ವಿಶ್ವ ಜಲದಿನ ಆಚರಣೆ ಹಿನ್ನೆಲೆಯಲ್ಲಿ ‘ ಜಲಶಕ್ತಿ ಅಭಿಯಾನ; ಮಳೆ ನೀರಿನ ಸಂಗ್ರಹ – 2025 ‘ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಸಿ.ಆರ್. ಪಾಟೀಲ್ ಹರಿಯಾಣದ ಪಂಚಕುಲದಲ್ಲಿ ಚಾಲನೆ ನೀಡಿದರು. ನೀರಿನ ಸಂರಕ್ಷಣೆಯ ಪ್ರಾಮುಖ್ಯತೆ, ಮಳೆ ನೀರು ಸಂಗ್ರಹ, ಅಂತರ್ಜಲ ಮರುಪೂರಣದ ಮಹತ್ವ ಕುರಿತು ಜನಜಾಗೃತಿ ಮೂಡಿಸಲು ಈ ಅಭಿಯಾನವನ್ನು ದೇಶದ ಒಂದು ನೂರ ನಲವತ್ತೆಂಟು ಜಿಲ್ಲೆಗಳಲ್ಲಿ ಆಯೋಜಿಸಲಾಗಿದೆ. ಇದೇ ವೇಳೆ ಸಚಿವರು, ‘ ಜಲ – ಅರಣ್ಯ – ಜನ: ಒಂದೇ ಪ್ರಾಕೃತಿಕ ಬಾಂಧವ್ಯ ಅಭಿಯಾನ ‘ಕ್ಕೆ ಚಾಲನೆ ನೀಡಿದರು. ನದಿಗಳು, ಜಲ ಮೂಲಗಳು ಮತ್ತು ಅರಣ್ಯ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಈ ಅಭಿಯಾನ ಕೈಗೊಳ್ಳಲಾಗಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel