ಮಳೆಯಾದರೂ ಕಡಿಮೆಯಾಗದ ತಾಪಮಾನ…! | ಭಾರತದಲ್ಲಿ ದಾಖಲೆ ಬರೆದ ಹೀಟ್‌ವೇವ್…‌ | ಹದಗೆಡುತ್ತಿರುವ ಹವಾಮಾನ ಬದಲಾವಣೆ |

June 7, 2024
7:44 PM
ಮಳೆಯಾದರೂ ವಾತಾವರಣದ ತಾಪಮಾನ ಕಡಿಮೆಯಾಗಿಲ್ಲ. ಮಳೆ ಕಡಿಮೆಯಾಗಿ ಸಣ್ಣ ಬಿಸಿಲು ಬಂದರೆ ಒಮ್ಮೆಲೇ ತಾಪಮಾನ ಏರಿಕೆಯಾಗುತ್ತಿದೆ. ಹೀಗಾಗಿ ಕೃಷಿಗೆ ಸಂಕಷ್ಟವಾಗುತ್ತಿದೆ. ಇಷ್ಟೇ ಅಲ್ಲ, ಭಾರತದಾದ್ಯಂತ ಈ ಹವಾಮಾನ ವೈಪರೀತ್ಯ ಹೆಚ್ಚಾಗಿ ಕಂಡುಬರುತ್ತಿದೆ. ಈ ಬಗ್ಗೆ ಗಂಭೀರವಾದ ಚಿಂತನೆ ಅಗತ್ಯವಿದೆ.

ಕಳೆದ 15 ದಿನಗಳಿಂದ ಕರ್ನಾಟಕದ ವಿವಿದೆಡೆ ಮಳೆಯಾಗುತ್ತಿದೆ. ಹೀಗಾದರೂ ವಾತಾವರಣದ ತಾಪಮಾನ ಕಡಿಮೆಯಾಗಿಲ್ಲ. ಮಳೆ ಕಡಿಮೆಯಾಗಿ ಸಣ್ಣ ಬಿಸಿಲು ಬಂದರೆ ಒಮ್ಮೆಲೇ ತಾಪಮಾನ ಏರಿಕೆಯಾಗುತ್ತಿದೆ. ಮಳೆ ಬಂದಾಗ 26-27 ಡಿಗ್ರಿಗೆ ಇಳಿಯುವ ವಾತಾವರಣದ ತಾಪಮಾನ , ಬಿಸಿಲು ಬಂದ ತಕ್ಷಣವೇ 34-35 ಡಿಗ್ರಿಗೆ ಏರಿಕೆಯಾಗುತ್ತಿದೆ. ಹೀಗಾಗಿ ಬಹುತೇಕ ಕೃಷಿ ಫಸಲಿಗೆ ಸಂಕಷ್ಟವಾಗಿದೆ.  ಭಾರತದಲ್ಲಿ ಈ ಬಾರಿ ಹೀಟ್‌ ವೇವ್‌ ದಾಖಲೆ ಬರೆದಿದೆ.  ಈ ಬಾರಿ ಸಾಮಾನ್ಯ ಬೇಸಗೆಗಿಂತ 5-9 ಡಿಗ್ರಿ ಅಧಿಕ ತಾಪಮಾನ ಕಂಡಿದೆ. ದೆಹಲಿ ಅಧಿಕ ತಾಪಮಾನದ ಕಾರಣದಿಂದ ನಲುಗಿ ಹೋಗಿದೆ.

Advertisement
Advertisement

ದೇಶದಲ್ಲಿ ಈ ಬಾರಿ ಹಲವು ಭಾಗಗಳು 45 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಿನ ತಾಪ ಕಂಡುಬಂದಿದೆ. ದೆಹಲಿಯಲ್ಲಿ 50 ಡಿಗ್ರಿಗಿಂತಲೂ ಅಧಿಕ ತಾಪಮಾನ ಕಂಡುಬಂದಿತ್ತು. ದೇಶದೆಲ್ಲೆಡೆಯೂ ನೀರಿಗಾಗಿ ಹಾಹಾಕಾರ ಈ ಬಾರಿ ಕಂಡುಬಂದಿತು. ದೆಹಲಿಯಲ್ಲಿ 52 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನವು ವರದಿಯಾಗಿದೆ, ಆದರೆ ಇದನ್ನು ಇನ್ನೂ ಮೌಲ್ಯಮಾಪನ ಮಾಡಲಾಗುತ್ತಿದೆ ಹಾಗೂ ಮರುಪರಿಶೀಲಿಸಲಾಗುತ್ತಿದೆ. 2024 ರ ಮೇ 27 ರಂದು ತಾಪಮಾನವು 49.9 ಡಿಗ್ರಿ ಸೆಲ್ಸಿಯಸ್ ತಲುಪುವುದರೊಂದಿಗೆ 2002 ರಿಂದ ದೆಹಲಿಯ ನಗರದ 49.2 ಡಿಗ್ರಿ ಸೆಲ್ಸಿಯಸ್ ದಾಖಲೆಯನ್ನು ಮುರಿದಿದೆ.

