ಕೇಂದ್ರ ಬಜೆಟ್‌ 2026-27 | ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಆದ್ಯತೆ

February 1, 2026
2:36 PM
ಕೇಂದ್ರ ಬಜೆಟ್‌ 2026-27 ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಕರಾವಳಿ ಬೆಳವಣಿಗೆಗೆ ವಿಶೇಷ ಒತ್ತು ನೀಡುವ ದೂರದೃಷ್ಟಿಯ ಬಜೆಟ್ ಆಗಿದೆ. ತೆಂಗು, ಕೋಕೋ, ಮೀನುಗಾರಿಕೆ ಹಾಗೂ ಸಣ್ಣ ಕೈಗಾರಿಕೆಗಳಿಗೆ ಬೆಂಬಲ ನೀಡಿ ಉದ್ಯೋಗ ಸೃಷ್ಟಿಗೆ ಪೂರಕವಾಗಿದೆ. ಆದರೆ ಅಡಿಕೆ ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚು ಇದ್ದರೂ ಬೀಡಿ ಅಗ್ಗವಾಗಿದೆ.

ಈ ಬಜೆಟ್‌ ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವ ಜೊತೆಗೆ ಎಲ್ಲಾ ಕ್ಷೇತ್ರಗಳಲ್ಲಿ ಉತ್ಪಾದನೆ ಹೆಚ್ಚಿಸುವ ಉದ್ದೇಶವನ್ನು ಹೊಂದಿರುವಂತೆ ಕಾಣುತ್ತದೆ. ಉದ್ಯೋಗ ಸೃಷ್ಟಿ, ರಫ್ತು ಹೆಚ್ಚಳ ಮತ್ತು ಆಮದಿನ ಮೇಲಿನ ಅವಲಂಬನೆ ಕಡಿಮೆ ಮಾಡುವ ದೃಷ್ಟಿಯಿಂದ ಸರ್ಕಾರವು ಸೂಕ್ತ ಹಾಗೂ ಪೂರಕ ಯೋಜನೆಗಳನ್ನು ರೂಪಿಸಿರುವುದು ಗಮನಾರ್ಹವಾಗಿದೆ.

ಕೃಷಿಕರ ದೃಷ್ಟಿಯಿಂದ ಪ್ರಮುಖ ಅಂಶಗಳು : ಕೃಷಿ ಕ್ಷೇತ್ರದ ಭವಿಷ್ಯ ಬೆಳವಣಿಗೆಗೆ ಈ ಬಜೆಟ್‌ನಲ್ಲಿ ಹಲವು ಉತ್ತೇಜನಕಾರಿ ಕ್ರಮಗಳನ್ನು ಘೋಷಿಸಲಾಗಿದೆ.

  1. ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿಗೆ ಅವಕಾಶ ನೀಡಿರುವುದು ರೈತರಿಗೆ ಹೊಸ ಮಾರ್ಗದರ್ಶನ ನೀಡಲಿದೆ.

  2. ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ಬೆಂಬಲ ಕೃಷಿಯನ್ನು ಇನ್ನಷ್ಟು ಪರಿಣಾಮಕಾರಿ ಮತ್ತು ಉತ್ಪಾದಕವಾಗಿಸಲು ಸಹಕಾರಿಯಾಗಿದೆ.

  3. ತೆಂಗು, ಕೋಕೋ ಹಾಗೂ ಶ್ರೀಗಂಧದಂತಹ ಬೆಳೆಗಳ ವಿಸ್ತರಣೆಗೆ ಪ್ರೋತ್ಸಾಹ ನೀಡಿರುವುದು ಭವಿಷ್ಯದ ಕೃಷಿಗೆ ಬಹಳ ಅಗತ್ಯವಾಗಿದ್ದು, ಇದರ ಮೂಲಕ ಆಮದಿನ ಅವಲಂಬನೆ ಕಡಿಮೆ ಮಾಡಲು ಸಾಧ್ಯ.

  4. ಕರಾವಳಿ ಅಭಿವೃದ್ಧಿಯ ದೃಷ್ಟಿಯಿಂದ ತೆಂಗು ಹಾಗೂ ಕೋಕೋ ಬೆಳೆಗಳಿಗೆ ನೀಡಿದ ಉತ್ತೇಜನ ಅಭಿನಂದನೀಯವಾಗಿದೆ.

  5. ಮೀನುಗಾರಿಕೆ ಕ್ಷೇತ್ರಕ್ಕೆ ಒದಗಿಸಲಾದ ಸಹಾಯ ಕರಾವಳಿ ಪ್ರದೇಶದ ಆರ್ಥಿಕ ಬೆಳವಣಿಗೆಗೆ ಅತ್ಯಂತ ಮುಖ್ಯವಾಗಿದೆ.

  6. ನಮ್ಮಲ್ಲಿರುವ ಸಿದ್ಧ ಉಡುಪಿನ ಘಟಕಗಳಿಗೆ (Ready-made garment industry) ಪ್ರಯೋಜನ ದೊರಕುವ ಸಾಧ್ಯತೆ ಇದೆ.

  7. ಕ್ಷೀಣಿಸುತ್ತಿರುವ ಗೋಡಂಬಿ ಕೃಷಿಗೆ ಪ್ರೋತ್ಸಾಹ ನೀಡಿರುವುದು ರೈತರಿಗೆ ಭವಿಷ್ಯದ ದೃಷ್ಟಿಯಿಂದ ಹೊಸ ಭರವಸೆ ಮೂಡಿಸುತ್ತದೆ.

ಇದಲ್ಲದೆ, ಅಡಿಕೆ ಉತ್ಪನ್ನಗಳ ಮೇಲಿನ ತೆರಿಗೆ ಈಗಾಗಲೇ ಹೆಚ್ಚು ಇರುವುದರಿಂದ ಉತ್ಪಾದಕರ ಮೇಲೆ ಹೆಚ್ಚುವರಿ ಒತ್ತಡ ಬೀಳುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಬೀಡಿ ತಂಬಾಕು ಉತ್ಪನ್ನಗಳು ಇನ್ನೂ ಅಗ್ಗವಾಗಿರುವುದು,  ವಿಶೇಷವಾಗಿ ಗಮನಸೆಳೆಯುತ್ತದೆ, ಸಿಗರೇಟು ದರ ಏರಿಕೆಯ ಸಾಧ್ಯತೆ ಇದೆ.  ಅಡಿಕೆಯ ಉತ್ಪನ್ನಗಳಾದ ಗುಟ್ಕಾ, ಪಾನ್ ಮಸಾಲ ಇವುಗಳಿಗೆ ಈಗಾಗಲೇ ತೆರಿಗೆ ಹೆಚ್ಚಳ ಮಾಡಲಾಗಿದೆ. ಸಿಗರೇಟ್ ಬೆಲೆ ಹೆಚ್ಚಳವಾಗಲಿದೆ. ಆದರೆ ಬೀಡಿ ಬೆಲೆ ಕಡಿಮೆ ಆಗಲಿದೆ. ಪರಿಣಾಮವಾಗಿ ಬೀಡಿ ಸೇದುವವರಿಗೆ ಪ್ರೋತ್ಸಾಹ ಕೊಟ್ಟು ಗುಟ್ಕಾ ತಿನ್ನುವುದರ ಮೇಲೆ ಹತೋಟಿ ಸಾಧಿಸುವ ಉದ್ದೇಶವಿರಬಹುದು. ಇದರಿಂದಾಗಿ ತಂಬಾಕು ಸೇವನೆಯ ಪ್ರಮಾಣ ನಿಷೇದ ಆಗದೆ ಪರೋಕ್ಷವಾಗಿ ಅಡಿಕೆ ಬಳಕೆಗೆ ಉತ್ತೇಜನ ದೊರಕಿದಂತೆ ಕಾಣುತ್ತದೆ.  ಆರೋಗ್ಯ ಮತ್ತು ಕೃಷಿ ನೀತಿಗಳ ನಡುವೆ ಸಮತೋಲನ ಸಾಧಿಸುವ ದೃಷ್ಟಿಯಿಂದ, ಈ ಕ್ಷೇತ್ರದಲ್ಲೂ ಸಮಾನ ಹಾಗೂ ನ್ಯಾಯಸಮ್ಮತ ತೆರಿಗೆ ನೀತಿ ರೂಪಿಸುವ ಅಗತ್ಯವಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಗ್ರೇಡ್ 2 ಮತ್ತು ಗ್ರೇಡ್ 3 ನಗರಗಳ ಅಭಿವೃದ್ಧಿಗೆ ಸರ್ಕಾರವು ವಿಶೇಷ ಪ್ರಾಧಾನ್ಯತೆ ನೀಡಿರುವುದರಿಂದ ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ದೊರಕಲಿದೆ. ಪ್ರವಾಸೋದ್ಯಮದ ಬೆಳವಣಿಗೆಗೆ ನೀಡಿದ ಬೆಂಬಲ ಮತ್ತು ಪಶುಸಂಗೋಪನೆಗೆ ನೀಡುವ ಕೊಡುಗೆ ಕೂಡಾ ಉದ್ಯೋಗ ಸೃಷ್ಟಿ ಮತ್ತು ಆದಾಯ ವೃದ್ಧಿಗೆ ಪೂರಕವಾಗಿದೆ.

ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ ಸುಮಾರು 3 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿರುವುದು ಅತ್ಯಂತ ಮೆಚ್ಚುಗೆಯ ಅಂಶವಾಗಿದೆ. ಈ ಹೂಡಿಕೆಗಳು ಕೃಷಿ ಕ್ಷೇತ್ರದ ಬೆಳವಣಿಗೆ, ಅಭಿವೃದ್ಧಿ ಮತ್ತು ಪ್ರಗತಿಗೆ ಪೂರಕ ವಾತಾವರಣವನ್ನು ನಿರ್ಮಾಣ ಮಾಡಲಿದೆ.

ಒಟ್ಟಾರೆಯಾಗಿ ಈ ಬಜೆಟ್‌ ಒಂದು ದೂರದೃಷ್ಟಿಯನ್ನು ಇಟ್ಟುಕೊಂಡು ರೂಪಿಸಲಾದ ಬಜೆಟ್ ಆಗಿದ್ದು, ಭವಿಷ್ಯ ಭಾರತದ ಅಭಿವೃದ್ಧಿಗೆ ಸೂಕ್ತ ಹಾಗೂ ಸಕಾರಾತ್ಮಕ ಬಜೆಟ್ ಎಂದು ಹೇಳಬಹುದು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

ಡಾ|ವಿಘ್ನಶ್ವರ ಭಟ್ ವರ್ಮುಡಿ ಅವರು ಕೃಷಿಕರು. ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದವರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯದ ಪೆರ್ಲದ ನಲಂದಾ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಅರ್ಥಶಾಸ್ತ್ರಜ್ಞರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸಂಶೋಧನಾ ಬರಹಗಳು ಪ್ರಕಟವಾಗಿದೆ. ಅಡಿಕೆ ಮಾರುಕಟ್ಟೆ ಬಗ್ಗೆ ಅಧಿಕೃತವಾಗಿ ಮಾತನಾಡುವ ವ್ಯಕ್ತಿಯಾಗಿದ್ದಾರೆ. ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಅಡಿಕೆಯ ಬಗ್ಗೆ ವಿವಿಧ ಬರಹಗಳನ್ನು ಪ್ರಕಟಿಸಿದ್ದಾರೆ.

ಇದನ್ನೂ ಓದಿ

ಪುತ್ತೂರು ಸುಳ್ಯ ತಾಲೂಕಿನ ಹಲವೆಡೆ ಗುಡುಗು ಸಹಿತ ಮಳೆ
February 25, 2026
5:38 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 25-02-2026 | ಕರಾವಳಿ ಮತ್ತು ಮಲೆನಾಡಿನಲ್ಲಿ ತುಂತುರು ಮಳೆ ಸಾಧ್ಯತೆ | ಫೆ.27 ರಿಂದ ಬಿಸಿಲು ಹೆಚ್ಚಳದ ಸೂಚನೆ
February 25, 2026
2:08 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 24-02-2026 | ತುಂತುರು ಮಳೆ, ಮೋಡದ ವಾತಾವರಣ ಮುಂದುವರಿಕೆ | ಮಾರ್ಚ್ ಮೊದಲ ವಾರದಿಂದ ಬಿಸಿಲು ಹೆಚ್ಚಳ ಸಾಧ್ಯತೆ
February 24, 2026
2:05 PM
by: ಸಾಯಿಶೇಖರ್ ಕರಿಕಳ
ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಭಜನಾ ಮಂಡಳಿ ಉದ್ಘಾಟನೆ
February 24, 2026
6:51 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror