ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು | ಯುವ ಕೃಷಿ ವಿಜ್ಞಾನಿಗಳನ್ನು ಹುಟ್ಟು ಹಾಕಿದ ಕೃಷಿ ವಿಶ್ವವಿದ್ಯಾಲಯ |

June 4, 2024
10:40 AM

ಕಲ್ಯಾಣ-ಕರ್ನಾಟಕ(Kalyana Karnataka) ಪ್ರಾಂತ್ಯ ಭಾಗವು ತನ್ನದೇ ಆದ ಕೃಷಿ(Agriculture) ಮತ್ತು ಹವಾಮಾನ ವೈವಿಧ್ಯತೆಗಳನ್ನು(Climate change) ಹೊಂದಿದೆ. ಕಲ್ಯಾಣ-ಕರ್ನಾಟಕ ಪ್ರಾಂತ್ಯದ ಆರು ಜಿಲ್ಲೆಗಳಾದ ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳನ್ನೊಳಗೊಂಡ ಈ ಭೂಭಾಗವು 12 ಲಕ್ಷ ಹೆಕ್ಟೇರುಗಳಷ್ಟು ಪ್ರದೇಶಕ್ಕೆ ತುಂಗಭದ್ರ, ಕೃಷ್ಣ, ಕಾರಂಜ, ಮುಲ್ಲಮಾರಿ, ಹಿರೇಹಳ್ಳ, ಬೆಣ್ಣೆ ತೊರೆ ಮತ್ತಿತರ ನೀರಾವರಿ ಯೋಜನೆಗಳು(Irrigation Scheme) ನೀರುಣಿಸುತ್ತಿವೆ.

Advertisement
Advertisement
Advertisement

ರಾಯಚೂರು ಕೃಷಿ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಕುರಿತು ತಜ್ಞರನ್ನೊಳಗೊಂಡ ಸಮಿತಿಯು ಕೂಲಂಕುಷ ಅಧ್ಯಯನದ ನಂತರ 2008-09ರಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆಗೆ ಅನುಮೋದನೆ ನೀಡಿತು. ಹೀಗೆ ಹೊಸ ಕೃಷಿ ವಿಶ್ವವಿದ್ಯಾಲಯವನ್ನು “ ಹಸಿರೇ ಉಸಿರು ” ಎಂಬ ಘೋಷಣೆಯ ಮೂಲಕ ಸ್ಥಾಪಿಸುವ ಕನಸು 22 ನವೆಂಬರ್, 2008ರಂದು ನನಸಾಯಿತು. ಅಲ್ಲಿಯವರೆಗೂ ಈ ವಿಶ್ವವಿದ್ಯಾಲಯವು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆಡಳಿತ ವ್ಯಾಪ್ತಿಗೆ ಒಳಪಟ್ಟಿತ್ತು.

Advertisement

“ ಬಿಸಿಲೂರು ” ಎಂದು ಹೆಸರಾಗಿರುವ ರಾಯಚೂರು ಜಿಲ್ಲೆ ಇಂದು ಕರ್ನಾಟಕ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲೊಂದು, ಹಿಂದೆ ಮೌರ್ಯರು, ಕಾಕತೀಯರು, ವಿಜಯನಗರದ ಅರಸರು, ಬಹಮನಿ ಸುಲ್ತಾನರು ಮತ್ತು ಹೈದರಾಬಾದ್ ನಿಜಾಮರು ಆಳಿದ ನಾಡು, ಅಂದು ಕಲ್ಯಾಣ ಕರ್ನಾಟಕದ ಪ್ರಮುಖ ಜಿಲ್ಲೆಯಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮೆರೆದಿದ್ದ ನಾಡು, ಇಂದು ಕಲ್ಯಾಣ-ಕರ್ನಾಟಕ ಪ್ರದೇಶದ ಹಿಂದುಳಿದ ಜಿಲ್ಲೆಯೆಂದು ಹಣೆಪಟ್ಟಿಯಿಂದ 371(ಜೆ) ಯನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದೆ. ಇದರ ಒಟ್ಟು ವಿಸ್ತೀರ್ಣ 44,138 ಚದರ ಕಿಲೋಮೀಟರಗಳು. ಜಿಲ್ಲೆಯಲ್ಲಿ ಕೃಷ್ಣ, ತುಂಗಭದ್ರೆÀ್ರಯರ ಕೃಪೆಯಿಂದ ಭತ್ತದ ಪೈರು ಭೂ-ರಮೆಗೆ ಹಸಿರು ಹೊದಿಸಿದಂತೆ ಸದಾ ಕಂಗೊಳಿಸುತ್ತಿರುತ್ತಾಳೆ. ರಾಯಚೂರು ಅರೇ ಉಷ್ಣವಲಯದ ಪ್ರದೇಶದಲ್ಲಿ ಬರುತ್ತಿದ್ದು, ಭೌಗೋಳಿಕವಾಗಿ ಸಮುದ್ರ ಮಟ್ಟದಿಂದ 389.5 ಮೀಟರ್ ಎತ್ತರದಲ್ಲಿದ್ದು, 16-120 ಉತ್ತರ ಅಕ್ಷಾಂಶ ಹಾಗೂ 76.240 ರೇಖಾಂಶಗಳನ್ನು ಹೊಂದಿದ್ದು, ಕರ್ನಾಟಕ ರಾಜ್ಯದ ಉತ್ತರ ಪೂರ್ವ ಒಣಪ್ರದೇಶ ಕೃಷಿ ವಲಯದಲ್ಲಿದೆ. ಜಿಲ್ಲೆಯ ಸರಾಸರಿ ಮಳೆಯ ಪ್ರಮಾಣ 620 ಮಿ.ಮಿ. ಜಿಲ್ಲೆಯ ಭೂಗರ್ಭವು ಗ್ರಾನೈಟಿಕ್ ಮುತ್ತು ಗ್ಲೈಸಿನ್‍ಗಳಿಂದ ಕೂಡಿದ್ದು, ಬಹಳಷ್ಟು ವ್ಯಾಪ್ತಿಯ ಆಳವಾದ ಕಪ್ಪು ಭೂಮಿಯಿಂದ, ಉಳಿದ ಭಾಗ ಕೆಂಪು ಭೂಮಿಯಿಂದ ಕೂಡಿರುತ್ತದೆ.

ಕೊಠಾರಿ ಕಮಿಶನ್ ಶಿಫಾರಸ್ಸಿನಂತೆ, ಕರ್ನಾಟಕ ಸರ್ಕಾರವು ಕೃಷಿ ಇಂಜನಿಯರಿಂಗ್ ಡಿಪ್ಲೋಮಾ ಕೋರ್ಸನ್ನು ಸನ್ 1969ರಲ್ಲಿ ರಾಯಚೂರಿನಲ್ಲಿ ಸ್ಥಾಪಿಸಲು ಅನುಮತಿ ನೀಡಿತು. ಅಂದಿನ ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನ ಆಡಳಿತಾತ್ಮಕ ಅಧೀನದಲ್ಲಿದ್ದ ಈ ಕೋರ್ಸ ದೇಶದಲ್ಲಿಯೇ ಪ್ರಥಮ ಪ್ರಯೋಗವಾಗಿತ್ತು. ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಕೌಶಲ್ಯಯುತ ತಂತ್ರಜ್ಞರನ್ನಾಗಿ ಮಾಡಿ ಜೀವನೋಪಾಯಕ್ಕಾಗಿ ದಾರಿ ಮಾಡಿಕೊಡುವುದೇ ಇದರ ಉದ್ದೇಶವಾಗಿತ್ತು. ನಂತರ 1986ರಲ್ಲಿ ಕೃಷಿ ವಿಶ್ವವಿದ್ಯಾಲಯದ ಧಾರವಾಡದ ಅಧೀನದಲ್ಲಿ ಬಂದ ಈ ಸಂಸ್ಥೆ, ಔದ್ಯೋಗಿಕ ರಂಗದಲ್ಲಿ ಉಂಟಾಗುವ ಬದಲಾವಣೆಗಳಿಗೆ ತಕ್ಕಂತೆ ಕೌಶಲ್ಯಯುತ ಪದವೀಧರರನ್ನು ತಯಾರು ಮಾಡುವ ಉದ್ದೇಶದಿಂದ 1987ರಲ್ಲಿ (ಕೃಷಿ ಇಂಜಿನಿಯರಿಂಗ್ ಡಿಪ್ಲೋಮಾ ಕೋರ್ಸನ್ನು ನಾಲ್ಕು ವರ್ಷದ ಬಿ.ಟೆಕ್ (ಕೃಷಿ ಇಂಜಿನಿಯರಿಂಗ್) ಪದವಿಗೆ ಮೇಲ್ದರ್ಜೆಗೇರಿಸಿ ಅನುಕ್ರಮವಾಗಿ ಎಲ್ಲ ಸೌಲಭ್ಯಗಳನ್ನು ಒಂದೊಂದಾಗಿ ರಚಿಸಲಾಯಿತು. ಸದ್ಯ ಇದು ದೇಶದಲ್ಲಿಯೇ ಒಂದು ಉತ್ತಮ ದರ್ಜೆಯ ಕೃಷಿ ತಾಂತ್ರಿಕ ಮಹಾವಿದ್ಯಾಲಯವೆಂದು ಹೆಗ್ಗಳಿಗೆ ಗಳಿಸಿಕೊಂಡಿದೆ. ಕೃಷಿ ಯಂತ್ರೋಪಕರಣ ಮತ್ತು ಶಕ್ತಿ ತಾಂತ್ರಿಕತೆ, ಮಣ್ಣು ಮತ್ತು ನೀರು ಸಂರಕ್ಷಣೆ ತಾಂತ್ರಿಕತೆ, ಸಂಸ್ಕರಣೆ ಮತ್ತು ಆಹಾರ ತಂತ್ರಜ್ಞಾನಗಳನ್ನೊಳಗೊಂಡ ಮೂರು ವಿಭಾಗಗಳಲ್ಲಿ ಸ್ನಾತಕೋತ್ತರ ಹಾಗೂ ಪಿ.ಹೆಚ್.ಡಿ ಪದವಿಯನ್ನು ಪ್ರಾರಂಭಿಸಲಾಗಿದ್ದು, ಅನೇಕ ರೈತೋಪಯೋಗಿ ತಂತ್ರಜ್ಞಾನಗಳು ವಿವಿಧ ವಿಭಾಗಗಳಿಂದ ಅನಾವರಣಗೊಂಡವು.