ಗ್ರಾಮೀಣ ಭಾಗದಲ್ಲೂ ಈ ಪರಿಣಾಮ ಕಡಿಮೆ ಇರಲಿಲ್ಲ. ಈ ವರ್ಷ ಅಧಿಕ ಪ್ರಮಾಣದ ತಾಪಮಾನ ಕಂಡುಬಂದಿತ್ತು. ಪರಿಣಾಮವಾಗಿ ನೀರಿನ ಕೊರತೆ ಎಲ್ಲೆಡೆಯೂ ಇತ್ತು. ಈ ಕಾರಣದಿಂದ ಕೃಷಿಗೆ ಈ ಬಾರಿ ದೇಶದಲ್ಲಿ ಅಧಿಕ ಪ್ರಮಾಣದ ಹೊಡೆತ ಬಿದ್ದಿದೆ. ಹೀಗಾಗಿ ಕೃಷಿ ಇಳುವರಿಯ ಮೇಲೆ ದೇಶದಲ್ಲಿ ಗಂಭೀರವಾದ ಹೊಡೆತ ಕಂಡುಬಂದಿದೆ.

ಹವಾಮಾನ ಬದಲಾವಣೆಯು ಮಾನವ ಹಸ್ತಕ್ಷೇಪದಿಂದ ಉಲ್ಬಣಗೊಳ್ಳುತ್ತಿದೆ. ಹೀಟ್‌ ವೇವ್‌ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಪ್ರಪಂಚದ ಹಲವು ಕಡೆಗಳಲ್ಲಿ ಹವಾಮಾನ ಸಂಕಷ್ಟ ತರಲಿದೆ ಹಾಗೂ  ಹೇಗೆ ಹವಾಮಾನ ಬದಲಾಗುತ್ತಿವೆ ಎಂಬುದನ್ನು ಅಧ್ಯಯನ ಮಾಡುವ ವಿಜ್ಞಾನಿಗಳು ಹೇಳಿದ್ದಾರೆ.

ಲಂಡನ್‌ನ ಇಂಪೀರಿಯಲ್ ಕಾಲೇಜ್ ಮತ್ತು ವರ್ಲ್ಡ್ ವೆದರ್ ಅಟ್ರಿಬ್ಯೂಷನ್‌ನ ನಿರ್ದೇಶಕ ಡಾ ಫ್ರೆಡ್ರಿಕ್ ಒಟ್ಟೊ ಅವರ ಪ್ರಕಾರ, ಈ ಹವಾಮಾನ ಬದಲಾವಣೆಯು ನೈಸರ್ಗಿಕ ವಿಕೋಲವಲ್ಲ, ಮುಖ್ಯವಾಗಿ ಕಲ್ಲಿದ್ದಲು, ತೈಲ ಮತ್ತು ಅನಿಲವನ್ನು ಸುಡುವುದರಿಂದ ಮತ್ತು ಅರಣ್ಯನಾಶದಿಂದ ಉಂಟಾಗುವ ಹವಾಮಾನ ಬದಲಾವಣೆಯಾಗಿದೆ. ಭಾರತವು ಅತ್ಯಂತ ಗಂಭೀರವಾಗಿ ಈ ಪರಿಸ್ಥಿತಿ ಎದುರಿಸುತ್ತಿದೆ. ಈ ಸಮಸ್ಯೆಯನ್ನು ನಿಯಂತ್ರಣ ಮಾಡದೇ ಇದ್ದರೆ, ಇನ್ನಷ್ಟು ಭಯಾನಕ ಹೀಟ್‌ವೇವ್ ಹೆಚ್ಚು ಹೆಚ್ಚು ಸಂಭವಿಸುತ್ತದೆ. ಶಾಖವು ಉಲ್ಬಣಗೊಳ್ಳುತ್ತದೆ ಮತ್ತು ಸಾವಿನ ಸಂಖ್ಯೆಯು ವೇಗವಾಗಿ ಏರುತ್ತಲೇ ಇರುತ್ತದೆ ಎಂದು ಎಚ್ಚರಿಸಿದ್ದಾರೆ.

Advertisement

ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಾಯುಮಂಡಲದ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ  ಡಾ ಕೃಷ್ಣ ಅಚ್ಯುತ ರಾವ್ ಅವರು, ಏರುತ್ತಿರುವ ಜಾಗತಿಕ ಸರಾಸರಿ ತಾಪಮಾನವನ್ನು ನಿಯಂತ್ರಿಸಲು ಹೊಂದಾಣಿಕೆಯ ಕ್ರಮಗಳನ್ನು ತೆಗೆದುಕೊಳ್ಳುವ ತುರ್ತು ಅಗತ್ಯವಿದೆ, ಇಲ್ಲದಿದ್ದರೆ ಮುಂದಿನ ಸ್ಥಿತಿ ಅಪಾಯಕಾರಿಯಾಗಿದೆ ಎಂದು ಎಚ್ಚರಿಸಿದ್ದಾರೆ.

 

The weather in Karnataka has been quite unpredictable lately, with continuous rain for the past 15 days. Despite the rainfall, the temperature has remained relatively stable. However, once the sun comes out after the rain, the temperature quickly rises. This pattern of fluctuating weather is not uncommon in this region, where the climate can change rapidly. It is important to stay prepared for sudden shifts in temperature and weather conditions when living in Karnataka.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಂಪಾಜೆಯಲ್ಲಿ ಮಹಿಳಾ ಗ್ರಾಮಸಭೆ | ವಿವಿಧ ಮಾಹಿತಿ -ತರಬೇತಿ
May 22, 2025
10:48 PM
by: The Rural Mirror ಸುದ್ದಿಜಾಲ
ಚಿಕ್ಕಮಗಳೂರು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯ
May 22, 2025
10:27 PM
by: ದ ರೂರಲ್ ಮಿರರ್.ಕಾಂ
ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ 4,790 ಕೋಟಿ ಮೊತ್ತದಲ್ಲಿ 33 ಪ್ಯಾಕೇಜ್
May 22, 2025
9:50 PM
by: The Rural Mirror ಸುದ್ದಿಜಾಲ
ರಾಜ್ಯದ ಜೇನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ
May 22, 2025
9:45 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group