ್ದು, ಪ್ರತಿ ಜಿಲ್ಲೆಗೂ ನೋಡಲ್ ಅಧಿಕಾರಿ ಮೂಲಕ ವಿದ್ಯುತ್ ಹಂಚಿಕೆಗೆ ಚಿಂತನೆ ನಡೆದಿದೆ.

(ಅಂತರ್ಜಾಲ ಮಾಹಿತಿ)

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕದನ ವಿರಾಮ ಘೋಷಣೆ | ಭಾರತ ಮತ್ತು ಪಾಕಿಸ್ತಾನ ಗಡಿಯಾಚೆಗಿನ ದಾಳಿಯನ್ನು ಕೊನೆಗೊಳಿಸಲು ಒಪ್ಪಿಕೊಂಡಿವೆ
May 10, 2025
7:42 PM
by: The Rural Mirror ಸುದ್ದಿಜಾಲ
ಕೃಷಿಕರ ಸಂಸ್ಥೆ ಕ್ಯಾಂಪ್ಕೊ ವತಿಯಿಂದ ರಾಷ್ಟ್ರೀಯ ರಕ್ಷಣಾ ನಿಧಿಗೆ 5 ಕೋಟಿ ರೂಪಾಯಿ ದೇಣಿಗೆ
May 10, 2025
7:05 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 09-05-2025 | ಮೇ14 ರಿಂದ ಉತ್ತಮ ಮಳೆಯ ನಿರೀಕ್ಷೆ ಇದೆ
May 10, 2025
12:20 PM
by: ಸಾಯಿಶೇಖರ್ ಕರಿಕಳ
ಜೂನ್‌ನಿಂದ ಈ 6 ರಾಶಿಯವರ ಅದೃಷ್ಟ ಖುಲಾಯಿಸಲಿದೆ… ಕೋಟ್ಯಾಧಿಪತಿಗಳಾಗುವ ಯೋಗ!
May 10, 2025
8:07 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group