Advertisement

1984ರಲ್ಲಿ ಪ್ರಾರಂಭವಾದ ಕೃಷಿ ಮಹಾವಿದ್ಯಾಲಯ, ರಾಯಚೂರು, ISO9001:2008 ಪ್ರಮಾಣ ಪತ್ರದೊಂದಿಗೆ ಗುರುತಿಸಿದ್ದು, ಈ ಮಹಾವಿದ್ಯಾಲಯದಿಂದ ಅನೇಕ ವಿದ್ಯಾರ್ಥಿಗಳು ಭಾರತೀಯ ಆಡಳಿತ ಸೇವೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಇದರ ಗುಣಮಟ್ಟಕ್ಕೆ ಸಾಕ್ಷಿ. ಈ ವಿಶ್ವವಿದ್ಯಾಲಯವು ಪ್ರಸ್ತುತ ನಾಲ್ಕು ಮಹಾವಿದ್ಯಾಲಯಗಳನ್ನು ಒಳಗೊಂಡಿದ್ದು, ಭೀಮರಾಯನಗುಡಿ ಮತ್ತು ಕಲಬುರಗಿಯಲ್ಲಿಯೂ ಸಹ ಕೃಷಿ ಮಹಾವಿದ್ಯಾಲಯಗಳು ಪ್ರಾರಂಭಗೊಂಡು ಸರ್ವತೋಮುಖ ಅಭಿವೃದ್ಧಿಗೆ ಕಾರಣೀಭೂತವಾಗಿವೆ. ರಾಯಚೂರು ಮುಖ್ಯ ಆವರಣದಲ್ಲಿ ವಿವಿಧ ವಿಭಾಗಗಳಲ್ಲಿ 16 ಸ್ನಾತಕೋತ್ತರ ಪದವಿ ಮತ್ತು 15 ಪಿ.ಎಚ್.ಡಿ ಪದವಿ ಕಾರ್ಯಕ್ರಮಗಳು ನಡೆಯುತ್ತಿವೆ. ಕೃಷಿ ಮತ್ತು ಕೃಷಿ ಇಂಜಿನಿಯರಿಂಗ್‍ನಲ್ಲಿ ಅನೇಕ ವಿದ್ಯಾರ್ಥಿಗಳು ಭಾರತೀಯ ಕೃಷಿ ಅನುಸಂಧಾನ ಪರಷತ್ ಶಿಷ್ಯವೇತನ ಪಡೆದಿರುತ್ತಾರೆ. ವಿವಿಧ ವಿಭಾಗಗಳಿಗೆ ವಿದ್ಯಾರ್ಥಿ ಮತ್ತು ಶಿಕ್ಷಕರ ಸಂಶೋಧನೆಗೆ ಉಪಯೋಗವಾಗುವ ಹೈ-ಟೆಕ್ ಉಪಕರಣಗಳನ್ನು ಖರೀದಿಸಲಾಗಿದೆ. ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆ ಕೌಶಲ್ಯಭಿವೃದ್ಧಿ ಕಾರ್ಯಕ್ರಮಗಳು ಅವರಲ್ಲಿ ಆತ್ಮವಿಶ್ವಾಸ ಮೂಡಿಸಿದೆ.

ವಿಷಯ ಪ್ರಸ್ತುತಿ: ಡಾ.ಶಿವಸೋಮನಾಥ ಕಸ್ತೂರಿ ರಮೇಶ
ನಿರ್ವಹಣಾ ಮುಖ್ಯಸ್ಥರು-ಪ್ರಾದೇಶಿಕ ಉಸ್ತುವಾರಿ ಅಧಿಕಾರಿಗಳು
(ಮಣ್ಣುಪರೀಕ್ಷೆ & ಮಣ್ಣುಆರೋಗ್ಯ ನಿರ್ವಹಣೆ)
ರಾಷ್ಟ್ರೀಯ ಸುಸ್ಥಿರ ಕೃಷಿ ಮತ್ತು ಮಣ್ಣು ಆರೋಗ್ಯ ನಿರ್ವಹಣೆ, ಸಂಕೇಶ್ವರ ವಿಭಾಗ.
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |
January 19, 2025
11:01 AM
by: ಸಾಯಿಶೇಖರ್ ಕರಿಕಳ
ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ
ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |
January 19, 2025
7:03 AM
by: The Rural Mirror ಸುದ್ದಿಜಾಲ
ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror