Advertisement
MIRROR FOCUS

ರೈತ ಸಂಘಟನೆಗಳೊಂದಿಗೆ ಸಮಾಲೋಚನೆ | ಬೆಳೆ ವಿಮೆ, ಫಸಲ್ ಬಿಮಾ ಯೋಜನೆ, ಬೆಳೆ ಹಾನಿ ಬಗ್ಗೆ ಚರ್ಚೆ | ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್  ಭಾಗಿ

Share

ಕೇಂದ್ರ ಕೃಷಿ ಕಲ್ಯಾಣ ಖಾತೆ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ದೆಹಲಿಯಲ್ಲಿ ಇಂದು ರೈತರು ಹಾಗೂ ರೈತ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿದರು.…..ಮುಂದೆ ಓದಿ….

ಈ ವೇಳೆ ಶಿವರಾಜ್ ಸಿಂಗ್ ಚೌವ್ಹಾಣ್, ಕೃಷಿಕರು ದೇಶದ ಬೆನ್ನೆಲುಬು ಹಾಗೂ ಭಾರತದ ಆತ್ಮವಾಗಿದ್ದಾರೆ.ಕೃಷಿ ಭಾರತದ ಆರ್ಥಿಕತೆಯ ಬೆನ್ನೆಲುಬು. ರೈತರು ಅದರ ಆತ್ಮ ಮತ್ತು ರೈತರ ಸೇವೆ ನಮಗೆ ದೇವರನ್ನು ಪೂಜಿಸಿದಂತೆ ಎಂದರು. ಸಭೆಯಲ್ಲಿ ಹಲವು ವಿಷಯಗಳನ್ನು ರೈತರು ಪ್ರಸ್ತಾಪಿಸಿದ್ದಾರೆ. ರೈತರಿಂದ ಅನೇಕ ಸಲಹೆಗಳನ್ನು ಸ್ವೀಕರಿಸಿದ್ದೇವೆ, ಈ ಸಲಹೆಗಳನ್ನು ಕೆಲಸ ಮಾಡುವ ಮೂಲಕ ಪರಿಹರಿಸಲು ನಾವು ನಮ್ಮ  ಪ್ರಯತ್ನ ಮಾಡುತ್ತೇವೆ ಎಂದರು. ಬೆಳೆ ವಿಮೆ, ಫಸಲ್ ಬಿಮಾ ಯೋಜನೆ, ಬೆಳೆ ಹಾನಿ ಸೇರಿದಂತೆ ರೈತ ಪರ ಕ್ರಮಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು. ಸಂವಾದದಲ್ಲಿ ಕೃಷಿ ಸಚಿವಾಲಯ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ICAR) ಅಧಿಕಾರಿಗಳು  ಉಪಸ್ಥಿತರಿದ್ದರು.…..ಮುಂದೆ ಓದಿ….

ಸುಮಾರು 50 ರೈತ ಮುಖಂಡರನ್ನು ಭೇಟಿ ಮಾಡಿದ್ದೇನೆ, ನಾವು ಅವರಿಂದ ಅನೇಕ ಸಲಹೆಗಳನ್ನು ಸ್ವೀಕರಿಸಿದ್ದೇವೆ, ಅವುಗಳಲ್ಲಿ ಕೆಲವು ಬೆಳೆಗಳ ಬೆಲೆಗೆ ಸಂಬಂಧಿಸಿವೆ ಮತ್ತು ಕೆಲವು ಫಸಲ್ ಭೀಮಾ ಯೋಜನೆಯ ಬಗ್ಗೆ ಕೆಲವು ಸಲಹೆಗಳು ಇವೆ. ಕಾಡು ಪ್ರಾಣಿಗಳ ಸಮಸ್ಯೆ ಮತ್ತು ಅವುಗಳಿಂದ ಉಂಟಾಗುವ ನಷ್ಟಗಳ ಬಗ್ಗೆಯೂ ಸಲಹೆ ಇವೆ. ಹೊಸ ಬೆಳೆ ಬಂದಾಗ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬ ಬಗ್ಗೆಯೂ ಹಲವು ಸಲಹೆಗಳು ಬಂದಿವೆ ಎಂದರು.ಅಧಿಕಾರಿಗಳೊಂದಿಗೆ ಕುಳಿತು ಎಲ್ಲಾ ಸಲಹೆಗಳನ್ನು ಗಂಭೀರವಾಗಿ ಮಾತುಕತೆ ನಡೆಸಿ  ಸಾಧ್ಯವಿರುವ ಎಲ್ಲವನ್ನೂ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.…..ಮುಂದೆ ಓದಿ….

ತಾಳೆ ಎಣ್ಣೆಯ ಮೇಲಿನ ಆಮದು ಸುಂಕವನ್ನು 27.5% ಕ್ಕೆ ಹೆಚ್ಚಿಸಲಾಗಿದೆ, ಬಾಸ್ಮತಿಯಿಂದ ಕನಿಷ್ಠ ರಫ್ತು ಬೆಲೆಯನ್ನು ತೆಗೆದುಹಾಕಲಾಗಿದೆ, ಈರುಳ್ಳಿ ಮೇಲಿನ ರಫ್ತು ಸುಂಕವನ್ನು 40% ರಿಂದ 20% ಕ್ಕೆ ಇಳಿಸಲಾಗಿದೆ. ಇಂತಹ ಹಲವು ನಿರ್ಧಾರಗಳು ರೈತರ ಮೆಚ್ಚುಗೆಗೆ ಪಾತ್ರವಾಗಿವೆ ಎಂದು ಉಲ್ಲೇಖಿಸಿದರು.

ರೈತರು ತ್ಯಾಜ್ಯಗಳನ್ನು ಸುಡುವ ಪ್ರವೃತಿ ಬಿಡಬೇಕು, ತ್ಯಾಜ್ಯವು ಕೃಷಿ ಬೆಳೆಯ  ಸಂಪತ್ತಾಗುತ್ತದೆ  ಅದನ್ನು ಸದುಪಯೋಗ ಪಡಿಸಿಕೊಂಡು ಜಾಗೃತಿ ಮೂಡಿಸುವ ಮೂಲಕ ರೈತರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇವೆ ಎಂದು ಸಚಿವರು ರೈತರ ಸಂವಾದಲ್ಲಿ ಹೇಳಿದರು.…..ಮುಂದೆ ಓದಿ….

(ಡಿಡಿ)

Union Minister for Agriculture, Farmers’ Welfare and Rural Development Shri Shivraj Singh Chouhan started a series of dialogues with farmers and farmers’ organizations in Delhi today. Chouhan stated, as I have said before, agriculture is the backbone of India’s economy and farmers are its soul and serving farmers is like worshiping God for us.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬರಪೀಡಿತ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿಗೆ 12 ತಿಂಗಳ ವಿಸ್ತರಣೆ

ಬರಪೀಡಿತ ಎಂದು ಘೋಷಿಸಿರುವ ರಾಜ್ಯದ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿ ಅವಧಿಯನ್ನು…

2 hours ago

25 ಸಾವಿರ ವರ್ಷಗಳ ಹಿಂದೆಯೇ ಅಡಿಕೆ ಬಳಕೆ ? ಪುರಾತನ ಹಲ್ಲುಗಳಲ್ಲಿ ಸಿಕ್ಕಿದ ಸುಳಿವು

ಇಂಡೋನೇಷ್ಯಾದ ಸುಲವೆಸಿಯಲ್ಲಿ ಪತ್ತೆಯಾದ ಸುಮಾರು 25,000 ವರ್ಷಗಳ ಹಿಂದಿನ ಮಾನವ ಹಲ್ಲುಗಳಲ್ಲಿ ಅಡಿಕೆ…

10 hours ago

“ಹನುಮಾನ್ ಅಂಶ್‌” ಬಾಕ್ಸ್ ಆಫೀಸ್ ದಾಖಲೆ – 40ನೇ ದಿನವೂ ₹8.25 ಕೋಟಿ – ಪಠಾಣ್‌, ಛಾವಾ, ಉರಿ ದಾಖಲೆ ಮೀರಿಸಿದ ಸಿನಿಮಾ

‘ಹನುಮಾನ್ ಅಂಶ್’ ಸಿನಿಮಾ 40ನೇ ದಿನವೂ ₹8.25 ಕೋಟಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ…

12 hours ago

ಮುಂಗಾರು ಹಿಂದೆ ಸರಿಯಲು ಸಜ್ಜು – ಸೆ.17ರಿಂದ ಪಶ್ಚಿಮ ರಾಜಸ್ಥಾನದಲ್ಲಿ ಆರಂಭವಾಗುವ ಸಾಧ್ಯತೆ

ನೈಋತ್ಯ ಮುಂಗಾರು ಹಿಂದೆ ಸರಿಯಲು ಪೂರಕ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ಸೆ.17ರ ವೇಳೆಗೆ ಪಶ್ಚಿಮ…

17 hours ago

ಹವಾಮಾನ ವರದಿ | 16-09-2026 | ಕರಾವಳಿಯಲ್ಲಿ ಸೆಖೆ, ಸಂಜೆ ಅಲ್ಲಲ್ಲಿ ಮಳೆ ನಿರೀಕ್ಷೆ

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.17ರಂದು ಸಂಜೆ ಹಾಗೂ ರಾತ್ರಿ ಅಲ್ಲಲ್ಲಿ ಸಾಮಾನ್ಯ ಮಳೆಯ…

19 hours ago

ಕೋಲಾರ ಸಮೀಪ 10 ಟನ್ ಸಿಂಥೆಟಿಕ್‌ ಅಡಿಕೆ ವಶ…!?

ಕೋಲಾರದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಸುಮಾರು 10 ಟನ್ ಸಿಂಥೆಟಿಕ್‌ ಅಡಿಕೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ…

1 day ago