ನಿರುದ್ಯೋಗ….. ಯುವ ಜನಾಂಗಕ್ಕೆ ಶಾಕ್…! | ದೇಶದಲ್ಲಿ ಇನ್ನೂ ಮೂರು ಪಟ್ಟು ಹೆಚ್ಚಾಗಲಿದೆ ನಿರುದ್ಯೋಗ | ರಾಜ್ಯಕ್ಕೆ ಕೊಂಚ ನಿರಾಳ | ಗ್ರಾಮೀಣ ಭಾಗದಲ್ಲಿ ಇಳಿಕೆಯಾದ ನಿರುದ್ಯೋಗ |

February 24, 2023
7:03 PM

ಜಾಗತಿಕವಾಗಿ ಭಾರತ ಎಷ್ಟೇ ಮುಂದುವರೆದರು ದೇಶದಲ್ಲಿ ನಿರುದ್ಯೋಗ ಸಮಸ್ಯೆ ಮಾತ್ರ  ಬೆಳೆಯುತ್ತಿದೆ. ವಿದ್ಯಾಭ್ಯಾಸ ಮುಗಿಸಿ ಇದೀಗ ಉದ್ಯೋಗ ಹುಡುಕಲು ಪ್ರಾರಂಭಿಸಿರುವವರನ್ನು ಬಿಡಿ, ಈಗಾಗಲೇ ಉದ್ಯೋಗದಲ್ಲಿ ನೆಲ ಕಂಡುಕೊಂಡವರೂ, ಸಹ ಇತ್ತೀಚಿನ ದಿನಗಳಲ್ಲಿ ಉದ್ಯೋಗದಲ್ಲಿ ಉಳಿದುಕೊಳ್ಳಲು ಕಸರತ್ತು ನಡೆಸುವ ಪರಿಸ್ಥಿತಿ ಎದುರಾಗಿದೆ.  ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಿರುದ್ಯೋಗ ಸಮಸ್ಯೆ ಹಿಂದಿಗಿಂತಲೂ ಭೀಕರವಾಗಿ ಕಾಡುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಕೋವಿಡ್‌ನ ಹೊರತಾಗಿಯೂ ನಿರುದ್ಯೋಗ ಸಮಸ್ಯೆ ಹತೋಟಿಗೆ ಬರುತ್ತಿಲ್ಲ.ಆದರೆ ವಿಶೇಷ ಎಂದರೆ ಗ್ರಾಮೀಣ ಭಾಗದಲ್ಲಿ  ನಿರುದ್ಯೋಗ ಸಮಸ್ಯೆ ಕೊಂಚ ಇಳಿಮುಖವಾಗಿದೆ.

Advertisement
Advertisement
Advertisement
Advertisement

ಈಚೆಗಷ್ಟೇ ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ ಸಂಸ್ಥೆಯು ದೇಶದಲ್ಲಿರುವ ನಿರುದ್ಯೋಗ ಸಮಸ್ಯೆಯ ಕುರಿತು ವಿಸ್ತಾರವಾದ ವರದಿ ಬಿಡುಗಡೆ ಮಾಡಿದೆ. ವರದಿಯ ಅಂಕಿ- ಅಂಶಗಳು ಕಳವಳ ಮೂಡಿಸುತ್ತದೆ. ದೇಶದಲ್ಲಿ 2022ರ ಡಿಸೆಂಬರ್‌ ತಿಂಗಳಲ್ಲಿ ನಿರುದ್ಯೋಗ ಪ್ರಮಾಣವು ಶೇಕಡ 8.30ಕ್ಕೆ ಏರಿಕೆ ಆಗಿದ್ದು ವರದಿ ಆಗಿತ್ತು. ಈ ಪ್ರಮಾಣದ ನಿರುದ್ಯೋಗವು 16 ತಿಂಗಳಲ್ಲಿಯೇ ಗರಿಷ್ಠ ಎನ್ನುವ ಆಘಾತಕಾರಿ ಅಂಶವೂ ವರದಿ ಆಗಿತ್ತು.

Advertisement

ನಗರ ಪ್ರದೇಶದಲ್ಲಿ ಇದರ ಪ್ರಮಾಣವು ಕಳೆದ ನವೆಂಬರ್‌ ತಿಂಗಳಲ್ಲಿ ಶೇಕಡವಾರು 8.96 ರಷ್ಟು ಇದ್ದರೆ, ಡಿಸೆಂಬರ್‌ನಲ್ಲಿ ಶೇಕಡವಾರು 10.09ಕ್ಕೆ ಏರಿಕೆಯಾಗಿತ್ತು. ಆದರೆ, ಗ್ರಾಮೀಣ ಪ್ರದೇಶದ ನಿರುದ್ಯೋಗ ಪ್ರಮಾಣವು ಇದೇ ಅವಧಿಯಲ್ಲಿ ಶೇ 7.55ರಿಂದ ಶೇ 7.44ಕ್ಕೆ ಇಳಿಕೆಯಾಗಿತ್ತು.

ಸಮಾಧಾನಕರ ಸಂಗತಿ ಅಂದರೆ, ಕರ್ನಾಟಕದಲ್ಲಿ ನಿರುದ್ಯೋಗ ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಲ್ಲಿದೆ. ಅತ್ಯಂತ ಕಡಿಮೆ ನಿರುದ್ಯೋಗ ಸಮಸ್ಯೆ ಇರುವ ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದೆ. ಕರ್ನಾಟಕದಲ್ಲಿ ನಿರುದ್ಯೋಗ ಪ್ರಮಾಣವು ಶೇ 2.5ರಷ್ಟಿದೆ.

Advertisement

ಆರ್ಥಿಕ ಪ್ರಗತಿ ಆಗುತ್ತಿದ್ದರೂ, ದೇಶದಲ್ಲಿ ಅದೇ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ನಿರುದ್ಯೋಗಿಗಳ ಗುಂಪಿಗೆ ಲಕ್ಷಾಂತರ ಯುವಜನರು ಪ್ರತಿವರ್ಷ ಸೇರ್ಪಡೆ ಆಗುತ್ತಲೇ ಇದ್ದಾರೆ. ಭಾರತದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಲು ಪ್ರಮುಖವಾಗಿ ಎರಡು ಕಾರಣಗಳನ್ನು ಗುರುತಿಸಲಾಗುತ್ತಿದೆ. ಇದರಲ್ಲಿ 2016ರಲ್ಲಿ ಸೃಷ್ಟಿಯಾದ ನೋಟು ರದ್ದತಿ  ಹಾಗೂ 2020ರ ಬಳಿಕ ಕೋವಿಡ್‌ ಸಾಂಕ್ರಾಮಿಕ ಪರಿಸ್ಥಿತಿಯೂ ಸೇರಿದೆ.

ನೋಟು ರದ್ದತಿ ಹಾಗೂ ಜಿಎಸ್‌ಟಿಯ ಪರಿಚಯಿಸಿದ ನಂತರದಲ್ಲಿ ಸಣ್ಣ ಉದ್ದಿಮೆಗಳು ನಿರೀಕ್ಷಿತ ಪ್ರಮಾಣದಲ್ಲಿ ಚೇತರಿಕೆ ಕಂಡಿಲ್ಲ. ಇದೆಲ್ಲದರ ನಡುವೆ ಚಿಲ್ಲರೆ ಹಣದುಬ್ಬರವೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದ ನಂತರದಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಕೋವಿಡ್‌ ನಂತರದಲ್ಲಿ ಆರ್ಥಿಕ ವ್ಯವಸ್ಥೆ ಸುಧಾರಿಸಿದರೂ, ಉದ್ಯೋಗ ಸೃಷ್ಟಿ ಆಗುತ್ತಿಲ್ಲ ಎನ್ನುವುದು  ವರದಿಯ ಅಂಶ.

Advertisement

ಮುಂದಿನ ದಿನಗಳಲ್ಲಿ ನಿರುದ್ಯೋಗ ಪ್ರಮಾಣವು 4 ಪ್ರತಿಶತದಿಂದ 8 ಪ್ರತಿಶತಕ್ಕೆ ನಾಲ್ಕು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ ಎಚ್ಚರಿಕೆ ನೀಡಿದೆ. ಅಂದಾಜಿನ ಪ್ರಕಾರ, ಮುಂದಿನ ನಾಲ್ಕು ವರ್ಷಗಳಲ್ಲಿ, 10 ಮಿಲಿಯನ್ಗೂ ಹೆಚ್ಚು ಜನ  ನಿರುದ್ಯೋಗಿಗಳಾಗಲಿದ್ದಾರೆ.

ಇದು ಭಾರತದ ನಗರ ಪ್ರದೇಶದಲ್ಲಿ 10.09%  ಇದ್ದು, ಗ್ರಾಮೀಣ ಭಾರತದಲ್ಲಿ 7.44% ಇದೆ ಎಂದು ವರದಿ ಮಾಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ದೈತ್ಯ ಸಾಫ್ಟವೇರ್‌ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿದೆ. ಭಾರತದಲ್ಲಿ ನಿರುದ್ಯೋಗ ಸಮಸ್ಯೆ ತಪ್ಪಿಸಲು ಈ ಹಿಂದೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಚರ್ಚೆ ನಡೆಯುವುದರ ಜೊತೆಗೆ ಇದಕ್ಕೆ ಶೀಘ್ರ ಪರಿಹಾರವನ್ನೂ ಕಂಡುಕೊಳ್ಳಬೇಕಿದೆ.

Advertisement

ವಿಶ್ವದಲ್ಲಿ ನಿರುದ್ಯೋಗ ದರ ಬೇರೆ ಬೇರೆಯಾಗಿರುತ್ತದೆ. ಒಬ್ಬ ವ್ಯಕ್ತಿಯು ಉದ್ಯೋಗದಲ್ಲಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಬಳಸುವ ಮಾನದಂಡಗಳು ರಾಷ್ಟ್ರದಿಂದ ರಾಷ್ಟ್ರಕ್ಕೆ ಭಿನ್ನವಾಗಿರುತ್ತವೆ. ಒಬ್ಬ ವ್ಯಕ್ತಿಯು ವಾರಕ್ಕೆ 15 ಗಂಟೆಗಳಿಗಿಂತ ಕಡಿಮೆ ಕೆಲಸ ಮಾಡುತ್ತಿದ್ದರೆ ಅವರನ್ನು ಸಾಮಾನ್ಯವಾಗಿ ಅನೇಕ  ರಾಷ್ಟ್ರಗಳಲ್ಲಿ “ನಿರುದ್ಯೋಗಿ” ಎಂದು ಪರಿಗಣಿಸಲಾಗುತ್ತದೆ. 64 ರಾಷ್ಟ್ರಗಳ  ಹೋಲಿಕೆಯಲ್ಲಿ  ಯುಕೆಯಲ್ಲಿ ನಿರುದ್ಯೋಗ ದರವು 28 ನೇ ಸ್ಥಾನದಲ್ಲಿದೆ. ಕತಾರ್, ಕಾಂಬೋಡಿಯಾ ಮತ್ತು ಕೋಕೋಸ್ ದ್ವೀಪಗಳಲ್ಲಿ ನಿರುದ್ಯೋಗ ದರಗಳು ಆಶ್ಚರ್ಯಕರವಾಗಿ ಕಡಿಮೆಯಾಗಿದೆ 1% ಕ್ಕಿಂತ ಕಡಿಮೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |
February 23, 2025
11:41 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror