ಶೇಂಗಾ, ಸೋಯಾಬೀನ್ ಬೆಳೆಗಾರರಿಗೆ ಮಧ್ಯಂತರ ಬೆಳೆ ವಿಮೆ ಬಿಡುಗಡೆಗೆ ಕ್ರಮ | ಪ್ರಹ್ಲಾದ್ ಜೋಶಿ

January 12, 2024
10:34 AM

ಕೇಂದ್ರ ಸರ್ಕಾರ ಕೆಲವೊಂದು ಬೆಳೆಗಳಿಗೆ ಮಾತ್ರ ಬೆಳೆ ವಿಮೆಯನ್ನು ನೀಡುತ್ತಿತ್ತು. ಆದರೆ ಈಗ ಧಾರವಾಡ ಜಿಲ್ಲೆಯಲ್ಲಿ ಶೇಂಗಾ ಮತ್ತು ಸೋಯಾಬಿನ್ (Groundnut, Soybean) ಬೆಳೆಗಳಿಗೂ ಮಧ್ಯಂತರ ಬೆಳೆ ವಿಮೆ (Insurance) ನೀಡುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ. ಧಾರವಾಡ ಸಂಸದರೂ ಆಗಿರುವ ಕೇಂದ್ರ ಸಂಸದೀಯ ಸಚಿವ ಜೋಶಿ ಅವರು ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಡಿದ್ದಾರೆ.

Advertisement

ಪೋಸ್ಟ್‌ನಲ್ಲಿ ಏನಿದೆ?‌ : ಬೆಳೆ ಹಾನಿ ಸಮೀಕ್ಷೆಗೂ ಮೊದಲೇ ಶೇಂಗಾ ಹಾಗೂ ಸೋಯಾಬಿನ್ ಬೆಳೆ ಕಟವು ಆಗಿದ್ದರಿಂದ ಈ ಎರಡೂ ಬೆಳೆಗಳನ್ನು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮಧ್ಯಂತರ ಪರಿಹಾರ ಪ್ರಕ್ರಿಯೆಯಿಂದ ವಿಮಾ ಕಂಪನಿ ಕೈ ಬಿಟ್ಟಿತ್ತು.  ಧಾರವಾಡ ಜಿಲ್ಲಾಡಳಿತ ಮಧ್ಯಂತರ ಬೆಳೆ ವಿಮೆ ಪರಿಹಾರಕ್ಕೆ ಸಲ್ಲಿಸಿದ ರಿಪೋರ್ಟ್ ನಲ್ಲಿ ಸೋಯಾಬಿನ್ ಮತ್ತು ಶೇಂಗಾ ಬೆಳೆಗಳನ್ನ ಹೊರತುಪಡಿಸಿ ಮಿಕ್ಕ ಎಲ್ಲಾ ಬೆಳೆಗಳನ್ನು SBI ವಿಮೆ ಕಂಪನಿ ಅಂಗೀಕರಿಸಿ ಮಧ್ಯಂತರ ವಿಮೆ ಹಣ ಬಿಡುಗಡೆ ಮಾಡಿತ್ತು.

ಈ ವಿಚಾರ ಗಮನಕ್ಕೆ ಬರುತ್ತಲೇ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ವಿಮೆ ಕಂಪನಿಯನ್ನು ಸಂಪರ್ಕಿಸಿ, ಸಭೆ ನಡೆಸಿ ಮುಂಗಾರಿನ ಶೇಂಗಾ ಮತ್ತು ಸೋಯಾಬೀನ್ ಬೆಳೆಗಳಿಗೂ ಬೆಳೆ ವಿಮೆ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ. ಎಂದು ಸಚಿವ ಜೋಶಿ ತಿಳಿಸಿದ್ದಾರೆ.   ಈ ಬೆಳೆಗಾರರ ಸಮಸ್ಯೆ ಅರಿತು ಕೇಂದ್ರ ಕೃಷಿ ಸಚಿವ ಅರ್ಜುನ್ ಅವರೊಂದಿಗೂ ಚರ್ಚೆ ನಡೆಸಿ, ಫಸಲ್ ಬಿಮಾ CEO ರಿತೇಶ್ ಚೌಹಾನ್ ಮತ್ತು SBI ವಿಮೆ ಕಂಪನಿಯ ರಾಷ್ಟ್ರೀಯ ಮುಖ್ಯಸ್ಥ ಪಿಯೂಷ್ ಸಿಂಗ್ ಅವರ ಗಮನ ಸೆಳೆದು ಶೇಂಗಾ, ಸೋಯಾಬೀನ್ ಬೆಳೆ ಗಾರರಿಗೂ ಮಧ್ಯಂತರ ಬೆಳೆ ವಿಮೆ ಪರಿಹಾರ ಕೈ ಸೇರುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಜೋಶಿ ಹೇಳಿದ್ದಾರೆ.

ಧಾರವಾಡ ಜಿಲ್ಲೆಯ ಶೇಂಗಾ ಹಾಗೂ ಸೋಯಾಬೀನ್ ಬೆಳೆಗಳಿಗೂ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮಧ್ಯಂತರ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಅತಿ ಶೀಘ್ರದಲ್ಲಿ ಪತ್ರ ತಲುಪಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

– ಅಂತರ್ಜಾಲ ಮಾಹಿತಿ

Union Minister Pralhad Joshi said that steps have been taken to provide interim crop insurance for groundnut and soybean crops in Dharwad district. Union Parliamentary Minister Joshi, who is also a Dharwad MP, has shared information about this in X.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮನೆಯೊಳಗೆ ನುಗ್ಗಿದ ಚಿರತೆ | ಸತತ 5 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ |
April 4, 2025
4:45 PM
by: The Rural Mirror ಸುದ್ದಿಜಾಲ
ರಸ್ತೆ ಸರಕು ಸಾಗಾಣೆಯಲ್ಲೂ ತೀವ್ರ ಏರಿಕೆ  |  ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ
April 4, 2025
2:24 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 04-04-2025 | ಇಂದು ಕೆಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ | ಎ.7 ರಿಂದ ಮಳೆ ಕಡಿಮೆಯಾಗುವ ಲಕ್ಷಣ |
April 4, 2025
1:10 PM
by: ಸಾಯಿಶೇಖರ್ ಕರಿಕಳ
ಅಡಿಕೆಯ ನಾಡಿನಲ್ಲಿ ಉಪಬೆಳೆಯಾಗಿ ತರಕಾರಿ ಕೃಷಿ ಮಾಡಿದ ಯುವಕ
April 4, 2025
8:00 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror

Join Our Group