ಕೇಂದ್ರ ಕೃಷಿ ಕಲ್ಯಾಣ ಖಾತೆ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ದೆಹಲಿಯಲ್ಲಿ ಇಂದು ರೈತರು ಹಾಗೂ ರೈತ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿದರು.…..ಮುಂದೆ ಓದಿ….
ಈ ವೇಳೆ ಶಿವರಾಜ್ ಸಿಂಗ್ ಚೌವ್ಹಾಣ್, ಕೃಷಿಕರು ದೇಶದ ಬೆನ್ನೆಲುಬು ಹಾಗೂ ಭಾರತದ ಆತ್ಮವಾಗಿದ್ದಾರೆ.ಕೃಷಿ ಭಾರತದ ಆರ್ಥಿಕತೆಯ ಬೆನ್ನೆಲುಬು. ರೈತರು ಅದರ ಆತ್ಮ ಮತ್ತು ರೈತರ ಸೇವೆ ನಮಗೆ ದೇವರನ್ನು ಪೂಜಿಸಿದಂತೆ ಎಂದರು. ಸಭೆಯಲ್ಲಿ ಹಲವು ವಿಷಯಗಳನ್ನು ರೈತರು ಪ್ರಸ್ತಾಪಿಸಿದ್ದಾರೆ. ರೈತರಿಂದ ಅನೇಕ ಸಲಹೆಗಳನ್ನು ಸ್ವೀಕರಿಸಿದ್ದೇವೆ, ಈ ಸಲಹೆಗಳನ್ನು ಕೆಲಸ ಮಾಡುವ ಮೂಲಕ ಪರಿಹರಿಸಲು ನಾವು ನಮ್ಮ ಪ್ರಯತ್ನ ಮಾಡುತ್ತೇವೆ ಎಂದರು. ಬೆಳೆ ವಿಮೆ, ಫಸಲ್ ಬಿಮಾ ಯೋಜನೆ, ಬೆಳೆ ಹಾನಿ ಸೇರಿದಂತೆ ರೈತ ಪರ ಕ್ರಮಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು. ಸಂವಾದದಲ್ಲಿ ಕೃಷಿ ಸಚಿವಾಲಯ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ICAR) ಅಧಿಕಾರಿಗಳು ಉಪಸ್ಥಿತರಿದ್ದರು.…..ಮುಂದೆ ಓದಿ….
ಸುಮಾರು 50 ರೈತ ಮುಖಂಡರನ್ನು ಭೇಟಿ ಮಾಡಿದ್ದೇನೆ, ನಾವು ಅವರಿಂದ ಅನೇಕ ಸಲಹೆಗಳನ್ನು ಸ್ವೀಕರಿಸಿದ್ದೇವೆ, ಅವುಗಳಲ್ಲಿ ಕೆಲವು ಬೆಳೆಗಳ ಬೆಲೆಗೆ ಸಂಬಂಧಿಸಿವೆ ಮತ್ತು ಕೆಲವು ಫಸಲ್ ಭೀಮಾ ಯೋಜನೆಯ ಬಗ್ಗೆ ಕೆಲವು ಸಲಹೆಗಳು ಇವೆ. ಕಾಡು ಪ್ರಾಣಿಗಳ ಸಮಸ್ಯೆ ಮತ್ತು ಅವುಗಳಿಂದ ಉಂಟಾಗುವ ನಷ್ಟಗಳ ಬಗ್ಗೆಯೂ ಸಲಹೆ ಇವೆ. ಹೊಸ ಬೆಳೆ ಬಂದಾಗ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬ ಬಗ್ಗೆಯೂ ಹಲವು ಸಲಹೆಗಳು ಬಂದಿವೆ ಎಂದರು.ಅಧಿಕಾರಿಗಳೊಂದಿಗೆ ಕುಳಿತು ಎಲ್ಲಾ ಸಲಹೆಗಳನ್ನು ಗಂಭೀರವಾಗಿ ಮಾತುಕತೆ ನಡೆಸಿ ಸಾಧ್ಯವಿರುವ ಎಲ್ಲವನ್ನೂ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.…..ಮುಂದೆ ಓದಿ….
ತಾಳೆ ಎಣ್ಣೆಯ ಮೇಲಿನ ಆಮದು ಸುಂಕವನ್ನು 27.5% ಕ್ಕೆ ಹೆಚ್ಚಿಸಲಾಗಿದೆ, ಬಾಸ್ಮತಿಯಿಂದ ಕನಿಷ್ಠ ರಫ್ತು ಬೆಲೆಯನ್ನು ತೆಗೆದುಹಾಕಲಾಗಿದೆ, ಈರುಳ್ಳಿ ಮೇಲಿನ ರಫ್ತು ಸುಂಕವನ್ನು 40% ರಿಂದ 20% ಕ್ಕೆ ಇಳಿಸಲಾಗಿದೆ. ಇಂತಹ ಹಲವು ನಿರ್ಧಾರಗಳು ರೈತರ ಮೆಚ್ಚುಗೆಗೆ ಪಾತ್ರವಾಗಿವೆ ಎಂದು ಉಲ್ಲೇಖಿಸಿದರು.
ರೈತರು ತ್ಯಾಜ್ಯಗಳನ್ನು ಸುಡುವ ಪ್ರವೃತಿ ಬಿಡಬೇಕು, ತ್ಯಾಜ್ಯವು ಕೃಷಿ ಬೆಳೆಯ ಸಂಪತ್ತಾಗುತ್ತದೆ ಅದನ್ನು ಸದುಪಯೋಗ ಪಡಿಸಿಕೊಂಡು ಜಾಗೃತಿ ಮೂಡಿಸುವ ಮೂಲಕ ರೈತರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇವೆ ಎಂದು ಸಚಿವರು ರೈತರ ಸಂವಾದಲ್ಲಿ ಹೇಳಿದರು.…..ಮುಂದೆ ಓದಿ….
(ಡಿಡಿ)
Union Minister for Agriculture, Farmers’ Welfare and Rural Development Shri Shivraj Singh Chouhan started a series of dialogues with farmers and farmers’ organizations in Delhi today. Chouhan stated, as I have said before, agriculture is the backbone of India’s economy and farmers are its soul and serving farmers is like worshiping God for us.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…